ಮುಳ್ಳೇರಿಯ: ಆದೂರು ಕೊಪ್ಪಳದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ವಿ ವಿಜಯಭರತ್ ರೆಡ್ಡಿ ಮೇಲ್ನೋಟದಲ್ಲಿ ಕಾರ್ಯಾಚರಿಸುತ್ತಿರುವ ಪೊಲೀಸರ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ ಮಹಿಳೆ ಸೇರಿದಂತೆ ಐವರನ್ನು ಬಂಧಿಸಿದ್ದಾರೆ. ಇವರ ವಶದಲ್ಲಿದ್ದ 6.18ಗ್ರಾಂ ಎಂಡಿಎಂಎ ವಶಪಡಿಸಿಕೊಳ್ಳಲಾಗಿದೆ. ಮಧೂರು ಪಟ್ಲ ನಿವಾಸಿ ಅಬ್ದುಲ್ ರವೂಫ್, ಶಿರಿಬಾಗಿಲು ನಿವಾಸಿ ಅಬೂಬಕ್ಕರ್ ಸಿದ್ದೀಕ್, ಅಡ್ಕತ್ತಬೈಲು ನಿವಾಸಿ ಅಮೀರ್‍ಮಹಮ್ಮದ್, ಅಡ್ಕತ್ತಬೈಲು ನಿವಾಸಿ ಮಹಮ್ಮದ್ ಮುಹ್‍ತಾಸಿಂ ಹಾಗೂ ಅಣಂಗೂರು ನಿವಾಸಿ ಜಾಸ್ಮಿನ್ ಬಂಧಿತರು.
ಹೊಸವರ್ಷಾಚರಣೆ ಹಿನ್ನೆಲೆಯಲ್ಲಿ ವ್ಯಾಪಕವಾಗಿ ಅನಧಿಕೃತ ಮದ್ಯ, ಮಾದಕ ವಸ್ತು ಜಿಲ್ಲೆಗೆ ರವಾನೆಯಾಗುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ.

