HEALTH TIPS

ಚುನಾವಣಾ ಆಯೋಗದಿಂದ ಮತದಾರರ ಅಹವಾಲು ಪರಿಹಾರಕ್ಕೆ 'ಬುಕ್ ಎ ಕಾಲ್' ಸೌಲಭ್ಯ

ನವದೆಹಲಿ: ಮತದಾರರು ತಮ್ಮ ವ್ಯಾಪ್ತಿಯ ಮತಗಟ್ಟೆ ಅಧಿಕಾರಿಗಳಿಂದ ಮತದಾರರ ಪಟ್ಟಿ ಸಂಬಂಧಿತ ಅಹವಾಲುಗಳಿಗೆ ಸುಲಭವಾಗಿ ಉತ್ತರ ಪಡೆಯುವ ಉದ್ದೇಶದಿಂದ ಕೇಂದ್ರ ಚುನಾವಣಾ ಆಯೋಗ 'ಬುಕ್ ಎ ಕಾಲ್' ಎಂಬ ಹೊಸ ಸೌಲಭ್ಯವನ್ನು ಪರಿಚಯಿಸಿದೆ.

ಕೇಂದ್ರ ಚುನಾವಣಾ ಆಯೋಗದ ಅಧಿಕೃತ ಅಂತರ್ಜಾಲ ತಾಣ ( eci.in)ದಲ್ಲಿನ ವೋಟರ್ ಸರ್ವಿಸ್ ಪೋರ್ಟಲ್‌ನಲ್ಲಿ 'ಬುಕ್ ಎ ಕಾಲ್ ಟು ಬಿಎಲ್‌ಒ' ವಿಭಾಗದ ಅಡಿಯಲ್ಲಿ 'ಕಾಲ್ ರಿಕ್ವೆಸ್ಟ್ ಟು ಬಿಎಲ್‌ಒ' ಮೇಲೆ ಕ್ಲಿಕ್ ಮಾಡಿದರೆ ಮತದಾರರಿಗೆ ಒಂದು ರೆಫರೆನ್ಸ್ ಐಡಿ ಲಭ್ಯವಾಗುತ್ತದೆ.

ಈ ಐಡಿ ಆಧಾರದಲ್ಲಿ ಸಂಬಂಧಿಸಿದ ಮತಗಟ್ಟೆ ಅಧಿಕಾರಿ ತಮ್ಮ ಬಳಿ ದಾಖಲಿಸಿರುವ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ಮತದಾರರ ಅಹವಾಲುಗಳಿಗೆ ಪರಿಹಾರ ಒದಗಿಸಲಿದ್ದಾರೆ.

ಪ್ರಸ್ತುತ ಚಾಲ್ತಿಯಲ್ಲಿರುವ ವಿಶೇಷ ಸಮಗ್ರ ಪರಿಷ್ಕರಣೆ-2025 ಅವಧಿಯಲ್ಲಿ ಈ ಸೌಲಭ್ಯವನ್ನು ಮತದಾರರು ಸದುಪಯೋಗಪಡಿಸಿಕೊಳ್ಳಬಹುದು ಎಂದು ಬೆಂಗಳೂರು ಉತ್ತರ ನಗರ ಪಾಲಿಕೆ ಪ್ರಕಟಣೆ ತಿಳಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries