ಕುಂಬಳೆ: ಕಟ್ಟಡ ಸೋರಿಕೆ ಎಂಬುದು ಇತ್ತೀಚೆಗೆ ಬಹುತೇಕರನ್ನು ಕಾಡುತ್ತಿರುವ ಸಮಸ್ಯೆಯಾಗಿದ್ದು, ಈ ನಿಟ್ಟಿನಲ್ಲಿ ಇದಕ್ಕೆ ಪರಿಹಾರವಾಗಿ ಜರ್ಮನ್ ಕಚ್ಛಾವಸ್ತುಗಳನ್ನು ಬಳಸಿ ತಯಾರಿಸಲಾದ ಬ್ಯಾನ್ವೆಟ್ ಇಂಡಸ್ಟ್ರೀಸ್ ನ ಬಿ.ಐ.ಎಸ್. ಪ್ರಮಾಣೀಕೃತ ಜಲನಿರೋಧಕ ಉತ್ಪನ್ನಗಳ ಅಧಿಕೃತ ಮಾರಾಟ ಮಳಿಗೆ ಬಂದ್ಯೋಡಿನಲ್ಲಿ ಶುಕ್ರವಾರ ಅಧಿಕೃತವಾಗಿ ಆರಂಭಗೊಂಡಿದೆ.
ಶುಕ್ರವಾರ ಬೆಳಿಗ್ಗೆ ನಡೆದ ಸಮಾರಂಭದಲ್ಲಿ ಮಂಜೇಶ್ವರ ಶಾಸಕ ಎ.ಕೆ.ಎಂ.ಅಶ್ರಫ್ ಮಳಿಗೆ ಉದ್ಘಾಟಿಸಿದರು. ಬಿಜೆಪಿ ಜಿಲ್ಲಾಧ್ಯಕ್ಷೆ ಅಶ್ವಿನಿ ಎಂ.ಎಲ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಮಂಗಲ್ಪಾಡಿ ಗ್ರಾ.ಪಂ.ಅಭಿವೃಧ್ದಿ ಸ್ಥಾಯೀ ಸಮಿತಿ ಅಧ್ಯಕ್ಷ ಉಮರ್, ಸದಸ್ಯ ಅಶೋಕ್, ನಿವೃತ್ತ ಜೀವವಿಮಾ ನಿಗಮದ ಅಧಿಕಾರಿ ಗೋಪಾಲಕೃಷ್ಣ ಭಟ್ ಉಪಸ್ಥಿತರಿದ್ದು ಶುಭಹಾರೈಸಿದರು. ಗ್ರಾ.ಪಂ.ಮಾಜಿ ಸದಸ್ಯೆ ಜಯಂತಿ ಶೆಟ್ಟಿ, ಕುಂಬಳೆ ಪಂಚಾಯತಿ ಮಾಜಿ ಸದಸ್ಯ ಪ್ರಶಾಂತ್ ಕುಮಾರ್ ಕೆ. ಉಪಸ್ಥಿತರಿದ್ದರು.
ಬ್ಯಾನ್ವೆಟ್ ಸಂಸ್ಥೆಯ ಅಧಿಕೃತರಾದ ಅಲೆಕ್ಸ್ ಜೇಕಬ್, ಅಮೃತ್ ಹಾಗೂ ಹರಿಕೃಷ್ಣ ಅವರು ಗ್ರಾಹಕರೊಂದಿಗೆ ಸಂವಾದ ನಡೆಸಿ ಉತ್ಪನ್ನಗಳ ಬಗ್ಗೆ ಮಾಹಿತಿ ನೀಡಿದರು. ಮಳಿಗೆಯ ಮ್ಹಾಲಕರಾದ ಅಜಿತ್ ವಿ.ಶರ್ಮ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ನಿವೃತ್ತ ಪ್ರಾಂಶುಪಾಲ ರಾಮಚಂದ್ರ ಭಟ್.ಎಸ್. ವಂದಿಸಿದರು.



.jpg)
