HEALTH TIPS

ಮಾಸ್ಟರ್ ಶೆಫ್ ಜೋಡಿ ಸ್ಪರ್ಧೆಗೆ ಅವನಿ ಶರ್ಮ ಹಾಗೂ ವೇಣು ಶರ್ಮ ಆಯ್ಕೆ-ಜಿಲ್ಲೆಗೆ ಹೆಮ್ಮೆ

ಬದಿಯಡ್ಕ: ಜಿಲ್ಲೆಯ ಅವನಿ ಶರ್ಮ ಹಾಗೂ ವೇಣು ಶರ್ಮ, ಸೋನಿ ಟಿವಿಯ ಈ ಬಾರಿಯ (ಹತ್ತನೇ ಆವೃತ್ತಿ) ಮಾಸ್ಟರ್ ಶೆಫ್ ಸ್ಪರ್ಧೆಯ ಜೋಡಿ ಸ್ಪರ್ಧಿಗಳಾಗಿ ಆಯ್ಕೆಯಾಗಿದ್ದಾರೆ. 

ಕರಾಡ ಬ್ರಾಹ್ಮಣ ಸಮುದಾಯದ ಕುದ್ಕುಳಿ ಮನೆತನದ ಅವನಿ ಶರ್ಮ ಚಿತ್ರಕಲಾ ಪರಿಷತ್‍ನಲ್ಲಿ ಚಿತ್ರಕಲೆಯಲ್ಲಿ ಸ್ನಾತಕೋತ್ತರ ಪದವಿ ಪಡೆದು ಪ್ರಸ್ತುತ ಬೆಂಗಳೂರಿನಲ್ಲಿ ಚಿತ್ರಕಲಾ ಶಿಕ್ಷಕಿಯಾಗಿ, ಕಲಾ ನಿರ್ದೇಶಕಿಯಾಗಿ ಹಾಗೂ ಆಹಾರ ವಿನ್ಯಾಸಕಿಯಾಗಿಯೂ (ಫುಡ್ ಸ್ಟೈಲಿಸ್ಟ್) ಕಾರ್ಯನಿರ್ವಹಿಸುತ್ತಿದ್ದಾರೆ. ಬಾಲ್ಯದಿಂದಲೇ ಅಡುಗೆ ಪಾಕಗಳ ಆವಿಷ್ಕಾರಗಳನ್ನು ಮಾಡುತ್ತಾ, ಹೊಸ-ಹೊಸ ಕಲಾತ್ಮಕವಾದ ಪ್ರಯೋಗಗಳನ್ನು ಮಾಡಿರುತ್ತಾರೆ. 


ಹಲವು ವರ್ಷಗಳಿಂದ *ಕರಾಡ ಸ್ಪೈಸ್ ಬಾಕ್ಸ್* ಹೆಸರಿನಲ್ಲಿ ಸಾಮಾಜಿಕ ಜಾಲತಾಣದ ಮೂಲಕ ವಿವಿಧ ಕರಾಡ ಶೈಲಿಯ ಸಸ್ಯಹಾರಿ ಅಡುಗೆಗಳನ್ನು ಜಗತ್ತಿಗೆ ಪರಿಚಯಿಸುತ್ತಿದ್ದಾರೆ. *ಕರಾಡ ಅಡುಗೆಯನ್ನು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪರಿಚಯಿಸುವುದೇ ಅವನಿ ಶರ್ಮ ಅವರ ಮುಖ್ಯ ಉದ್ದೇಶವಾಗಿದೆ.

ಇವರೊಂದಿಗೆ ಜೋಡಿಯಾಗಿ ಸ್ಪರ್ಧಿಸುತ್ತಿರುವವರು ಅವನಿ ಶರ್ಮರ ತಂದೆಯವರಾದ ವೇಣು ಶರ್ಮ, ಉಪ್ಪಂಗಳ ಮಂಗಳೂರಿನಲ್ಲಿ ಮ್ಯಾನೇಜ್‍ಮೆಂಟ್ ಕನ್ಸಲ್ಟೆಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರಿಬ್ಬರು ಮಾಸ್ಟರ್ ಶೆಫ್ ಸ್ಪರ್ಧೆಯಲ್ಲಿ ಮುನ್ನಡೆಯುತ್ತಿದ್ದಾರೆ. ಒಬ್ಬ ತಂದೆಯಾಗಿ ಮಗಳ ಪಾಕ ಪ್ರಾವೀಣ್ಯದಿಂದ ನನ್ನ ಹೆಸರು ಪ್ರಚಲಿತವಾಗುತ್ತಿರುವುದು ಅಭಿಮಾನದ ಹಾಗೂ ಹೆಮ್ಮೆಯ ವಿಷಯ ಎಂದು ವೇಣು ಶರ್ಮ ಸ್ಪರ್ಧೆಯ ಕುರಿತಂತೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries