HEALTH TIPS

ಸಿಂಗಪುರ ಹೈಕಮಿಷನ್‌ನಿಂದ ಗಣರಾಜ್ಯೋತ್ಸವ: ಭಾರತೀಯ ಕಲಾ ಪ್ರಕಾರಗಳ ಪ್ರದರ್ಶನ

ಸಿಂಗಪುರ: 77ನೇ ಗಣರಾಜ್ಯೋತ್ಸವ‌ದ ಅಂಗವಾಗಿ ಸಿಂಗಪುರದಲ್ಲಿರುವ ಭಾರತೀಯ ಹೈಕಮಿಷನ್ ರಾಜತಾಂತ್ರಿಕರು, ಗಣ್ಯರು ಮತ್ತು ಇತರ ಪ್ರಮುಖ ಅತಿಥಿಗಳಿಗೆ ಸಮಾರಂಭವೊಂದನ್ನು ಆಯೋಜಿಸಿತ್ತು. ಈ ವೇಳೆ ಭಾರತೀಯ ಕಲಾ ಪ್ರಕಾರಗಳ ಶ್ರೀಮಂತಿಕೆ ಮತ್ತು ವೈವಿಧ್ಯದ ಪ್ರದರ್ಶನವಿತ್ತು.

 ಮಂಗಳವಾರ ರಾತ್ರಿ ನಡೆದ ಸಮಾರಂಭದಲ್ಲಿ ಸಿಂಗಪುರದ ಡಿಜಿಟಲ್ ಅಭಿವೃದ್ಧಿ ಮತ್ತು ಮಾಹಿತಿ ಸಚಿವೆ ಜೊಸೆಫಿನ್ ಟಿಯೊ ಗೌರವ ಅತಿಥಿಯಾಗಿ ಸಿಂಗಪುರವನ್ನು ಪ್ರತಿನಿಧಿಸಿದರು. ಈ ವೇಳೆ ವಂದೇ ಮಾತರಂ ಗೀತೆಯ ವಿಷಯದ ಕುರಿತು ವಿಶೇಷ ಪ್ರದರ್ಶನವನ್ನು ಆಯೋಜಿಸಲಾಗಿತ್ತು.

ತಮಿಳುನಾಡು ಮತ್ತು ರಾಜಸ್ಥಾನದ ಸಾಂಪ್ರದಾಯಿಕ ನೃತ್ಯ ಸೇರಿದಂತೆ ಭಾರತೀಯ ಶಾಸ್ತ್ರೀಯ ನೃತ್ಯ ಪ್ರಕಾರಗಳು ಮತ್ತು ಸಂಗೀತ ಪ್ರದರ್ಶನಗಳನ್ನು ಪ್ರಸ್ತುತ ಪಡಿಸಲಾಯಿತು.

'ಒಂದು ಜಿಲ್ಲೆ, ಒಂದು ಉತ್ಪನ್ನ' ಉಪಕ್ರಮದಡಿಯಲ್ಲಿ ಗುರುತಿಲಾದ ಕೆಲವು ವಿಶಿಷ್ಟ ಉತ್ಪನ್ನಗಳನ್ನು ಪ್ರದರ್ಶಿಸಲಾಯಿತು. ಇದು ಭಾರತದ ವಿವಿಧ ಜಿಲ್ಲೆಗಳ ಸ್ಥಳೀಯ ಸಮುದಾಯಗಳು ಮತ್ತು ಕುಶಲಕರ್ಮಿಗಳ ಸಾಂಸ್ಕೃತಿಕ ಪರಂಪರೆಯನ್ನು ಪ್ರತಿನಿಧಿಸುತ್ತದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries