HEALTH TIPS

ಪಾಲಕ್ಕಾಡ್‌ ನಲ್ಲಿ ಪಿಕ್‌ಅಪ್ ವ್ಯಾನ್‌ನಿಂದ 100ಕ್ಕೂ ಹೆಚ್ಚು ಸ್ಫೋಟಕಗಳು ವಶ

ಪಾಲಕ್ಕಾಡ್: ಇಲ್ಲಿಗೆ ಸಮೀಪ 100ಕ್ಕೂ ಹೆಚ್ಚು ಸ್ಫೋಟಕವಿರುವ ಪೆಟ್ಟಿಗೆಗಳನ್ನು ಸಾಗಿಸುತ್ತಿದ್ದ ಪಿಕ್‌ ಅಪ್ ವ್ಯಾನ್‌ ಅನ್ನು ಪೊಲೀಸರು ಬುಧವಾರ ತಡರಾತ್ರಿ ವಶಪಡಿಸಿಕೊಂಡಿದ್ದಾರೆ.

ಪಾಲಕ್ಕಾಡ್ ಟೌನ್ ಸೌತ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ವಾಹನ ತಪಾಸಣೆ ವೇಳೆ ವ್ಯಾನ್‌ನ್ನು ತಡೆದು ಪರಿಶೀಲಿಸಿದಾಗ, 100ಕ್ಕೂ ಹೆಚ್ಚು ಬಾಕ್ಸ್ ಜೆಲಾಟಿನ್ ಕಡ್ಡಿಗಳು ಹಾಗೂ 20ಕ್ಕೂ ಹೆಚ್ಚು ಬಾಕ್ಸ್ ಡಿಟೋನೇಟರ್‌ ಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಫೋಟಕಗಳನ್ನು ಕಲ್ಲಂಗಡಿ ಹಣ್ಣುಗಳ ಸರಕಿನ ಕೆಳಗೆ ಮರೆಮಾಚಿ ಸಾಗಿಸಲಾಗುತ್ತಿತ್ತು ಎನ್ನಲಾಗಿದೆ.

ವಾಹನದ ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಪ್ರಾಥಮಿಕ ವಿಚಾರಣೆಯಲ್ಲಿ ಚಾಲಕನು ಕೊಯಮತ್ತೂರಿನಿಂದ ಪೆಟ್ಟಿಗೆಗಳನ್ನು ಲೋಡ್ ಮಾಡಿಕೊಂಡು ತ್ರಿಶೂರ್‌ ನಲ್ಲಿರುವ ಕ್ವಾರಿಗೆ ಸಾಗಿಸುತ್ತಿದ್ದಾಗಿ ಹೇಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ರಾಜ್ಯಕ್ಕೆ ಅಕ್ರಮವಾಗಿ ಸ್ಫೋಟಕ ವಸ್ತುಗಳನ್ನು ತರಲಾಗುತ್ತಿದೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಪೊಲೀಸರು ವಾಹನಗಳ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ವ್ಯಾನ್‌ ಅನ್ನು ನಿಲ್ಲಿಸುವಂತೆ ಸೂಚಿಸಿದರೂ ಚಾಲಕ ವಾಹನ ನಿಲ್ಲಿಸದೇ ಮುಂದುವರಿದಿದ್ದರಿಂದ ಬೆನ್ನಟ್ಟಿ ಹಿಡಿಯಲಾಗಿದೆ ಎಂದು ತಿಳಿದು ಬಂದಿದೆ.

ಚಾಲಕನ ವಿರುದ್ಧ ಸ್ಫೋಟಕ ವಸ್ತುಗಳ ಕಾಯ್ದೆಯಡಿ ಪ್ರಕರಣ ದಾಖಲಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries