HEALTH TIPS

ಹಣ ಸಾಗಿಸುತ್ತಿದ್ದ ವಿಮಾನ ಪತನ: 11 ಮಂದಿ ಮೃತಪಟ್ಟರೂ ನೋಟಿಗಾಗಿ ಮುಗಿಬಿದ್ದ ಜನ!

ಸುಕ್ರಾ: ಬೊಲಿವಿಯಾ ವಾಯುಪಡೆಯ ಸರಕು ಸಾಗಣೆ ವಿಮಾನವು ಎಲ್‌ ಆಲ್ಟೋ ನಗರದಲ್ಲಿ ಪತನಗೊಂಡಿದ್ದು ಕನಿಷ್ಠ 20 ಮಂದಿ ಮೃತಪಟ್ಟಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಹೇಳಿಕೆಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.

ಶುಕ್ರವಾರ ಸಂಜೆ 6.15ರ ಸುಮಾರಿಗೆ ದುರಂತ ಸಂಭವಿಸಿದೆ ಎಂದು ವಿಮಾನಯಾನ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸಾಂತಾ ಕ್ರೂಜ್‌ ವಿಮಾನ ನಿಲ್ದಾಣದಿಂದ ಎಲ್‌ ಆಲ್ಟೋಗೆ ಸಂಚರಿಸಿದ್ದ ಈ ವಿಮಾನವು, ರನ್‌ ವೇನಿಂದ ಜಾರಿ ಸಮೀಪದಲ್ಲಿದ್ದ ವಾಹನಗಳಿಗೆ ಡಿಕ್ಕಿಯಾಗಿದೆ.

ಅಪಘಾತಕ್ಕೀಡಾದ ವಿಮಾನವನ್ನು C-130 ಹರ್ಕ್ಯುಲಸ್ ಎಂದು ಖಚಿತಪಡಿಸಿರುವ ರಕ್ಷಣಾ ಸಚಿವಾಲಯ, ವಿಮಾನವು ಬೊಲಿವಿಯಾದ ಸೆಂಟ್ರಲ್‌ ಬ್ಯಾಂಕ್‌ಗೆ ನೋಟುಗಳನ್ನು ಸಾಗಿಸುತ್ತಿತ್ತು ಎಂದೂ ಮಾಹಿತಿ ನೀಡಿದೆ.

ವಿಮಾನದಲ್ಲಿ ಎಷ್ಟು ಜನರಿದ್ದರು ಎಂಬುದು ಸದ್ಯಕ್ಕೆ ಬಹಿರಂಗವಾಗಿಲ್ಲ. ಸಾವು-ನೋವಿನ ಸಂಖ್ಯೆಯೂ ಖಚಿತವಾಗಿ ದೃಢಪಟ್ಟಿಲ್ಲ. ಆದರೆ, ಕನಿಷ್ಠ 11 ಮಂದಿ ಮೃತಪಟ್ಟಿರಬಹುದು. 30ಕ್ಕೂ ಹೆಚ್ಚು ಜನರು ಗಾಯಗೊಂಡಿರುವ ಸಾಧ್ಯತೆ ಇದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.

ಅಪಘಾತದ ಸ್ಥಳದಲ್ಲಿ ನೋಟುಗಳನ್ನು ಆಯ್ದುಕೊಳ್ಳಲು ಮುಗಿಬಿದ್ದ ಜನರ ಗುಂಪನ್ನು ಪೊಲೀಸರು, ಅಶ್ರುವಾಯು ಪ್ರಯೋಗಿಸಿ ಚದುರಿಸಿದ್ದಾರೆ.

ಜನರನ್ನು ತಡೆಯಲು ಪೊಲೀಸರು ಸನ್ನದ್ಧವಾಗಿ ನಿಂತಿರುವುದು, ಅಶ್ರುವಾಯು ಪ್ರಹಾರದ ಬಳಿಕ ಜನರು ಓಡುತ್ತಿರುವುದು ಹಾಗೂ ಕೆಲವರು ಪೊಲೀಸರತ್ತ ಕಲ್ಲು ತೂರುತ್ತಿರುವ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries