ಬಿಜಾಪುರ: ಛತ್ತೀಸಗಢದ ಬಿಜಾಪುರ ಜಿಲ್ಲೆಯಲ್ಲಿ 12 ನಕ್ಸಲರು ಪೊಲೀಸರ ಮುಂದೆ ಗುರುವಾರ ಶರಣಾಗಿದ್ದಾರೆ. ಈ ನಕ್ಸಲರ ಸುಳಿವು ನೀಡಿದವರಿಗೆ ಒಟ್ಟಾರೆ ₹46 ಲಕ್ಷ ಬಹುಮಾನ ಘೋಷಿಸಲಾಗಿತ್ತು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 'ಶರಣಾದವರ ಪೈಕಿ ಎಂಟು ಮಹಿಳೆಯರು ಇದ್ದಾರೆ.
ರಾಜ್ಯ ಸರ್ಕಾರದ ಶರಣಾಗತಿ ಮತ್ತು ಪುನರ್ವಸತಿ ನೀತಿಯಿಂದ ಪ್ರಭಾವಿತಗೊಂಡು ಮುಖ್ಯವಾಹಿನಿಗೆ ಬಂದಿದ್ದಾರೆ' ಎಂದು ಬಿಜಾಪುರ ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರ ಕುಮಾರ್ ಯಾದವ್ ಅವರು ತಿಳಿಸಿದ್ದಾರೆ.
'ಸರ್ಕಾರದ ನೀತಿಯ ಪ್ರಕಾರ ಶರಣಾದ ಎಲ್ಲ ನಕ್ಸಲರಿಗೆ ತಕ್ಷಣವೇ ತಲಾ ₹50,000 ನೆರವು ಹಾಗೂ ಪುನರ್‌ವಸತಿ ಸೌಲಭ್ಯ ಕಲ್ಪಿಸಿಕೊಡಲಾಗುವುದು' ಎಂದು ಅಧಿಕಾರಿ ತಿಳಿಸಿದ್ದಾರೆ.

