ಬದಿಯಡ್ಕ: ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಉತ್ಸವ ಫೆ.15 ಭಾನುವಾರ ಜರಗಲಿರುವುದು. ಬೆಳಗ್ಗೆ 6.30ಕ್ಕೆ ಗಣಪತಿ ಹೋಮ, 7.30ಕ್ಕೆ ಬೆಳಗಿನ ಪೂಜೆ, 8 ಗಂಟೆಗೆ ಭಜನಾ ಸಂಕೀರ್ತನೆ ಆರಂಭ, ಶ್ರೀ ಉದನೇಶ್ವರ ಭಜನಾ ಸಂಘ ಪೆರಡಾಲ, ಶ್ರೀ ಉದನೇಶ್ವರ ಭಕ್ತ ಮಹಿಳಾ ವೃಂದ ಪೆರಡಾಲ, ಶ್ರೀ ದುರ್ಗಾ ಭಜನಾ ಮಂಡಳಿ ಪೆರಡಾಲ ಇವರಿಂದ ಭಜನಾ ಸೇವೆ. 9.30ಕ್ಕೆ ಏಕಾದಶ ರುದ್ರಾಭಿಷೇಕ, 10 ಗಂಟೆಗೆ ಬ್ರಹ್ಮಕಲಶೋತ್ಸವ ಸಮಿತಿ ಮಹಾಸಭೆ,12.30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನದಾನ. ರಾತ್ರಿ 7 ಗಂಟೆಗೆ ಶ್ರೀದೇವರಿಗೆ ಅಭಿಷೇಕ, 7.30ಕ್ಕೆ ಮಹಾಪೂಜೆ ನಡೆಯಲಿದೆ.


