ಮಧೂರು: ಮಧೂರು ಮಧುವಾಹಿನಿ ಫಾರ್ಮರ್ಸ್ ಪ್ರೊಡ್ಯೂಸರ್ ಮತ್ತು ಮಾರ್ಕೆಟಿಂಗ್ ಸೊಸೈಟಿಯ ದ್ವಿತೀಯ ಮಹಾಸಭೆ ಮಧೂರು ಸಹಕಾರೀ ಬ್ಯಾಂಕ್ ಸಭಾಂಗಣದಲ್ಲಿ ಜರಗಿತು. ಮಧೂರು ಮಧುವಾಹಿನಿ ಎಫ್‍ಪಿಒ ಅಧ್ಯಕ್ಷ ಪದ್ಮರಾಜ ಪಟ್ಟಾಜೆ ಅಧ್ಯಕ್ಷತೆ ವಹಿಸಿದ್ದರು. ಸಿಇಒ ಭರತ್ ಬಾಡೂರು ವಾರ್ಷಿಕ ವರದಿ ಮತ್ತು ಲೆಕ್ಕಪತ್ರ ಮಂಡಿಸಿದರು. ಹಲಸಿನ ಉತ್ಪನ್ನಗಳನ್ನು ಮೌಲ್ಯಾಧಾರಿತವಾಗಿ ಮಾರುಕಟ್ಟೆಗಿಳಿಸುವುದು ಹಾಗೂ ಸಂಘದ ಸದಸ್ಯರ ಸಂಖ್ಯೆಯನ್ನು 750ಕ್ಕೆ ಹೆಚ್ಚಿಸುವ ತೀರ್ಮಾನವನ್ನು ಕೈಗೊಳ್ಳಲಾಯಿತು. ನಿರ್ದೇಶಕಿ ಅಶ್ವಿನಿ ಕೆ.ಎಂ. ಪ್ರಾರ್ಥನೆ ಹಾಡಿದರು. ನಿರ್ದೇಶಕರುಗಳಾದ ನರಸಿಂಹ ಮಯ್ಯ ಮಧೂರು ಸ್ವಾಗತಿಸಿ, ಗಣೇಶ್ ಪಾರೆಕಟ್ಟ ವಂದಿಸಿದರು.

.jpg)
