HEALTH TIPS

ವಿಶ್ವಕಪ್ ವಿಜೇತ ಭಾರತೀಯ ಪುರುಷರ ಅಂಡರ್-19 ತಂಡಕ್ಕೆ 7.5 ಕೋಟಿ ರೂ. ಘೋಷಿಸಿದ ಬಿಸಿಸಿಐ

ಮುಂಬೈ: ವಿಶ್ವಕಪ್ ವಿಜೇತ ಭಾರತೀಯ ಪುರುಷರ ಅಂಡರ್-19 ಕ್ರಿಕೆಟ್ ತಂಡಕ್ಕೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯು ಶನಿವಾರ 7.5 ಕೋಟಿ ರೂಪಾಯಿ ನಗದು ಬಹುಮಾನ ಘೋಷಿಸಿದೆ.

ಶುಕ್ರವಾರ ಜಿಂಬಾಬ್ವೆಯ ಹರಾರೆಯಲ್ಲಿ ನಡೆದ ಫೈನಲ್‌ನಲ್ಲಿ ಆಯುಶ್ ಮ್ಹಾತ್ರೆ ನೇತೃತ್ವದ ಭಾರತೀಯ ತಂಡವು ಇಂಗ್ಲೆಂಡ್ ತಂಡವನ್ನು 100 ರನ್‌ಗಳ ಭರ್ಜರಿ ಅಂತರದಿಂದ ಸೋಲಿಸಿ ಆರನೇ ಬಾರಿಗೆ ಅಂಡರ್-19 ವಿಶ್ವಕಪ್ ಪ್ರಶಸ್ತಿ ಗೆದ್ದಿದೆ.

''ಜಿಂಬಾಬ್ವೆಯಲ್ಲಿ ನಡೆದ ಐಸಿಸಿ ಅಂಡರ್-19 ವಿಶ್ವಕಪ್ ಪಂದ್ಯಾವಳಿಯನ್ನು ಗೆದ್ದ ಭಾರತೀಯ ಅಂಡರ್-19 ತಂಡ, ಕೋಚಿಂಗ್ ಮತ್ತು ಸಹಾಯಕ ಸಿಬ್ಬಂದಿ ಹಾಗೂ ಜೂನಿಯರ್ ಕ್ರಿಕೆಟ್ ಸಮಿತಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಗೌರವ ಕಾರ್ಯದರ್ಶಿ ದೇವಜಿತ್ ಸೈಕಿಯ 7.5 ಕೋಟಿ ರೂಪಾಯಿ ನಗದು ಪ್ರಶಸ್ತಿಯನ್ನು ಘೋಷಿಸುತ್ತಾರೆ'' ಎಂದು ಅಧಿಕೃತ ಹೇಳಿಕೆಯೊಂದರಲ್ಲಿ ಬಿಸಿಸಿಐ ತಿಳಿಸಿದೆ.

ಬಿಸಿಸಿಐ ಅಧ್ಯಕ್ಷ ಮಿಥುನ್ ಮನ್‌ಹಾಸ್ ಅಂಡರ್-19 ಭಾರತೀಯ ತಂಡವನ್ನು ಅಭಿನಂದಿಸಿದ್ದಾರೆ. ''ಅಂಡರ್-19 ವಿಶ್ವಕಪ್‌ನ್ನು ಆರು ಬಾರಿ ಗೆಲ್ಲುವುದು ಅಮೋಘ ಸಾಧನೆಯಾಗಿದೆ. ಅದು ವಿವಿಧ ವಯೋಗುಂಪುಗಳ ಕ್ರಿಕೆಟ್‌ನಲ್ಲಿ ಭಾರತದ ಸಾಮರ್ಥ್ಯವನ್ನು ಬಿಂಬಿಸುತ್ತದೆ. ಪುರುಷರ ಮತ್ತು ಮಹಿಳೆಯರ ಅಂಡರ್-19 ವಿಶ್ವಕಪ್‌ಗಳೆರಡನ್ನೂ ಗೆದ್ದಿರುವುದು ಹೆಮ್ಮಿಯ ಕ್ಷಣಗಳಾಗಿವೆ ಹಾಗೂ ಇದು ನಮ್ಮ ಕ್ರಿಕೆಟ್ ಸಂಸ್ಕೃತಿಯ ಆಳವನ್ನು ತೋರಿಸುತ್ತದೆ'' ಎಂದು ಅವರು ಹೇಳಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries