HEALTH TIPS

ನಗರಗಳೇ ಅಭಿವೃದ್ಧಿ ಯಂತ್ರಗಳು; ಸರ್ಕಾರದಿಂದ 1 ಲಕ್ಷ ಕೋಟಿ ರೂ ಅರ್ಬನ್ ಚಾಲೆಂಜ್ ಫಂಡ್

ನವದೆಹಲಿ: ನಗರಗಳನ್ನು ಆರ್ಥಿಕ ಅಭಿವೃದ್ಧಿ ಎಂಜಿನ್ ಆಗಿ ಮಾರ್ಪಡಿಸಲು ಕೇಂದ್ರ ಸಂಪುಟವು ಅರ್ಬನ್ ಚಾಲೆಂಜ್ ಫಂಡ್ (Urban Challenge Fund) ಅನ್ನು ಆರಂಭಿಸಿದೆ. ಇದಕ್ಕಾಗಿ ಒಂದು ಲಕ್ಷ ಕೋಟಿ ರೂ ಮೀಸಲಿರಿಸಿದೆ. ಮುಂದಿನ ಐದು ವರ್ಷಕ್ಕೆ ಈ ಫಂಡ್ ಬಳಕೆಯಾಗಲಿದ್ದು, ದೇಶದ ವಿವಿಧ ನಗರಗಳಲ್ಲಿ ಒಟ್ಟಾರೆ ನಾಲ್ಕು ಲಕ್ಷ ಕೋಟಿ ರೂ ಹೂಡಿಕೆ ಆಗಲಿದೆ.

ಗಮನಿಸಬೇಕಾದ ಅಂಶವೆಂದರೆ, ಈ ಫಂಡಿಂಗ್ ಸಾಂಪ್ರದಾಯಿಕ ಅನುದಾನ ಆಧಾರಿತವಾಗಿರುವುದಿಲ್ಲ. ಮಾರುಕಟ್ಟೆ ಮತ್ತು ಸುಧಾರಣೆ ಆಧಾರಿತವಾದ ನಗರ ಅಭಿವೃದ್ಧಿ ಮಾದರಿಯನ್ನು ಅನುಸರಿಸಲಾಗುತ್ತದೆ.

ನಗರಗಳಲ್ಲಿನ ಯೋಜನೆಗಳು ಸರ್ಕಾರಿ ಅನುದಾನಗಳ ಮೇಲೆ ಅವಲಂಬಿತವಾಗಿರುವುದನ್ನು, ಮತ್ತು ಅನುಷ್ಠಾನದಲ್ಲಿ ಶಿಸ್ತಿನ ಕೊರತೆ ಇರುವುದನ್ನು ತಪ್ಪಿಸಲು ಈ ಹೊಸ ಮಾದರಿ ಕಂಡುಕೊಳ್ಳಲಾಗಿದೆ. ಸುಧಾರಣೆ, ಸ್ವಾವಲಂಬನೆಯನ್ನು ಉತ್ತೇಜಿಸಲಾಗುತ್ತದೆ. ನಗರ ಮೂಲಸೌಕರ್ಯ ಯೋಜನೆಗಳಲ್ಲಿ ಖಾಸಗಿ ಹೂಡಿಕೆಗೂ ಉತ್ತೇಜಿಸಲಾಗುತ್ತದೆ.

ಕೇಂದ್ರದಿಂದ ಶೇ. 25 ಫಂಡಿಂಗ್; ಉಳಿದವು?

ಹತ್ತು ಲಕ್ಷಕ್ಕೂ ಅಧಿಕ ಜನಸಂಖ್ಯೆ ಇರುವ ನಗರಗಳು ಅರ್ಬನ್ ಚಾಲೆಂಜ್ ಫಂಡ್ ಪಡೆಯಲು ಅರ್ಹವಾಗಿರುತ್ತವೆ.

ಆಯ್ಕೆಯಾಗುವ ಯೋಜನೆಗಳಿಗೆ ಶೇ. 25ರಷ್ಟು ಫಂಡಿಂಗ್ ಅನ್ನು ಕೇಂದ್ರ ಒದಗಿಸುತ್ತದೆ. ಮುನಿಸಿಪಾಲ್ ಬಾಂಡ್, ಬ್ಯಾಂಕ್ ಸಾಲ, ಪಬ್ಲಿಕ್-ಪ್ರೈವೇಟ್ ಪಾಲುದಾರಿಕೆಗಳ ಮೂಲಕ ಕನಿಷ್ಠ ಶೇ. 50ರಷ್ಟು ಫಂಡಿಂಗ್ ಅನ್ನು ನಗರಗಳು ಸೃಷ್ಟಿಸಿಕೊಳ್ಳಬೇಕು. ಇನ್ನುಳಿದ ಹಣವನ್ನು ರಾಜ್ಯಗಳು, ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಇತರರ ಮೂಲಕ ಪಡೆಯಬೇಕು.

ಪ್ರಾಜೆಕ್ಟ್​ಗಳಿಗೆ ಸುಮ್ಮನೆ ಫಂಡಿಂಗ್ ಸಿಕ್ಕೋದಿಲ್ಲ

ಪ್ರಾಜೆಕ್ಟ್​ಗಳಿಗೆ ಸುಮ್ಮನೆ ಫಂಡಿಂಗ್ ಸಿಕ್ಕೋದಿಲ್ಲ. ಯೋಜನೆಯಿಂದ ಆರ್ಥಿಕ ಪರಿಣಾಮ, ಸುಸ್ಥಿರತೆ, ಹವಾಮಾನ ಭದ್ರತೆ, ಸುಧಾರಣಾ ಕ್ರಮಗಳ ಅನುಷ್ಠಾನ, ದೀರ್ಘಾವಧಿ ಹಣಕಾಸು ಸ್ವಾವಲಂಬನೆ ಹೇಗೆ ಸಾಧಿಸಲಾಗುತ್ತದೆ ಎಂಬುದನ್ನು ಮನವರಿಕೆ ಮಾಡುವ ಪ್ರಾಜೆಕ್ಟ್​ಗಳಿಗೆ ಫಂಡಿಂಗ್ ಸಿಗುತ್ತದೆ. ಅದರಲ್ಲೂ ಪ್ರಾಜೆಕ್ಟ್​ನ ಬೆಳವಣಿಗೆ ಹೇಗೆ ಆಗುತ್ತಿದೆ ಎಂದು ನೋಡಿಕೊಂಡು ಹಂತ ಹಂತವಾಗಿ ಫಂಡಿಂಗ್ ಕೊಡಲಾಗುತ್ತದೆ. ಸುಧಾರಣೆಗಳನ್ನು ಅಳವಡಿಸಿಕೊಳ್ಳಲು ವಿಫಲವಾಗುವ ನಗರಗಳಿಗೆ ಮತ್ತಷ್ಟು ಫಂಡಿಂಗ್ ಸಿಕ್ಕೋದಿಲ್ಲ.

ನಗರ ಸ್ಥಳೀಯ ಸಂಸ್ಥೆಗಳಿಗೆ ಯಾರು ಕೊಡುತ್ತಾರೆ ಸಾಲ?

ನಗರ ಸ್ಥಳೀಯ ಸಂಸ್ಥೆಗಳು ಹೆಚ್ಚಾಗಿ ಸರ್ಕಾರಿ ಅನುದಾನ ಪಡೆದು ಜೀವಂತವಾಗಿರುವಂತಹವು. ಇವುಗಳಿಗೆ ಕ್ರೆಡಿಟ್ ಹಿಸ್ಟರಿ ಇಲ್ಲದಿರುವುದರಿಂದ ಹಣಕಾಸು ಸಂಸ್ಥೆಗಳಿಂದ ಸಾಲ ಸಿಗುವುದು ಕಷ್ಟ. ಅದಕ್ಕಾಗಿ ಕೇಂದ್ರ ಸಂಪುಟವು 5,000 ರೂಗಳ ಕ್ರೆಡಿಟ್ ರೀಪೇಮೆಂಟ್ ಗ್ಯಾರಂಟಿ ಸ್ಕೀಮ್ ಮಾಡಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries