HEALTH TIPS

ಪ್ಯಾನ್​ಗೆ ಹೊಸ ನಿಯಮ: ಏ. 1ರಿಂದ ಜಾರಿ ಸಾಧ್ಯತೆ

ನವದೆಹಲಿ: ಬ್ಯಾಂಕ್​ಗಳಲ್ಲಿ ನಗದು ಠೇವಣಿ ಇಡುವುದು, ವಿತ್​ಡ್ರಾ ಮಾಡುವುದು, ಮೋಟಾರು ವಾಹನಗಳ ಖರೀದಿ, ಹೋಟೆಲ್ ಬಿಲ್ ಪಾವತಿಯಂತಹ ವಹಿವಾಟುಗಳಿಗೆ ಪ್ಯಾನ್ ಸಂಖ್ಯೆಯನ್ನು ನಮೂದಿಸುವ ಮಿತಿಯನ್ನು ಗಣನೀಯವಾಗಿ ಹೆಚ್ಚಿಸಲು ಹೊಸ ಕರಡು ಆದಾಯ ತೆರಿಗೆ ನಿಯಮಗಳಲ್ಲಿ ಪ್ರಸ್ತಾಪಿಸಲಾಗಿದೆ.

ಪ್ರಸ್ತಾವಿತ 'ಆದಾಯ ತೆರಿಗೆ ನಿಯಮಗಳು 2026'ರ ಪ್ರಕಾರ, ಒಬ್ಬ ವ್ಯಕ್ತಿ ಒಂದು ಹಣಕಾಸು ವರ್ಷದಲ್ಲಿ ತನ್ನ ಒಂದು ಅಥವಾ ಹೆಚ್ಚಿನ ಖಾತೆಗಳಲ್ಲಿ ಒಟ್ಟು 10 ಲಕ್ಷ ರೂ. ಅಥವಾ ಅದಕ್ಕಿಂತ ಹೆಚ್ಚಿನ ನಗದು ಠೇವಣಿ ಅಥವಾ ಹಿಂಪಡೆಯುವಿಕೆ ಮಾಡಿದರೆ ಮಾತ್ರ ಪ್ಯಾನ್ ಸಂಖ್ಯೆ ನಮೂದಿಸುವುದು ಕಡ್ಡಾಯವಾಗಲಿದೆ.

ಪ್ರಸ್ತುತ, ಬ್ಯಾಂಕ್​ಗಳಲ್ಲಿ ಒಂದೇ ದಿನದಲ್ಲಿ 50,000 ರೂ.ಗಿಂತ ಹೆಚ್ಚಿನ ನಗದು ವ್ಯವಹಾರಕ್ಕೆ ಪ್ಯಾನ್ ಸಂಖ್ಯೆ ಅಗತ್ಯವಿತ್ತು. ವಾಹನಗಳ ಖರೀದಿ ವಿಷಯದಲ್ಲಿಯೂ ದೊಡ್ಡ ಬದಲಾವಣೆ ತರಲಾಗಿದ್ದು, ದ್ವಿಚಕ್ರ ವಾಹನ ಸೇರಿದಂತೆ ಯಾವುದೇ ಮೋಟಾರು ವಾಹನಗಳ ಬೆಲೆ 5 ಲಕ್ಷ ರೂ. ಮೀರಿದರೆ ಮಾತ್ರ ಪ್ಯಾನ್ ವಿವರ ನೀಡಬೇಕಾಗುತ್ತದೆ.

ಪ್ರಸ್ತುತ ಜಾರಿಯಲ್ಲಿರುವ 1962ರ ನಿಯಮಗಳಲ್ಲಿ ದ್ವಿಚಕ್ರವಾಹನ ಖರೀದಿಗೆ ಪ್ಯಾನ್ ಅವಶ್ಯಕತೆ ಇರಲಿಲ್ಲ. ಆದರೆ ಕಾರುಗಳ ಖರೀದಿಗೆ ಬೆಲೆಯ ಮಿತಿ ಇಲ್ಲದೆ ಪ್ಯಾನ್ ಕಡ್ಡಾಯವಾಗಿತ್ತು. ಅದೇ ರೀತಿ, ಹೋಟೆಲ್ ಅಥವಾ ರೆಸ್ಟೋರೆಂಟ್ ಬಿಲ್​ಗಳು 1 ಲಕ್ಷ ರೂ. ದಾಟಿದರೆ ಮಾತ್ರ ಪ್ಯಾನ್ ನೀಡಬೇಕು. ಈ ಮೊದಲು ಇದರ ಮಿತಿ 50,000 ರೂ. ಆಗಿತ್ತು. ಸ್ಥಿರಾಸ್ತಿಗಳ ಖರೀದಿ, ಮಾರಾಟ ಅಥವಾ ಗಿಫ್ಟ್​ಗೆ ಸಂಬಂಧಿಸಿದ ವ್ಯವಹಾರಗಳಲ್ಲಿ ಈಗಿರುವ 10 ಲಕ್ಷ ರೂ. ಮಿತಿಯನ್ನು 20 ಲಕ್ಷ ರೂ.ಗೆ ಹೆಚ್ಚಿಸಲಾಗಿದೆ.

ಇನ್ನು ಮುಂದೆ ವಿಮಾ ಕಂಪನಿಗಳೊಂದಿಗೆ ವ್ಯವಹಾರ ಆರಂಭಿಸಲು ಪ್ಯಾನ್ ಕಡ್ಡಾಯವಾಗಲಿದೆ. ಹೊಸ ನಿಯಮಗಳಡಿ ಉದ್ಯೋಗದಾತರು ನೀಡುವ ಉಚಿತ ಊಟದ ಸೌಲಭ್ಯದ ಮಿತಿಯನ್ನು ಪ್ರತಿ ಊಟಕ್ಕೆ 200 ರೂ.ಗೆ ಹೆಚ್ಚಿಸಲಾಗಿದೆ. ಕಾರು ಭತ್ಯೆಯಾಗಿ 1.6 ಲೀಟರ್ ಎಂಜಿನ್ ಸಾಮರ್ಥ್ಯದ ವಾಹನಗಳಿಗೆ ಮಾಸಿಕ 8,000 ರೂ. ಮತ್ತು ಅದಕ್ಕಿಂತ ಹೆಚ್ಚಿನ ಸಾಮರ್ಥ್ಯದ ವಾಹನಗಳಿಗೆ 10,000 ರೂ. ನಿಗದಿಪಡಿಸಲಾಗಿದೆ. ಸಾರ್ವಜನಿಕರ ಸಲಹೆ ಪಡೆದ ನಂತರ, ಈ ಕರಡು ನಿಯಮಗಳ ಬಗ್ಗೆ ಮಾರ್ಚ್ ಮೊದಲ ವಾರ ಅಧಿಸೂಚನೆ ಹೊರಡಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

  • ಪ್ರಸ್ತುತ ಇರುವ ನಿಯಮಗಳ ಸಂಖ್ಯೆ 511ರಿಂದ 333ಕ್ಕೆ ಇಳಿಕೆ
  • ತೆರಿಗೆ ಫಾಮರ್್​ಗಳ ಸಂಖ್ಯೆಯನ್ನು 399ರಿಂದ 190ಕ್ಕೆ ಇಳಿಕೆ
  • ವಾರ್ಷಿಕ 10 ಲಕ್ಷಕ್ಕಿಂತ ಹೆಚ್ಚಿನ ನಗದು ಠೇವಣಿ, ವಿತ್​ಡ್ರಾಗೆ ಪ್ಯಾನ್ ಕಡ್ಡಾಯ
  • ಹೋಟೆಲ್ ಬಿಲ್ 1 ಲಕ್ಷ ರೂ.ಗಿಂತ ಕಡಿಮೆ ಪಾವತಿಗೆ ಪ್ಯಾನ್ ಅಗತ್ಯವಿಲ್ಲ
  • ವಾಹನಗಳ ಖರೀದಿಗೆ 5 ಲಕ್ಷ ರೂ. ಮಿತಿ
  • ಸ್ಥಿರಾಸ್ತಿ ಖರೀದಿ ಬೆಲೆ 20 ಲಕ್ಷ ರೂ. ಮೀರಿದರೆ ಪ್ಯಾನ್ ಕಡ್ಡಾಯ
  • ವಿಮಾ ಕಂಪನಿ ಜತೆ ಖಾತೆ ಆಧಾರಿತ ವ್ಯವಹಾರ ಮಾಡಲು ಪ್ಯಾನ್ ಅವಶ್ಯ
  • ಕಚೇರಿ ವಾಹನ, ಉಚಿತ ಊಟದಂತಹ ತೆರಿಗೆಮುಕ್ತ ಸೌಲಭ್ಯ ಮಿತಿ ಹೆಚ್ಚಳ

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries