HEALTH TIPS

ಫೆಬ್ರವರಿ 28ರಂದು ಅಪರೂಪದ ಖಗೋಳ ವಿದ್ಯಮಾನ; ಆಕಾಶದಲ್ಲಿ ನಡೆಯಲಿದೆ 6 ಗ್ರಹಗಳ ವಿಸ್ಮಯ

ಫೆಬ್ರವರಿ 28 ರಂದು ಆರು ಗ್ರಹಗಳು ಆಕಾಶದಲ್ಲಿ ಒಂದೇ ನೇರ ರೇಖೆಯಲ್ಲಿ ಕಾಣಿಸಿಕೊಳ್ಳುವ 'ಗ್ರಹಗಳ ಮೆರವಣಿಗೆ' ಎಂಬ ಅಪರೂಪದ ಖಗೋಳ ವಿದ್ಯಮಾನ ಸಂಭವಿಸಲಿದೆ. ಸೂರ್ಯಾಸ್ತದ ನಂತರ ಗೋಚರಿಸುವ ಈ ದೃಶ್ಯವನ್ನು ಭಾರತದಲ್ಲಿಯೂ ಕಾಣಲಿದೆ.

ಫೆಬ್ರವರಿ ತಿಂಗಳಲ್ಲಿ ಅಪರೂಪದ ಖಗೋಳ ಘಟನೆ ಸಂಭವಿಸಲಿದೆ.

ಈ ತಿಂಗಳು ಒಂದೇ ನೇರ ರೇಖೆಯಲ್ಲಿ ಆರು ಗ್ರಹಗಳು ಕಾಣಿಸಿಕೊಳ್ಳಲಿವೆ. ಈ ಅಪರೂಪದ ವಿದ್ಯಮಾನವನ್ನು ಖಗೋಳಶಾಸ್ತ್ರಜ್ಞರು 'ಗ್ರಹಗಳ ಮೆರವಣಿಗೆ' (Planetary parade) ಎಂದು ಕರೆಯುತ್ತಾರೆ. ಈ ಗ್ರಹಗಳ ಮೆರವಣಿಗೆ ಯಾವಾಗ ಸಂಭವಿಸುತ್ತೆ ಎಂಬುದರ ಮಾಹಿತಿಯನ್ನು ಈ ಲೇಖನ ಒಳಗೊಂಡಿದೆ.

ಈ ಅಪರೂಪದ ಗ್ರಹಗಳ ಮೆರವಣಿಗೆ ಸೂರ್ಯಾಸ್ತದ ನಂತರ ಒಂದೇ ಪ್ರದೇಶದಲ್ಲಿ ಕಾಣಿಸಿಕೊಳ್ಳಲಿವೆ. ಸೌರವ್ಯೂಹದ 6 ಗ್ರಹಗಳು ಒಟ್ಟಿಗೆ ಗುಂಪಾಗಿ ಗೋಚರಿಸುತ್ತವೆ. ಈ ಅದ್ಭುತವಾದ ವಿದ್ಯಮಾನ ನೋಡಲು ಖಗೋಳಶಾಸ್ತ್ರಜ್ಞರು ಕಾಯುತ್ತಿದ್ದಾರೆ. ಬರಿಗಣ್ಣಿನಿಂದ ಈ ಅದ್ಭುತ ನೋಡಬಹುದು.

ನಾಸಾ ವರದಿ ಪ್ರಕಾರ, ಫೆಬ್ರವರಿ 28 ರ ಶನಿವಾರ ಸೂರ್ಯಾಸ್ತದ ನಂತರ ಗ್ರಹಗಳ ಮೆರವಣಿಗೆ ಗೋಚರಿಲಿದೆ. ಇಂದಿನಿಂದ ಫೆಬ್ರವರಿ ಅಂತ್ಯದವರೆಗೆ, ಬುಧ, ಶುಕ್ರ, ಗುರು, ಶನಿ, ಯುರೇನಸ್ ಮತ್ತು ನೆಪ್ಚೂನ್ ಗ್ರಹಗಳು ಆಕಾಶದ ಒಂದೇ ಭಾಗದಲ್ಲಿ ಇರುತ್ತವೆ. ಕೆಲವು ಗ್ರಹಗಳನ್ನು ಬರಿಗಣ್ಣಿನಿಂದ ನೋಡಲು ಸುಲಭವಾಗಿದ್ದರೆ, ಇತರ ಗ್ರಹಗಳನ್ನು ಬೈನಾಕ್ಯುಲರ್ ಅಥವಾ ದೂರದರ್ಶಕದ ಮೂಲಕ ನೋಡಬೇಕಾಗುತ್ತದೆ.

ಬುಧ ಮತ್ತು ಶುಕ್ರ ಗ್ರಹಗಳನ್ನು ಬರಿಗಣ್ಣಿನಿಂದ ನೋಡಬಹುದು. ಆದರೆ ಶನಿ ಗ್ರಹ ಆಕಾಶದ ಬಾಗಿದ ಭಾಗದಲ್ಲಿರಲಿದೆ. ಫೆಬ್ರವರಿ 28ರ ಸಮೀಪದಲ್ಲಿ ಹುಣ್ಣಿಮೆ ಇರೋದರಿಂದ ಭೂಮಿಯ ಉಪಗಹ್ರ ಚಂದ್ರನು ಸಹ ಸಾಮಾನ್ಯಕ್ಕಿಂತ ಪ್ರಕಾಶಮಾನವಾಗಿ ಕಾಣಿಸಿಕೊಳ್ಳುತ್ತಾನೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ಈ ಖಗೋಳ ಘಟನೆ ಕ್ಷಣಿಕವಾಗಿದೆ.

ಹವಾಮಾನ ಸ್ಪಷ್ಟವಾಗಿದ್ದರೆ ಮತ್ತು ನಿಮ್ಮ ವೀಕ್ಷಣೆಗೆ ಏನೂ ಅಡ್ಡಿಯಾಗದಿದ್ದರೆ ಈ ವಿದ್ಯಮಾನವನ್ನು ಕಣ್ತುಂಬಿಕೊಳ್ಳಬಹುದು. ದೆಹಲಿ, ಚೆನ್ನೈ, ಬೆಂಗಳೂರು, ಕೋಲ್ಕತ್ತಾ, ಹೈದರಾಬಾದ್, ಪುಣೆ, ಜೈಪುರ, ಲಕ್ನೋ, ಅಹಮದಾಬಾದ್ ಮತ್ತು ಡೆಹ್ರಾಡೂನ್‌ನಂತಹ ನಗರಗಳಲ್ಲಿ ಈ ಅಪರೂಪದ ಆಕಾಶದ ವಿದ್ಯಮಾನ ನೋಡಬಹುದು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries