HEALTH TIPS

ಹೈಬಿಪಿ ಇರುವವರಿಗೆ ತಲೆಯ ಹಿಂಭಾಗದಲ್ಲಿ ನೋವು ಕಂಡುಬರುತ್ತದೆಯೇ?

ತಲೆನೋವು (Headache) ಕಂಡುಬರುವುದು ಸಾಮಾನ್ಯ. ಕೆಲವೊಮ್ಮೆ ಈ ನೋವು ತಲೆಯ ಮುಂಭಾಗದಲ್ಲಿ, ಮಧ್ಯದಲ್ಲಿ, ಕೆಲವೊಮ್ಮೆ ಇಡೀ ತಲೆ, ಮತ್ತೆ ಕೆಲವು ಸಂದರ್ಭಗಳಲ್ಲಿ ಹಿಂಭಾಗದಲ್ಲಿ ನೋವು ಕಂಡುಬರುತ್ತದೆ. ಈ ತಲೆನೋವು ಸಾಮಾನ್ಯವಾಗಿ ಮೈಗ್ರೇನ್, ನಿದ್ರೆಯ ಕೊರತೆ, ಹಳೆಯ ಗಾಯ ಅಥವಾ ಮಾನಸಿಕ ಒತ್ತಡದಂತಹ ಹಲವು ಕಾರಣಗಳಿಂದ ಕಂಡುಬರಬಹುದು.

ಆದರೆ ಅಂತಹ ಯಾವುದೇ ಸಮಸ್ಯೆ ಇಲ್ಲದಿದ್ದರೂ ಕೂಡ ತಲೆಯ ಹಿಂಭಾಗದಲ್ಲಿ ಇನ್ನೂ ಕಂಡುಬರುತ್ತಿದ್ದರೆ ಅದಕ್ಕೆ ಅಧಿಕ ರಕ್ತದೊತ್ತಡವೂ (High BP) ಕಾರಣವಾಗಿರಬಹುದು. ಹಾಗಾದರೆ ಅಧಿಕರಕ್ತದೊತ್ತಡಕ್ಕೂ ತಲೆ ನೋವಿಗೂ ಏನು ಸಂಬಂಧ, ಯಾಕೆ ಈ ರೀತಿಯಾಗುತ್ತದೆ, ಇದನ್ನು ಗುರುತಿಸುವುದು ಹೇಗೆ ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ದೆಹಲಿಯ ರಾಜೀವ್ ಗಾಂಧಿ ಆಸ್ಪತ್ರೆಯ ಹೃದ್ರೋಗ ವಿಭಾಗದ ಡಾ. ಅಜಿತ್ ಜೈನ್ ಹೇಳುವ ಪ್ರಕಾರ, ಯಾವುದೇ ವ್ಯಕ್ತಿಗಾಗಲಿ ಒಂದು ಅಥವಾ ಎರಡು ಬಾರಿ ಅಧಿಕ ರಕ್ತದೊತ್ತಡ ಕಂಡುಬಂದರೆ ಅದು ತಲೆಯ ಹಿಂಭಾಗದಲ್ಲಿ ನೋವು ಉಂಟುಮಾಡುವುದಿಲ್ಲ. ಆದರೆ ಈ ರಕ್ತದೊತ್ತಡವು 180/120 mmHg ಕ್ಕಿಂತ ಹೆಚ್ಚಾದರೆ, ಅದು ತಲೆನೋವಿಗೆ ಕಾರಣವಾಗಬಹುದು. ಈ ಸ್ಥಿತಿಯನ್ನು ವೈದ್ಯಕೀಯ ತುರ್ತುಸ್ಥಿತಿ ಎಂದು ಪರಿಗಣಿಸಲಾಗುತ್ತದೆ. ಆಗ ರೋಗಿಯನ್ನು ತಕ್ಷಣವೇ ಆಸ್ಪತ್ರೆಗೆ ಸೇರಿಸಬೇಕಾಗಬಹುದು. ಆದರೆ ಕೆಲವು ಸಂದರ್ಭಗಳಲ್ಲಿ, ರಕ್ತದೊತ್ತಡದಲ್ಲಿ ಸ್ವಲ್ಪ ಹೆಚ್ಚಳ ಕಂಡುಬಂದರೂ ಕೂಡ ತಲೆಯ ಹಿಂಭಾಗದಲ್ಲಿ ನೋವನ್ನು ಉಂಟುಮಾಡಬಹುದು.

ಅಧಿಕ ರಕ್ತದೊತ್ತಡದಿಂದ ಉಂಟಾಗುವ ತಲೆನೋವು ಹೇಗಿರುತ್ತದೆ?

  • ತಲೆಯ ಹಿಂಭಾಗದಲ್ಲಿ ನೋವಿನ ಜೊತೆಗೆ ಭಾರವೂ ಇರುತ್ತದೆ.
  • ತಲೆನೋವಿನೊಂದಿಗೆ ದೃಷ್ಟಿ ಮಸುಕಾಗುವುದು.
  • ತಲೆತಿರುಗುವಿಕೆ
  • ವಾಂತಿ

ತಲೆಯ ಹಿಂಭಾಗದಲ್ಲಿ ನೋವು ಕಂಡುಬರುವುದಕ್ಕೆ ಕಾರಣವೇನು?

ವ್ಯಕ್ತಿಯ ರಕ್ತದೊತ್ತಡ ಹೆಚ್ಚಾದಾಗ, ಅದು ಮೆದುಳಿನಲ್ಲಿರುವ ರಕ್ತನಾಳಗಳ ಮೇಲೆ ಒತ್ತಡವನ್ನು ಬೀರುತ್ತದೆ. ಇದು ತಲೆನೋವಿಗೆ ಕಾರಣವಾಗುತ್ತದೆ. ಹೆಚ್ಚಿನವರಲ್ಲಿ, ನೋವು ತಲೆಯ ಹಿಂಭಾಗದಲ್ಲಿ ಕಂಡುಬರುತ್ತದೆ, ಆದರೆ ಅನೇಕರಲ್ಲಿ ಈ ನೋವು ಪೂರ್ತಿ ತಲೆಯನ್ನು ಆವರಿಸಿಕೊಳ್ಳಬಹುದು. ಅಧಿಕ ರಕ್ತದೊತ್ತಡದ ಲಕ್ಷಣಗಳನ್ನು ಸುಲಭವಾಗಿ ಗುರುತಿಸಲಾಗದ ಕಾರಣ, ಈ ರೋಗಲಕ್ಷಣವನ್ನು ನಿರ್ಲಕ್ಷಿಸುತ್ತಾರೆ, ಆದರೆ ಈ ರೀತಿ ಮಾಡುವುದು ಒಳ್ಳೆಯದಲ್ಲ. ಇಂತಹ ಸಂದರ್ಭಗಳಲ್ಲಿ, ನೀವು ವೈದ್ಯರನ್ನು ಸಂಪರ್ಕಿಸುವುದು ಬಹಳ ಮುಖ್ಯ.

Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries