ಕುಂಬಳೆ: ಕೇರಳ ಸರ್ಕಾರ ಜಾರಿಗೊಳಿಸಿ ರಾಜ್ಯಪಾಲದ ಅನುಮತಿಗಾಗಿ ಕಳುಹಿಸಿದ ಮಲಯಾಳ ಭಾಷೆಮಸೂದೆಯನ್ನು ಭಾಷಾ ಅಲ್ಪ ಸಂಖ್ಯಾತ ಪ್ರದೇಶವಾದ ಮಂಜೇಶ್ವರ-ಕಾಸರಗೋಡು ತಾಲೂಕುಗಳನ್ನುಹೊರತುಪಡಿಸುವ ತಿದ್ದುಪಡಿಯೊಂದಿಗೆ ಜಾರಿಗೊಳಿಸಬೇಕೆಂದು ಒತ್ತಾಯಿಸಿ ಕಾಸರಗೋಡಿನ ಕನ್ನಡಿಗರು ನಡೆಸುವ ಪ್ರತಿಭಟನೆಯ ಅಂಗವಾಗಿ ಮಾರ್ಚ್ 28ರಂದು ಕುಂಬಳೆಯಲ್ಲಿಧರಣಿ ಸತ್ಯಾಗ್ರಹ ನಡೆಯಲಿರುವುದು.
ಅಂದು ಬೆಳಗ್ಗೆ 10ರಿಂದ 12ರ ವರೆಗೆ ಕುಂಬಳೆ ಹಳೇ ಬಸ್ ನಿಲ್ದಾಣ ಬಳಿ Pನ್ನಡಿಗರು ಪ್ರತಿಭಟನಾ ಧರಣಿ ಸತ್ಯಾಗ್ರಹ ನಡೆಸಲಿರುವರು. ವಿವಿಧ ಕನ್ನಡಪರಸಂಘ ಸಂಸ್ಥೆಗಳ, ಕನ್ನಡ ಮಾಧ್ಯಮ ಅಧ್ಯಾಪಕಸಂಘದ ಸದಸ್ಯರು, ನಿವೃತ್ತ ಕನ್ನಡ ನೌಕರರು, ಕನ್ನಡ ಭಾಷಾಭಿಮಾನಿಗಳು, ಸ್ಥಳೀಯಾಡಳಿತ ಸಂಸ್ಥೆಗಳ ಆಯ್ಕೆಗೊಂಡ ಕನ್ನಡಜನ ಪ್ರತಿನಿಧಿಗಳು, ವಿವಿಧ ರಾಜಕೀಯ ಪಕ್ಷಗಳ ನಾಯಕರು ಭಾಗವಹಿಸುವರು.

