HEALTH TIPS

ಫೆ.28 ರಿಂದ ನೀರ್ಚಾಲು ಶ್ರೀ ಕುಮಾರಸ್ವಾಮಿ ಭಜನಾ ಮಂದಿರದ ನವೀಕರಣ ಪುನಃಪ್ರತಿಷ್ಠಾ ಮಹೋತ್ಸವ

ಬದಿಯಡ್ಕ: ನೀರ್ಚಾಲು ಶ್ರೀ ಕುಮಾರಸ್ವಾಮಿ ಭಜನಾ ಮಂದಿರದ ನವೀಕರಣ ಪುನಃಪ್ರತಿಷ್ಠಾ ಮಹೋತ್ಸವ ಫೆ.28 ರಿಂದ ಮಾರ್ಚ್ 2ರ ವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಲಿರುವುದು. ಶ್ರೀ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರ ದಿವ್ಯ ಉಪಸ್ಥಿತಿಯಲ್ಲಿ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ ಇವರ ಮಾರ್ಗದರ್ಶನದಲ್ಲಿ ಬ್ರಹ್ಮಶ್ರೀ ವೇದಮೂರ್ತಿ ಶಿವಶಂಕರ ಭ1ಟ್ ಕಿಳಿಂಗಾರು ಇವರ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಗಳು ಜರಗಲಿವೆ. 


ಫೆ.28 ರಂದು ಶನಿವಾರ ಸಂಜೆ 3.30ಕ್ಕೆ ಹಸಿರುವಾಣಿ ಹೊರೆಕಾಣಿಕೆ ಕುಮಾರಮಂಗಲ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಿಂದ ಹೊರಟು ಬದಿಯಡ್ಕ ಪೇಟೆಯಲ್ಲಿ ಸಾಗಿ ನೀರ್ಚಾಲು ಶ್ರೀ ಧರ್ಮಶಾಸ್ತಾ ಭಜನಾ ಮಂದಿರಕ್ಕೆ ಬಂದು ನೀರ್ಚಾಲು ಪೇಟೆಯ ಮೂಲಕ ಶ್ರೀ ಕುಮಾರಸ್ವಾಮಿ ಭಜನಾ ಮಂದಿರಕ್ಕೆ ತಲುಪಲಿದೆ. ಮಾರ್ಚ್ 1 ರಂದು ಭಾನುವಾರ ಪ್ರಾತಃಕಾಲ 6ಕ್ಕೆ ಗಣಪತಿ ಹೋಮ, ದೀಪ ಪ್ರತಿಷ್ಠೆ, ಧಾರ್ಮಿಕ ಮುಂದಾಳು ಪಿ.ಎಸ್.ಗೋಪಾಲ ಭಟ್ ಪಟ್ಟಾಜೆ ಇವರಿಂದ ದೀಪ ಪ್ರಜ್ವಲನೆ, ವಿವಿಧ ಭಜನಾ ಸಂಘಗಳಿಂದ ಭಜನೆ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಭೋಜನ ಪ್ರಸಾದ ನಡೆಯಲಿದೆ. ಮಧ್ಯಾಹ್ನ 1ಕ್ಕೆ ಜ್ಯೋತಿಷ್ಯ ವಿದ್ವಾನ್ ವೆಂಕಟೇಶ್ವರ ಭಟ್ ಕುಂಜಾರು ಮೈಸೂರು ಇವರಿಂದ ಸಾಂಸ್ಕøತಿಕ ಕಾರ್ಯಕ್ರಮಗಳ ಉದ್ಘಾಟನೆ, 1.15 ರಿಂದ ಸೂರ್ಯನಾರಾಯಣ ಪದಕಣ್ಣಾಯ ಬಾಯಾರು ಇವರ ಶಿಷ್ಯವೃಂದ ಶ್ರೀ ಕುಮಾರಸ್ವಾಮಿ ಯಕ್ಷಗಾನ ಕಲಾಕೇಂದ್ರ ನೀರ್ಚಾಲು ಇವರಿಂದ ರಂಗಸಿರಿ ಸಾಂಸ್ಕøತಿಕ ವೇದಿಕೆ ಬದಿಯಡ್ಕ ಇವರ ಸಹಕಾರದೊಂದಿಗೆ ಯಕ್ಷಗಾನ ಬಯಲಾಟ, ಸಂಜೆ 3.50ಕ್ಕೆ ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠದ ಶ್ರೀ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮೀಜಿಗಳವರ ಆಗಮನ, ಪೂರ್ಣಕುಂಭ ಸ್ವಾಗತ, 4 ರಿಂದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನಡೆಯಲಿದೆ. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಭಟ್ ಅಧ್ಯಕ್ಷತೆ ವಹಿಸುವರು. ಜ್ಯೋತಿಷ್ಯ ವಿದ್ವಾನ್ ವೆಂಕಟೇಶ್ವರ ಭಟ್ ಕುಂಜಾರು ಮೈಸೂರು ಗೌರವ ಉಪಸ್ಥಿತರಿರುವರು. ಮುಖ್ಯ ಅತಿಥಿಗಳಾಗಿ ಬದಿಯಡ್ಕ ಗ್ರಾಮಪಂಚಾಯಿತಿ ಅಧ್ಯಕ್ಷ ಶಂಕರ ಡಿ., ಉಪಾಧ್ಯಕ್ಷೆ ಅಶ್ವಿನಿ ಕೆ.ಎಂ., ಸದಸ್ಯೆ ಬಿಂದ್ಯಾ ಕಾರ್ತಿಕ್, ಡಾ. ಜಯಶ್ರೀ ನಾಗರಾಜ್ ಶುಭಾಶಂಸನೆಗೈಯ್ಯುವರು. ಬಾಲಕೃಷ್ಣ ಆಚಾರ್ಯ ನಿರ್ಚಾಲು, ಪ್ರಧಾನ ಕಾರ್ಯದರ್ಶಿ ರವೀಂದ್ರ ಮಾಸ್ತರ್ ನೀರ್ಚಾಲು ಕಾರ್ಯಕ್ರಮ ನಿರೂಪಿಸಲಿದ್ದಾರೆ. ಸಂಜೆ 5.30ಕ್ಕೆ ಸುರೇಶ್ ಕಂಬಾರು ಮತ್ತು ಬಳಗ ಬೆಂಗಳೂರು ಇವರಿಂದ ಶಾಸ್ತ್ರೀಯ ಸಂಗೀತ, ಸಂಜೆ 6ಕ್ಕೆ ಪ್ರಾಸಾದ ಶುದ್ಧಿ, ವಾಸ್ತುಹವನ, ರಾಕ್ಷೋಘ್ನ ಹೋಮ, ವಾಸ್ತುಬಲಿ, ಅಧಿವಾಸಾಗಳ ಕಲಶ ಪ್ರತಿಷ್ಠೆ, 7 ರಿಂದ ವಿದುಷಿ ಡಾ. ವಿದ್ಯಾಲಕ್ಷ್ಮೀ ನಾಟ್ಯವಿದ್ಯಾಲಯ ಕುಂಬಳೆ ಇವರ ಶಿಷ್ಯವೃಂದದವರಿಂದ ನೃತ್ಯಾರ್ಪಣಂ, 9ಕ್ಕೆ ಮಹಾಪೂಜೆ, ಪ್ರಸಾದವಿತರಣೆ ನಡೆಯಲಿದೆ. 9.15ಕ್ಕೆ ಕರಾಟೆ ಪ್ರದರ್ಶನ, ಸೆನ್‍ಸಯಿ ಸೌಮ್ಯ ಮತ್ತು ಬಳಗ ಕರಾಟೆ ಅಕಾಡೆಮಿ ನೀರ್ಚಾಲು, 10ಕ್ಕೆ ಏಷ್ಯಾನೆಟ್ ಖ್ಯಾತಿಯ ಏಸುದಾಸ್ ಸ್ವರಮಾಧುರ್ಯ ಹೊಂದಿದ ರತೀಶ್ ಪರಪ್ಪ ಇವರನ್ನು ಒಳಗೊಂಡ ದೇವಗೀತಂ ಚಾರಿಟೇಬಲ್ ಟ್ರಸ್ಟ್ ಆರ್ಕೆಸ್ಟ್ರಾ ಕಾಞಂಗಾಡು ಇವರಿಂದ ರುದ್ರ ಫ್ರೆಂಡ್ಸ್ ನೀರ್ಚಾಲು ಪ್ರಾಯೋಜಕತ್ವದಲ್ಲಿ ಭಕ್ತಿ ಗಾನಾಮೃತಂ ನಡೆಯಲಿದೆ. 

ಮಾ.2 ರಂದು ಸೋಮವಾರ ಪ್ರಾತಃಕಾಲ 6.30ಕ್ಕೆ ಗಣಪತಿ ಹೋಮ, ಪ್ರತಿಷ್ಠಾ ಹವನ, ಕಲಶ ಪೂಜೆ, 7ರಿಂದ ವಿವಿಧ ಭಜನಾ ಸಂಘಗಳಿಂದ ಭಜನೆ, 10.30ಕ್ಕೆ ಶ್ರೀ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರ ಆಗಮನ, ಪೂರ್ಣಕುಂಭ ಸ್ವಾಗತ, 10.59ರ ವೃಷಭ ಲಗ್ನ ಶುಭಮುಹೂರ್ತದಲ್ಲಿ ಶ್ರೀದೇವರ ಛಾಯಾಚಿತ್ರ ಪ್ರತಿಷ್ಠೆ, ಕಲಶಾಭಿಷೇಕ, 11.30ಕ್ಕೆ ಮಹಾಪೂಜೆ, ಪ್ರಸಾದವಿತರಣೆ. 11.45ಕ್ಕೆ ಧಾರ್ಮಿಕ ಸಭೆಯಲ್ಲಿ ಎಡನೀರು ಶ್ರೀಗಳು ಆಶೀರ್ವಚನ ನೀಡುವರು. ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ ಅಧ್ಯಕ್ಷತೆ ವಹಿಸುವರು. ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿರುವರು. ಮಧ್ಯಾಹ್ನ 1.30 ರಿಂದ ಕೃಷ್ಣಕುಮಾರಿ ಮತ್ತು ಬಳಗ ನೀರ್ಚಾಲು ಇವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ, 2.30ರಿಂದ ಸ್ವರಸಿಂಚನ ನೀರ್ಚಾಲು ಇವರಿಂದ ಭಕ್ತಿರಸಮಂಜರಿ, 4.30 ರಿಂದ ಪುಟಾಣಿ ಮಕ್ಕಳಿಂದ ನೃತ್ಯ ವೈವಿಧ್ಯ ನಡೆಯಲಿದೆ. ಸಂಜೆ 6 ರಿಂದ ಸಮಾರೋಪ ಸಮಾರಂಭ ನಡೆಯಲಿದೆ. ಗೌರವಾಧ್ಯಕ್ಷ ಜಯದೇವ ಖಂಡಿಗೆ ಅಧ್ಯಕ್ಷತೆಯಲ್ಲಿ ಧಾರ್ಮಿಕ ಮುಂದಾಳು ಗೋಪಾಲಕೃಷ್ಣ ಪೈ ಬದಿಯಡ್ಕ ದೀಪಪ್ರಜ್ವಲನೆ ಮಾಡಲಿದ್ದಾರೆ. ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಶ್ರೀ ಎಡನೀರು ಮಠ, ಶ್ರೀ ಗುರುದೇವಾನಂದ ಸ್ವಾಮೀಜಿ ಶ್ರೀ ಕ್ಷೇತ್ರ ಒಡಿಯೂರು ಹಾಗೂ ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಇವರಿಂದ ಆಶೀರ್ವಚನ. ಮುಖ್ಯ ಅತಿಥಿಗಳಾಗಿ ಜ್ಯೋತಿಷರತ್ನ ಶ್ರೀ ಪದ್ಮನಾಭ ಶರ್ಮ ಬೇಳ, ಇರಿಞÁಲಕ್ಕುಡ, ಧಾರ್ಮಿಕ ಮುಮದಾಳು ಶಿವಶಂಕರ ನೆಕ್ರಾಜೆ, ಉದ್ಯಮಿ ಮಧುಸೂದನ ಆಯರ್ ಮಂಗಳೂರು ಪಾಲ್ಗೊಳ್ಳುವರು. ನಾಡಿನ ಗಣ್ಯರು ಉಪಸ್ಥಿತರಿರುವರು. ವೇದಮೂರ್ತಿ ಶಿವಶಂಕರ ಭಟ್ ಕಿಳಿಂಗಾರು ಇವರಿಗೆ ಗೌರವಾರ್ಪಣೆ, ರಮೇಶ ಕಾರಂತ ಮಂದಿರದ ವಾಸ್ತುಶಿಲ್ಪಿ, ದಾರುಶಿಲ್ಪಿ ದೇವದಾಸ ಆಚಾರ್ಯ, ಗಾರೆಶಿಲ್ಪಿ ಚಂದ್ರಮಣಿಯಾಣಿ ಬೇಳ ಇವರಿಗೆ ಸನ್ಮಾನ ನಡೆಯಲಿದೆ. ಶ್ರೀಮಂದಿರದ ಹಿರಿಯ ಸದಸ್ಯರನ್ನು ಈ ಸಂದರ್ಭದಲ್ಲಿ ಗೌರವಿಸಲಾಗುವುದು. ರಾತ್ರಿ 9ಕ್ಕೆ ಮಹಾಪೂಜೆ, 9.30ಕ್ಕೆ ಪ್ರಸಾದ ಭೋಜನ. 10 ರಿಂದ ಶಿವಾಜಿ ಫ್ರೆಂಡ್ಸ್ ನೀರ್ಚಾಲು ಪ್ರಾಯೋಜಕತ್ವದಲ್ಲಿ ಶಾರದಾ ಆರ್ಟ್ ತಂಡದ ಐಸಿರಿ ಕಲಾವಿದರು ಮಂಜೇಶ್ವರ ಇವರು ಅಭಿನಯಿಸುವ ತುಳು ಸಾಮಾಜಿಕ ನೀತಿಬೋಧಕ ನಾಟಕ ಜೈ ಭಜರಂಗ ಬಲಿ ಪ್ರದರ್ಶನಗೊಳ್ಳಲಿದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries