HEALTH TIPS

5500 ಇ-ಸೈಕಲ್‌ ವಿತರಣೆ: ಆಂಧ್ರ ಸಿ.ಎಂ ಚಂದ್ರಬಾಬು ನಾಯ್ಡು ಗಿನ್ನಿಸ್‌ ದಾಖಲೆ

ಕುಪ್ಪಂ: ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್‌.ಚಂದ್ರಬಾಬು ನಾಯ್ಡು ಅವರು ಶನಿವಾರ ಚಿತ್ತೂರು ಜಿಲ್ಲೆಯಲ್ಲಿ 24 ಗಂಟೆ ಅವಧಿಯಲ್ಲಿ ಮಹಿಳೆಯರಿಗೆ 5,500 ಇ-ಸೈಕಲ್‌ಗಳನ್ನು ವಿತರಿಸಿ, ಗಿನ್ನಿಸ್‌ ವಿಶ್ವ ದಾಖಲೆ ನಿರ್ಮಿಸಿದ್ದಾರೆ. 

ಮಹಿಳಾ ಸಬಲೀಕರಣ ಹಾಗೂ ಪರಿಸರ ಸಂರಕ್ಷಣೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಮಹಿಳೆಯರಿಗೆ 5555 ಇ-ಸೈಕಲ್‌ಗಳನ್ನು ವಿತರಿಸಲಾಗಿದೆ.

ಇವು ಮಹಿಳೆಯರಲ್ಲಿ ಆತ್ಮ ವಿಶ್ವಾಸ ಹೆಚ್ಚಿಸುವುದರ ಜತೆಗೆ ಅವರಿಗೆ ಮಾಸಿಕವಾಗಿ ₹1500 ಉಳಿತಾಯ ಮಾಡಲು ಸಹಕಾರಿಯಾಗುತ್ತವೆ. ಅಲ್ಲದೇ, ಪರಿಸರ ಸುಸ್ಥಿರತೆಯನ್ನೂ ಉತ್ತೇಜಿಸುತ್ತವೆ ಎಂದು ಸರ್ಕಾರದ ಪ್ರಕಟಣೆಯಲ್ಲಿ ತಿಳಿಸಿದೆ.

ಇ-ಮೊಟರೇಡ್‌ ಸಂಸ್ಥೆಯು ಸೈಕಲ್‌ಗಳನ್ನು ‍ಪೂರೈಸಿದ್ದು, ಕುಪ್ಪಂನಲ್ಲಿ ಅವುಗಳ ಜೋಡಣೆ ಕಾರ್ಯ ನಡೆದಿದೆ. ಒಂದು ಬಾರಿ ಚಾರ್ಜ್‌ ಮಾಡಿದರೆ ಈ ಸೈಕಲ್‌ನಲ್ಲಿ 60 ಕಿ.ಮೀ. ಕ್ರಮಿಸಬಹುದಾಗಿದೆ ಎಂದೂ ನಾಯ್ಡು ಮಾಹಿತಿ ನೀಡಿದ್ದಾರೆ. ಇದೇ ವೇಳೆ ಅವರೂ ಇ-ಸೈಕಲ್‌ನಲ್ಲಿ ಒಂದು ಸುತ್ತು ಹಾಕಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries