HEALTH TIPS

ಸಂಸದರ ಫ್ರೆಂಡ್‌ಶಿಪ್‌ ಗ್ರೂಪ್‌ ರಚನೆ; 60ಕ್ಕೂ ಹೆಚ್ಚು ದೇಶಗಳ 700 ಸಂಸದರು ಭಾಗಿ

ನವದೆಹಲಿ: 60ಕ್ಕೂ ಹೆಚ್ಚು ದೇಶಗಳ 700 ಸಂಸದರನ್ನೊಳಗೊಂಡ 'ಸಂಸದರ ಫ್ರೆಂಡ್‌ಶಿಫ್‌ ಗ್ರೂಪ್‌'ಗಳನ್ನು ಲೋಕಸಭಾ ಸ್ಪೀಕರ್ ಓಂಬಿರ್ಲಾ ಅವರು ಸೋಮವಾರ ರಚಿಸಿದ್ದಾರೆ. ವಿರೋಧ ಪಕ್ಷಗಳ ಸದಸ್ಯರು ಸಹ ಈ ಗ್ರೂಪ್‌ನಲ್ಲಿದ್ದಾರೆ.

ಸ್ವಜನಪಕ್ಷಪಾತ ಎಸಗುತ್ತಿದ್ದಾರೆ ಎಂದು ಆರೋಪಿಸಿ ಸ್ಪೀಕರ್ ಸ್ಥಾನದಿಂದ ಓಂ ಬಿರ್ಲಾ ಅವರನ್ನು ವಜಾಗೊಳಿಸುವ ನಿರ್ಣಯವನ್ನು ವಿರೋಧ ಪಕ್ಷಗಳು ಕೈಗೊಂಡಿರುವ ಹೊತ್ತಿನಲ್ಲೇ ಈ ನಿರ್ಧಾರ ಪ್ರಕಟಗೊಂಡಿದೆ.

64 ಗುಂಪುಗಳನ್ನು ರಚಿಸಲಾಗಿದ್ದು, ಪ್ರತಿಯೊಂದು ಗುಂಪಿನಲ್ಲಿಯೂ ಕನಿಷ್ಠ ಒಬ್ಬ ಸಂಸದೆ ಸೇರಿದಂತೆ ತಲಾ 11 ಸಂಸದರು ಇರಲಿದ್ದಾರೆ. ಬಜೆಟ್‌ ಅಧಿವೇಶನದಲ್ಲಿ ಅಮಾನತುಗೊಂಡ ಸಂಸದರು ಸಹ ಈ ಗ್ರೂಪ್‌ಗಳಲ್ಲಿ ಸ್ಥಾನ ಪಡೆದಿದ್ದಾರೆ.

ವಿವಿಧ ದೇಶಗಳ ಶಾಸಕಾಂಗಗಳೊಂದಿಗೆ ಸಂವಾದ ನಡೆಸಲು ಹಾಗೂ ರಾಜತಾಂತ್ರಿಕತೆಗೆ ನಿರಂತರ ಸಂಸದೀಯ ಸಂವಹನದೊಂದಿಗೆ ಪೂರಕ ವಾತಾವರಣ ಸೃಷ್ಟಿಸಲು ಈ ಗುಂಪುಗಳನ್ನು ರಚಿಸಲಾಗಿದೆ ಎನ್ನಲಾಗಿದೆ.

ಕೆ.ಸಿ. ವೇಣುಗೋಪಾಲ್, ಗೌರವ್ ಗೊಗೊಯ್, ಶಶಿ ತರೂರ್‌, ಪಿ. ಚಿದಂಬರಂ (ಕಾಂಗ್ರೆಸ್‌), ಅಭಿಷೇಕ್ ಬ್ಯಾನರ್ಜಿ, ಡೆರೆಕ್ ಒಬ್ರಯಾನ್‌ (ತೃಣಮೂಲ ಕಾಂಗ್ರೆಸ್‌), ಅಖಿಲೇಶ್‌ ಯಾದವ್ (ಸಮಾಜವಾದಿ ಪಕ್ಷ), ಅಸಾದುದ್ದೀನ್ ಓವೈಸಿ (ಎಐಎಂಐಎಂ), ಅರವಿಂದ್ ಸಾವಂತ್ (ಶಿವಸೇನಾ- ಯುಬಿಟಿ), ಸುಪ್ರಿಯಾ ಸುಳೆ (ಎನ್‌ಸಿಪಿ-ಎಸ್‌ಪಿ), ಬಿಜೆಪಿ ನಾಯಕರಾದ ರವಿಶಂಕರ್ ಪ್ರಸಾದ್, ಬೈಜಯಂತ್ ಪಾಂಡಾ, ನಿಶಿಕಾಂತ್ ದುಬೆ, ಅನುರಾಗ್ ಠಾಕೂರ್ ಅವರು ಈ ಗ್ರೂಪ್‌ಗಳ ಮುಖ್ಯಸ್ಥರಾಗಿ ನೇಮಕಗೊಂಡಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries