HEALTH TIPS

ಗಾಜಾ ಪರಿಹಾರ: 7 ಬಿಲಿಯನ್‌ ಡಾಲರ್‌ ನೆರವು

ವಾಷಿಂಗ್ಟನ್‌: ಯುದ್ಧಪೀಡಿತ ಗಾಜಾದಲ್ಲಿನ ಪರಿಹಾರ ಕಾರ್ಯಾಚರಣೆಗಳಿಗಾಗಿ ಶಾಂತಿ ಮಂಡಳಿಯ ಒಂಬತ್ತು ಸದಸ್ಯ ರಾಷ್ಟ್ರಗಳು 7 ಬಿಲಿಯನ್ ಡಾಲರ್‌ (₹63 ಸಾವಿರ ಕೋಟಿ) ನೀಡಲು ಒಪ್ಪಿಕೊಂಡಿವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಗುರುವಾರ ಹೇಳಿದ್ದಾರೆ. 

ಗಾಜಾ ಪುನರ್ ನಿರ್ಮಾಣಕ್ಕಾಗಿ ರಚಿಸಿರುವ ಶಾಂತಿ ಮಂಡಳಿಯ ಉದ್ಘಾಟನಾ ಸಭೆಯಲ್ಲಿ ಟ್ರಂಪ್‌ ಅವರು ಈ ಘೋಷಣೆ ಮಾಡಿದ್ದಾರೆ.

'ಕಜಕಸ್ತಾನ, ಅಜರ್‌ಬೈಜಾನ್, ಯುಎಇ, ಮೊರೊಕೊ, ಬಹರೇನ್‌, ಕತಾರ್‌, ಸೌದಿ ಅರೇಬಿಯಾ, ಉಜ್ಬೇಕಿಸ್ತಾನ ಹಾಗೂ ಕುವೈತ್‌ ರಾಷ್ಟ್ರಗಳು ಈ ಅನುದಾನ ನೀಡಲು ಒಪ್ಪಿಕೊಂಡಿವೆ. ಪ್ರತಿಯೊಂದು ಡಾಲರ್‌ ಕೂಡ ಸ್ಥಿರತೆ ಹಾಗೂ ಹೊಸ ಪ್ರಾಂತ್ಯದ ಸ್ಥಾಪನೆಯ ಭರವಸೆಯ ಮೇಲೆ ಮಾಡುತ್ತಿರುವ ಹೂಡಿಕೆಯಾಗಿದ್ದು, ದಾನಿಗಳಿಗೆ ಧನ್ಯವಾದ ತಿಳಿಸುತ್ತೇನೆ' ಎಂದೂ ಟ್ರಂಪ್‌ ಹೇಳಿದ್ದಾರೆ.

ಅಮೆರಿಕ ಕೂಡ ಮಂಡಳಿಗೆ 10 ಬಿಲಿಯನ್‌ ಡಾಲರ್‌ (₹91 ಸಾವಿರ ಕೋಟಿ) ನೀಡುವ ಬದ್ಧತೆ ಘೋಷಿಸಿದೆ ಎಂದೂ ಟ್ರಂಪ್‌ ಹೇಳಿದ್ದಾರೆ. ಆದರೆ, ಯಾವ ಉದ್ದೇಶಕ್ಕೆ ಆ ಹಣವನ್ನು ಬಳಕೆ ಮಾಡಲಾಗುತ್ತದೆ ಎಂಬುದರ ಬಗ್ಗೆ ಸ್ಪಷ್ಟನೆ ನೀಡಿಲ್ಲ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries