AI ಅಭಿವೃದ್ಧಿಯಲ್ಲಿ ಹೊಸದಾಗಿ ಏಕೀಕೃತವಾದ ವಿಶ್ವವನ್ನು ಕಾಣಬೇಕೆಂಬ ಬಲವಾದ ಸಂದೇಶದೊಂದಿಗೆ ಅಧ್ಯಕ್ಷರು, ಪ್ರಧಾನಮಂತ್ರಿಗಳು ಹಾಗೂ ವಿಶ್ವದ ನಾಯಕರು ಒಟ್ಟುಗೂಡಿರುವುದು ಅತ್ಯಂತ ಗಮನಾರ್ಹವಾಗಿದೆ ಎಂದು ಹೇಳಿದ್ದಾರೆ.
ಕೆಲವು ಅವ್ಯವಸ್ಥೆಗಳ ಬಗ್ಗೆ ಪ್ರತಿಕ್ರಿಯಿಸಿದ ಶಶಿ ತರೂರ್, ದೊಡ್ಡ ಕಾರ್ಯಕ್ರಮಗಳಲ್ಲಿ ಇಂತಹ ಸಮಸ್ಯೆಗಳು ಸಂಭವಿಸುವುದು ಸಹಜ ಎಂದು ಹೇಳಿದ್ದಾರೆ.
AI ಇಂಪ್ಯಾಕ್ಟ್ ಶೃಂಗಸಭೆಯ ಕುರಿತು ಕಾಂಗ್ರೆಸ್ ನಾಯಕ ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಬುಧವಾರ ವಾಗ್ದಾಳಿ ನಡೆಸಿ ಅದನ್ನು ಅಬ್ಬರದ ಪ್ರಚಾರ ಪ್ರದರ್ಶನ ಮತ್ತು ಚೀನಾದ ಉತ್ಪನ್ನಗಳನ್ನು ಅಲ್ಲಿ ಪ್ರದರ್ಶಿಸಲಾಗುತ್ತಿದೆ ಎಂದು ಆರೋಪಿಸಿದ್ದರು.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಪಕ್ಷದ ಇತರ ಹಿರಿಯ ನಾಯಕರು ಕೂಡ ಈ ಕಾರ್ಯಕ್ರಮವನ್ನು ಟೀಕಿಸಿದ್ದರು. ಕಾರ್ಯಕ್ರಮದ ಅಸಮರ್ಥ ನಿರ್ವಹಣೆ ದೇಶಕ್ಕೆ ಮುಜುಗರ ತಂದಿದೆ ಎಂದು ಹೇಳಿದ್ದರು.

