HEALTH TIPS

ಫುಟ್ಬಾಲ್ ಆಡುತ್ತಿದ್ದಾಗ ಕುಸಿದು ಬಿದ್ದು ಶಿಲ್ಲಾಂಗ್ ಸಂಸದ ಮೃತ್ಯು

ಶಿಲ್ಲಾಂಗ್: ನಗರದಲ್ಲಿ ಫುಟ್ ಬಾಲ್ ಆಡುತ್ತಿದ್ದ ವೇಳೆ ಕುಸಿದು ಬಿದ್ದು ಶಿಲ್ಲಾಂಗ್ ಲೋಕಸಭಾ ಸದಸ್ಯ ರಿಕಿ ಎಜೆ ಸೈಂಗ್ಕೋನ್ ಮೃತಪಟ್ಟಿದ್ದಾರೆ.

ಮೇಘಾಲಯದ ವಾಯ್ಸ್ ಆಫ್ ಪೀಪಲ್ ಪಕ್ಷದಿಂದ ಸಂಸದರಾಗಿ ಆಯ್ಕೆಯಾಗಿದ್ದ 54 ವರ್ಷ ವಯಸ್ಸಿನ ರಿಕಿ, ಸ್ನೇಹಿತರ ಜತೆ ಆಟವಾಡುತ್ತಿದ್ದಾಗ ಕುಸಿದು ಬಿದ್ದರು.

ತಕ್ಷಣವೇ ಅವರನ್ನು ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತು. ಬಳಿಕ ಅವರನ್ನು ನಗರದ ಡಾ.ಎಚ್.ಗೋರ್ಡೋನ್ ರಾಬಟ್ರ್ಸ್ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಅವರು ರಾತ್ರಿ 8.42ರ ವೇಳೆಗೆ ಮೃತಪಟ್ಟರು ಎಂದು ಅಧಿಕೃತ ಮೂಲಗಳು ಹೇಳಿವೆ.

ಮುಖ್ಯಮಂತ್ರಿ ಕೊನ್ರಾಡ್ ಕೆ.ಸಂಗ್ಮಾ ಈ ಘಟನೆಯ ಬಗ್ಗೆ ಆಘಾತ ವ್ಯಕ್ತಪಡಿಸಿದ್ದು, ಸಿಂಗ್ಕಾನ್ ಅತ್ಯಂತ ಬದ್ಧತೆಯ ಜನಪ್ರತಿನಿಧಿಯಾಗಿದ್ದರು ಎಂದು ಬಣ್ಣಿಸಿದ್ದಾರೆ.

ಖಾಸಿ-ಜೈಂಟಿಯಾ ಬೆಟ್ಟ ಪ್ರದೇಶಗಳಲ್ಲಿ ಸಾರ್ವಜನಿಕ ತೊಡಗಿಸಿಕೊಳ್ಳುವಿಕೆಯಿಂದ ಜನಪ್ರಿಯರಾಗಿದ್ದ ಸೈಂಗ್ಕಾನ್ ಶಿಲ್ಲಾಂಗ್ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರು. ಅವರು 2024ರ ಚುನಾವಣೆಯಲ್ಲಿ ಎದುರಾಳಿ ಕಾಂಗ್ರೆಸ್ ಸಂಸದ ವಿನ್ಸೆಂಟ್ ಎಚ್ ಪಾಲಾ ವಿರುದ್ಧ 3.7 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries