ಕೃತಕಬುದ್ಧಿ ಮತ್ತೆ ಕ್ಷೇತ್ರದಲ್ಲಿ ಮಹತ್ವದ ಸಾಧನೆಗಾಗಿ ಹೊಸದಿಲ್ಲಿಯಲ್ಲಿ ಎಐ ಇಂಪ್ಯಾಕ್ಟ್ ಶೃಂಗಸಭೆ-2026 ನಡೆಯುತ್ತಿರುವ ಸಮಯದಲ್ಲೇ ಈ ಅತ್ಯಾಧುನಿಕ ತಂತ್ರಜ್ಞಾನದ ಲೋಪಗಳ ಬಗ್ಗೆ ಸುಪ್ರೀಂಕೋರ್ಟ್ ಎಚ್ಚರಿಕೆ ನೀಡಿರುವುದು ಗಮನಾರ್ಹವಾಗಿದೆ.
''ಕೆಲವು ನ್ಯಾಯವಾದಿಗಳು ಪತ್ರದ ಕರಡುರಚಿಸಲು ಎಐ ಬಳಸಲು ಆರಂಭಿಸಿರುವುದು ನಮ್ಮ ಗಮನಕ್ಕೆ ಬಂದಿದೆ. ಇದು ಖಂಡಿತವಾಗಿಯೂ ಅನಪೇಕ್ಷಣೀಯವಾದುದು'' ಎಂದು ಸಿಜೆಐ ತಿಳಿಸಿದರು. ಸೂಕ್ತವಾದ ದೃಢೀಕರಣವಿಲ್ಲದೆ ನ್ಯಾಯಾಲಯಕ್ಕೆ ಅರ್ಜಿಗಳನ್ನು ಸಲ್ಲಿಸುವುದಕ್ಕೆ ಎಐ ಬಳಕೆ ಹೆಚ್ಚುತ್ತಿದೆ ಎಂದು ಸಿಜೆಐ ತಿಳಿಸಿದರು.
ನ್ಯಾಯಪೀಠದ ಇತರ ಇಬ್ಬರು ನ್ಯಾಯಾಧೀಶರಾದ ಜಾಯ್ಮಾಲ್ಯಾ ಬಾಗ್ಚಿ ಆಹಗೂ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರು ಕೂಡಾ ಅರ್ಜಿಗಳನ್ನು ಬರೆಯಲು ಎಐ ಬಳಸುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ರಾಜಕೀಯ ಭಾಷಣಗಳಿಗೆ ಸಂಬಂಧಿಸಿ ಮಾರ್ಗದರ್ಶಿಸೂತ್ರಗಳನ್ನು ರಚಿಸುವಂತೆ ಕೋರಿ ಶಿಕ್ಷಣತಜ್ಞೆ ರೂಪ ರೇಖಾ ವರ್ಮಾ ಅವರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿಯ ಅರ್ಜಿ (ಪಿಐಎಲ್)ಯ ವಿಚಾರಣೆ ಸಂದರ್ಭ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

