ಮಾನವ ಕೇಂದ್ರೀತ ಗಡಿಕಣ್ಗಾವಲು ವ್ಯವಸ್ಥೆಯ ಮೇಲಿನ ಅವಲಂಬನೆಯನ್ನು ಕಡಿಮೆಗೊಳಿಸುವುದರ ಜೊತೆಗೆ ಸ್ವಯಂಚಾಲಿತ ಹಾಗೂ ತಕ್ಷಣದ ಬೇಹುಗಾರಿಕಾ ಮಾಹಿತಿಯನ್ನು ಒದಗಿಸುವ ಮೂಲಕ ಗಡಿಗಳನ್ನು ಸುಭದ್ರವಾಗಿಡುವ ಉದ್ದೇಶ ಇದಾಗಿದೆ.
ಗಡಿಗಳ ಸುರಕ್ಷತೆಗೆ ಮುಂದಿನ ತಲೆಮಾರಿನ ಕಣ್ಗಾವಲು ವ್ಯವಸ್ಥೆಯ ನೀಲನಕಾಶೆಯನ್ನು 2025ರ ಡಿಸೆಂಬರ್ನಲ್ಲಿ ಅಂತಿಮಗೊಳಿಸಲಾಗಿತ್ತು. ಏಕೀಕೃತ AI ಪ್ಲಾಟ್ಫಾರ್ಮ್ ಅನ್ನು ನಿಯೋಜಿಸುವುದೇ BSFನ ಉದ್ದೇಶವಾಗಿದೆ.
ಗಡಿಗಳಲ್ಲಿ ಒಳನುಸುಳುವಿಕೆ ಪತ್ತೆಹಚ್ಚುವಿಕೆ, ಸಂಚಾರ ವೀಕ್ಷಣೆ ಹಾಗೂ ಇತರ ಸೆನ್ಸರ್ ದತ್ತಾಂಶಗಳ ಏಕೀಕೃತ ಪರಿಷ್ಕರಣೆಗಳನ್ನು ಈ ವ್ಯವಸ್ಥೆ ಒದಗಿಸಲಿದೆ. ಈಗ ಅಳವಡಿಸಲಾಗಿರುವ ಅಥವಾ ನೂತನ ಸಿಸಿಟಿವಿ ಕ್ಯಾಮರಾಗಳಿಂದ ನೇರ ವೀಡಿಯೊ ಪ್ರಸಾರವೂ ಈ ವ್ಯವಸ್ಥೆಯಡಿ ಲಭ್ಯವಾಗಲಿದೆ.

