HEALTH TIPS

ಕೇರಳ: ಗೋಮಾಂಸ ಉತ್ಸವಕ್ಕೆ ಮುಸ್ಲಿಂ ಲೀಗ್ ವಿರೋಧ

ಕೋಝಿಕ್ಕೋಡ್‌: 'ಕೇರಳ ಸ್ಟೋರಿ 2' ಚಿತ್ರದ ವಿರುದ್ಧ ಆಡಳಿತಾರೂಢ ಸಿಪಿಎಂನ ವಿದ್ಯಾರ್ಥಿ ಸಂಘಟನೆ ಎಸ್‌ಎಫ್‌ಐ ನಡೆಸಿದ 'ಗೋಮಾಂಸ ಉತ್ಸವ'ವನ್ನು ಮುಸ್ಲಿಂ ಲೀಗ್ ಭಾನುವಾರ ಟೀಕಿಸಿದ್ದು, ಇದನ್ನು 'ಪ್ರಚೋದನಕಾರಿ ಪ್ರತಿಭಟನೆ' ಎಂದು ಹೇಳಿದೆ.

'ಗೋಮಾಂಸ ಉತ್ಸವವು ಮುಸ್ಲಿಂ ಮತದಾರರನ್ನು ದಾರಿ ತಪ್ಪಿಸಲು, ವಂಚಿಸಲು ಮತ್ತು ಓಲೈಸಲು ಸಿಪಿಎಂ ಮಾಡಿರುವ ಅಗ್ಗದ ಗಿಮಿಕ್' ಎಂದು ಮುಸ್ಲಿಂ ಲೀಗ್‌ನ ರಾಜ್ಯ ಕಾರ್ಯದರ್ಶಿ ಪಿ.ಎಂ.ಎ ಸಲಾಂ ಆರೋಪಿಸಿದ್ದಾರೆ.

'ಯಾವುದೇ ಸಮುದಾಯಕ್ಕೂ, ಗೋಮಾಂಸಕ್ಕೂ ಸಂಬಂಧ ಇಲ್ಲ. ಭಾರತದ ಕೆಲವು ಬೃಹತ್ ಗೋಮಾಂಸ ರಫ್ತುದಾರರು ಮತ್ತು ಸಂಸ್ಕರಣಾ ಘಟಕಗಳ ಮಾಲೀಕರಲ್ಲಿ ಬಿಜೆಪಿ, ಆರ್‌.ಎಸ್‌.ಎಸ್. ಮತ್ತು ಮುಸ್ಲಿಮರೊಂದಿಗೆ ಸಂಬಂಧ ಹೊಂದಿರುವ ಜನರು ಇದ್ದಾರೆ' ಎಂದು ಅವರು ಹೇಳಿದ್ದಾರೆ.

'ಕೇರಳ ಸ್ಟೋರಿ 2' ಚಿತ್ರವನ್ನು ಟೀಕಿಸಿದ ಸಲಾಂ ಅವರು, 'ಗೋಮಾಂಸ ತಿನ್ನದವರನ್ನು ಯಾರೂ ತಿನ್ನಿ ಎಂದು ಒತ್ತಾಯಿಸುತ್ತಿಲ್ಲ. ಇಂತಹ ಚಿತ್ರಗಳು ಸಮುದಾಯಗಳ ನಡುವೆ ವಿಭಜನೆಯನ್ನು ಸೃಷ್ಟಿಸುತ್ತವೆ' ಎಂದು ಆರೋಪಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries