HEALTH TIPS

ಮೆಕ್ಸಿಕೊ ಸೇನೆ ಕಾರ್ಯಾಚರಣೆ: ಡ್ರಗ್ಸ್‌ ಜಾಲದ ಪಾತಕಿ 'ಎಲ್‌ ಮೆಂಚೊ' ಹತ್ಯೆ

ಮೆಕ್ಸಿಕೊ ಸಿಟಿ: ಮೆಕ್ಸಿಕೊದ ಡ್ರಗ್ಸ್‌ ಜಾಲದ ಪಾತಕಿ, 'ಜಾಲಿಸ್ಕೊ ​​ನ್ಯೂ ಜನರೇಷನ್‌ ಕಾರ್ಟೆಲ್‌' ಸಂಘಟನೆಯ ನಾಯಕ 'ಎಲ್‌ ಮೆಂಚೊ' ಎಂದೇ ಕರೆಯುವ ನೆಮೆಸಿಯೊ ರುಬೆನ್‌ ಒಸೆಗುರಾ ಸೆರ್ವಾಂಟೆಸ್‌ ಎಂಬಾತನನ್ನು ಮೆಕ್ಸಿಕೊ ಸೇನೆ ಭಾನುವಾರ ಹತ್ಯೆ ಮಾಡಿದೆ.

'ಜಾಲಿಸ್ಕೊದ ಟಪಲ್ಪಾದಲ್ಲಿ ಸೇನೆಯು ನಡೆಸಿದ ಕಾರ್ಯಾಚರಣೆಯಲ್ಲಿ ಎಲ್‌ ಮೆಂಚೊ ಗಾಯಗೊಂಡ. ಆತನನ್ನು ಮೆಕ್ಸಿಕೊ ನಗರಕ್ಕೆ ವಿಮಾನದಲ್ಲಿ ಕರೆದೊಯ್ಯುವಾಗ ಮೃತಪಟ್ಟ. ಇದೇ ವೇಳೆ, ಇನ್ನೂ ಮೂವರನ್ನು ಹತ್ಯೆ ಮಾಡಲಾಗಿದ್ದು, ಇಬ್ಬರನ್ನು ಬಂಧಿಸಲಾಗಿದೆ. ಶಸ್ತ್ರಸಜ್ಜಿತ ವಾಹನಗಳು, ರಾಕೆಟ್‌ ಲಾಂಚರ್‌ಗಳು ಮತ್ತು ಇತರ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಮೂವರು ಯೋಧರು ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ' ಎಂದು ರಕ್ಷಣಾ ಇಲಾಖೆ ತಿಳಿಸಿದೆ.

ಜಾಲಿಸ್ಕೊನಿಂದ ಅಮೆರಿಕಕ್ಕೆ ಅತಿಹೆಚ್ಚು ಪ್ರಮಾಣದಲ್ಲಿ ಫೆಂಟಾನಿಲ್‌ ಮತ್ತು ಇತರ ಮಾದಕವಸ್ತುಗಳನ್ನು ಸಾಗಿಸಲಾಗುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

'ಈ ಕಾರ್ಯಾಚರಣೆಯನ್ನು ಮೆಕ್ಸಿಕೊದ ವಿಶೇಷ ಪಡೆಗಳು ದ್ವಿಪಕ್ಷೀಯ ಸಹಕಾರದ ಚೌಕಟ್ಟಿನೊಳಗೆ ನಡೆಸಿವೆ. ಇದಕ್ಕೆ ಪೂರಕವಾದ ಗುಪ್ತಚರ ಮಾಹಿತಿಯನ್ನು ಅಮೆರಿಕದ ಅಧಿಕಾರಿಗಳು ಒದಗಿಸಿದ್ದಾರೆ' ಎಂದು ಮೆಕ್ಸಿಕೊದಲ್ಲಿರುವ ಅಮೆರಿಕದ ರಾಯಭಾರ ಕಚೇರಿಯು 'ಎಕ್ಸ್‌'ನಲ್ಲಿ ತಿಳಿಸಿದೆ.

1.5 ಕೋಟಿ ಡಾಲರ್‌ ಘೋಷಣೆ:

ಎಲ್‌ ಮೆಂಚೊನನ್ನು ಬಂಧಿಸುವ ಬಗ್ಗೆ ಮಾಹಿತಿ ನೀಡಿದವರಿಗೆ 1.5 ಕೋಟಿ ಡಾಲರ್‌ (ಸುಮಾರು ₹125 ಕೋಟಿ) ಬಹುಮಾನ ನೀಡುವುದಾಗಿ ಅಮೆರಿಕ ಘೋಷಿಸಿತ್ತು.

'ಸಿಜೆಎನ್‌ಜಿ' ಎಂದು ಕರೆಯುವ 'ಜಾಲಿಸ್ಕೊ ​​ನ್ಯೂ ಜನರೇಷನ್‌ ಕಾರ್ಟೆಲ್‌' ಮೆಕ್ಸಿಕೊದಲ್ಲಿ ಅತ್ಯಂತ ಶಕ್ತಿಶಾಲಿ ಮತ್ತು ವೇಗವಾಗಿ ಬೆಳೆಯುತ್ತಿರುವ ಕ್ರಿಮಿನಲ್‌ ಸಂಘಟನೆಗಳಲ್ಲಿ ಒಂದಾಗಿದೆ. ಇದನ್ನು 2009ರಲ್ಲಿ ಸ್ಥಾಪಿಸಲಾಗಿತ್ತು. ಇದನ್ನು ಟ್ರಂಪ್ ಆಡಳಿತವು 'ವಿದೇಶಿ ಭಯೋತ್ಪಾದಕ ಸಂಘಟನೆ' ಎಂದು ಫೆಬ್ರುವರಿಯಲ್ಲಿ ಘೋಷಿಸಿತ್ತು.

'ರಸ್ತೆ ತಡೆ ವಾಹನಗಳಿಗೆ ಬೆಂಕಿ'

ಎಲ್‌ ಮೆಂಚೊನ ಹತ್ಯೆ ನಂತರ ವಿವಿಧ ಭಾಗಗಳಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಜಾಲಿಸ್ಕೊ ಮತ್ತು ಇತರ ರಾಜ್ಯಗಳಲ್ಲಿ ರಸ್ತೆ ತಡೆ ಹಾಗೂ ವಾಹನಗಳಿಗೆ ಬೆಂಕಿ ಹಚ್ಚುವ ಘಟನೆಗಳು ನಡೆದಿವೆ. ಜಾಲಿಸ್ಕೊದ ಪ್ರವಾಸಿ ತಾಣ ಪೋರ್ಟೊ ವಲ್ಲಾರ್ಟಾದಲ್ಲಿ ದೊಡ್ಡ ಪ್ರಮಾಣದಲ್ಲಿ ಹೊಗೆ ಏಳುತ್ತಿರುವುದು ಮತ್ತು ಗ್ವಾಡಲಜಾರದ ವಿಮಾನ ನಿಲ್ದಾಣದಲ್ಲಿ ಜನರು ಭಯಭೀತರಾಗಿ ಓಡುತ್ತಿರುವ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಪೋರ್ಟೊ ವಲ್ಲಾರ್ಟಾಗೆ ವಿಮಾನ ಹಾರಾಟವನ್ನು ಸ್ಥಗಿತಗೊಳಿಸಿರುವುದಾಗಿ ಏರ್‌ ಕೆನಡಾ ಸಂಸ್ಥೆಯು ಭಾನುವಾರ ಮಧ್ಯಾಹ್ನ ಹೇಳಿತ್ತು. ರಾಜಧಾನಿ ಗ್ವಾಡಲಜಾರದಲ್ಲಿ ವಾಹನಗಳಿಗೆ ಬೆಂಕಿ ಹಚ್ಚಲಾಗಿದ್ದು ರಸ್ತೆಗಳು ಬಂದ್‌ ಆಗಿದ್ದವು.

'ದೇಶದಲ್ಲಿ ಸೇನಾ ಕಾರ್ಯಾಚರಣೆ ಅದಕ್ಕೆ ಸಂಬಂಧಿಸಿದಂತೆ ರಸ್ತೆ ತಡೆ ಹಾಗೂ ಅಪರಾಧ ಚಟುವಟಿಕೆಗಳು ನಡೆಯುತ್ತಿವೆ. ಜಾಲಿಸ್ಕೊ ತಮೌಲಿಪಾಸ್‌ ಮೈಕೊಕಾನ್‌ ಗುರೆರೊ ಮತ್ತು ನ್ಯೂವೊ ಲಿಯಾನ್‌ ರಾಜ್ಯಗಳಲ್ಲಿರುವ ಭಾರತೀಯ ಪ್ರಜೆಗಳು ಮುಂದಿನ ಸೂಚನೆ ಬರುವವರೆಗೂ ಸುರಕ್ಷಿತ ಪ್ರದೇಶಗಳಲ್ಲಿ ಆಶ್ರಯ ಪಡೆಯಬೇಕು' ಎಂದು ಮೆಕ್ಸಿಕೊದಲ್ಲಿರುವ ಭಾರತೀಯ ರಾಯಭಾರ ಕಚೇರಿ ಸಲಹೆ ನೀಡಿದೆ. 'ಸೇನೆ ಹಾಗೂ ಪೊಲೀಸರ ಕಾರ್ಯಾಚರಣೆ ನಡೆಯುತ್ತಿರುವ ಪ್ರದೇಶಗಳಿಂದ ದೂರವಿರಿ. ಅನಗತ್ಯ ಓಡಾಟವನ್ನು ಕಡಿಮೆ ಮಾಡಿ' ಎಂದು ಸೂಚನೆ ನೀಡಿದೆ.ಸುರಕ್ಷಿತ ಪ್ರದೇಶಗಳಿಗೆ ತೆರಳಲು ಸಲಹೆ

ಯುವಕನಾಗಿದ್ದಲೇ ಡ್ರಗ್ಸ್‌ ದಂಧೆ ಆರಂಭಿಸಿದ್ದ ಎಲ್‌ ಮೆಂಚೊ

1966ರಲ್ಲಿ ಮೆಕ್ಸಿಕೊದ ಪಶ್ಚಿಮ ರಾಜ್ಯ ಅಗಿಲೀಲಾದಲ್ಲಿ ಎಲ್‌ ಮೆಂಚೊ ಜನಿಸಿದ. 1990ರ ದಶಕದಲ್ಲಿ ಮಾದಕವಸ್ತು ವ್ಯಾಪಾರ ಮತ್ತು ಕಳ್ಳಸಾಗಣೆಯಲ್ಲಿ ಭಾಗಿಯಾದ ಎಲ್‌ ಮೆಂಚೊ ಬಹುಬೇಗಮಾದಕ ವಸ್ತುಗಳ ಮಾರಾಟದಲ್ಲಿ ಗುರುತಿಸಿಕೊಂಡ.

ಬಳಿಕ ಅಮೆರಿಕಕ್ಕೆ ತೆರಳಿ 1994ರಲ್ಲಿ ಕ್ಯಾಲಿಫೋರ್ನಿಯಾದಲ್ಲಿ ಹೆರಾಯಿನ್‌ ಆಕ್ರಮ ಸಾಗಣೆಯ ಪಿತೂರಿ ನಡೆಸಿದ್ದಕ್ಕಾಗಿ ಶಿಕ್ಷೆಗೊಳಗಾದ. ಅಲ್ಲಿನ ನ್ಯಾಯಾಲಯ ಎಲ್‌ ಮೆಂಚೊನನ್ನು ಮೆಕ್ಸಿಕೊಕ್ಕೆ ಗಡಿಪಾರು ಮಾಡಿತು ಎಂದು ಬ್ಲೂಮ್ ಬರ್ಗ್ ವರದಿ ಮಾಡಿದೆ.

ಈತ ಕೆಲ ಕಾಲ ಪೊಲೀಸ್‌ ಅಧಿಕಾರಿಯೂ ಆಗಿದ್ದ. ಗಡಿಪಾರಿನ ನಂತರ ಮೆಕ್ಸಿಕೊದಲ್ಲಿ ನೆಲಸಿದ್ದ ಒಸೆಗುರಾ ಆ ಸಮಯದಲ್ಲಿ ಸಿನಾಲೋವಾ ಕಾರ್ಟೆಲ್ ಸಂಘಟನೆಯ ಹಿರಿಯ ಡ್ರಗ್‌ ಪೆಡ್ಲರ್‌ ನ್ಯಾಚೊ ಕರೋನಲ್‌ ಎಂದೇ ಖ್ಯಾತಿಯಾದ ಇಗ್ನಾಸಿಯೊ ಕರೋನಲ್‌ ವಿಲ್ದಾರಿಯಲ್‌ ಜೊತೆಗೆ ಸಂಪರ್ಕ ಸಾಧಿಸಿದ. ನಂತರ ಇಬ್ಬರು ಒಟ್ಟಾಗಿ ಮಾದಕವಸ್ತು ಕಳ್ಳಸಾಗಣೆಯನ್ನು ಮತ್ತೆ ಆರಂಭಿಸಿದ್ದರು.

ಕರೋನಲ್‌ ಮರಣದ ನಂತರ ಒಸೆಗುರಾ 2009ರಲ್ಲಿ ಸಿಜೆಎನ್‌ಜಿ ಸಂಘಟನೆಯನ್ನು ಸ್ಥಾಪಿಸಿದ್ದರು ಎಂದು ವರದಿಯಾಗಿದೆ. ಒಸೆಗುರಾ ಮೇಲೆ ಹಲವು ಕೊಲೆ ಪ್ರಕರಣಗಳು ದಾಖಲಾಗಿವೆ. ಮೆಕ್ಸಿಕೊದಲ್ಲಿ ಮಾದಕ ವಸ್ತುಗಳ ಕಳ್ಳಸಾಗಣೆ ತಡೆಯಲು ಬಂದ ಅಧಿಕಾರಿಗಳನ್ನು ಹತ್ಯೆ ಮಾಡಿರುವ ಆರೋಪಗಳೂ ಇವೆ. ಈ ಸಂಘಟನೆಯ ಸದಸ್ಯರಿಂದ ಹಲವು ಅಧಿಕಾರಿಗಳು ಹತ್ಯೆಯಾಗಿದ್ದಾರೆ ಎಂದು ಅಮೆರಿಕದ ನ್ಯಾಯಾಲಯ ಹೇಳಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries