HEALTH TIPS

ಸುಧಾರಿತ ರಾಮ್‌ಜೆಟ್ ಕ್ಷಿಪಣಿ ತಂತ್ರಜ್ಞಾನದ ಯಶಸ್ವಿ ಪರೀಕ್ಷೆ; ಎಲೈಟ್ ರಾಷ್ಟ್ರಗಳ ಪಟ್ಟಿಗೆ ಸೇರಿದ ಭಾರತ

ನವದೆಹಲಿ: ಡಿಆರ್‌ಡಿಒ (DRDO) ಮಂಗಳವಾರ (ಫೆಬ್ರವರಿ 3) ಘನ ಇಂಧನ ಡಕ್ಟೆಡ್ ರಾಮ್‌ಜೆಟ್ (SFDR) ತಂತ್ರಜ್ಞಾನದ ಯಶಸ್ವಿ ಪರೀಕ್ಷೆ ನಡೆಸುವುದರೊಂದಿಗೆ ಭಾರತವು ಕ್ಷಿಪಣಿ ತಂತ್ರಜ್ಞಾನದಲ್ಲಿ ಹೊಸ ಮೈಲಿಗಲ್ಲನ್ನು ನಿರ್ಮಿಸಿದೆ. ದೀರ್ಘ ವ್ಯಾಪ್ತಿಯ ಗಾಳಿಯಿಂದ-ಗಾಳಿಗೆ ಚಿಮ್ಮುವ ಕ್ಷಿಪಣಿಗಳನ್ನು ಅಭಿವೃದ್ಧಿಪಡಿಸಲು ನೆರವಾಗುವ ಈ ತಂತ್ರಜ್ಞಾನವನ್ನು ಹೊಂದಿರುವ ಎಲಿಟ್ ರಾಷ್ಟ್ರಗಳ ಪಟ್ಟಿಗೆ ಭಾರತ ಸೇರ್ಪಡೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಘನ ಇಂಧನ ಡಕ್ಟೆಡ್ ರಾಮ್‌ಜೆಟ್ ತಂತ್ರಜ್ಞಾನವನ್ನು ಒಡಿಶಾ ಕರಾವಳಿಯ ಚಾಂಡಿಪುರದಲ್ಲಿರುವ ಇಂಟಿಗ್ರೇಟೆಡ್ ಟೆಸ್ಟ್ ರೇಂಜ್ (ITR)ನಿಂದ ಯಶಸ್ವಿಯಾಗಿ ಪರೀಕ್ಷೆ ನಡೆಸಲಾಗಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ SFDR ತಂತ್ರಜ್ಞಾನದ ಯಶಸ್ವಿ ಪ್ರದರ್ಶನಕ್ಕಾಗಿ ಡಿಆರ್‌ಡಿಒಗೆ ಅಭಿನಂದನೆ ಸಲ್ಲಿಸಿದ್ದಾರೆ.

"ಈ ಯಶಸ್ವಿ ಪ್ರದರ್ಶನದೊಂದಿಗೆ ದೀರ್ಘ ವ್ಯಾಪ್ತಿಯ ಗಾಳಿಯಿಂದ-ಗಾಳಿಗೆ ಚಿಮ್ಮುವ ಕ್ಷಿಪಣಿಗಳನ್ನು ಅಭಿವೃದ್ಧಿಪಡಿಸಲು ಸಾಧ್ಯವಾಗುವ ಈ ತಂತ್ರಜ್ಞಾನವನ್ನು ಹೊಂದಿರುವ ಎಲಿಟ್ ದೇಶಗಳ ಸಾಲಿಗೆ ಭಾರತವು ಸೇರಿದೆ. ಇದು ವಿರೋಧಿಗಳ ಮೇಲೆ ತಂತ್ರಾತ್ಮಕ ಮುನ್ನಡೆ ಸಾಧಿಸುತ್ತದೆ" ಎಂದು ಸಚಿವಾಲಯ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ನೋಜಲ್‌ರಹಿತ ಬೂಸ್ಟರ್, SFDR ಮೋಟರ್ ಮತ್ತು ಇಂಧನ ಹರಿವು ನಿಯಂತ್ರಕ ಸೇರಿದಂತೆ ಎಲ್ಲ ಉಪವ್ಯವಸ್ಥೆಗಳು, ಭೂ ಆಧಾರಿತ ಬೂಸ್ಟರ್ ಮೋಟರ್ ಮೂಲಕ ಅಗತ್ಯ ಮ್ಯಾಕ್ ಸಂಖ್ಯೆಗೆ ತಲುಪಿಸಿದ ನಂತರ ನಿರೀಕ್ಷಿತ ರೀತಿಯಲ್ಲಿ ಕಾರ್ಯನಿರ್ವಹಿಸಿವೆ ಎಂದು ಸಚಿವಾಲಯ ಹೇಳಿದೆ.

ಬಂಗಾಳ ಕೊಲ್ಲಿಯ ಕರಾವಳಿಯಲ್ಲಿರುವ ಚಾಂಡಿಪುರದ ITRನಲ್ಲಿ ನಿಯೋಜಿಸಲಾಗಿದ್ದ ಅನೇಕ ಟ್ರ್ಯಾಕಿಂಗ್ ಉಪಕರಣಗಳಿಂದ ಹಾರಾಟವನ್ನು ಟ್ರ್ಯಾಕ್ ಮಾಡಲಾಗಿದೆ. ಈ ಉಪಕರಣಗಳಿಂದ ಸಂಗ್ರಹಿಸಲಾದ ದತ್ತಾಂಶವಗಳಿಂದ ಕಾರ್ಯಾಚರಣೆ ಯಶಸ್ವಿಯಾಗಿದೆ ಎಂಬುವುದನ್ನು ದೃಢಪಡಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ

ಡಿಆರ್‌ಡಿಒನ ವಿವಿಧ ಪ್ರಯೋಗಾಲಯಗಳ ಹಿರಿಯ ವಿಜ್ಞಾನಿಗಳು ಈ ಪರೀಕ್ಷೆಯ ವೇಳೆ ಹಾಜರಿದ್ದರು. ಡಿಫೆನ್ಸ್ ರಿಸರ್ಚ್ & ಡೆವಲಪ್‌ಮೆಂಟ್ ಲ್ಯಾಬೊರೇಟರಿ, ಹೈ ಎನರ್ಜಿ ಮೆಟೀರಿಯಲ್ಸ್ ರಿಸರ್ಚ್ ಲ್ಯಾಬೊರೇಟರಿ, ರಿಸರ್ಚ್ ಸೆಂಟರ್ ಇಮಾರತ್ ಮತ್ತು ITRನ ತಂಡಗಳು ಉಡಾವಣೆಯಲ್ಲಿ ಭಾಗವಹಿಸಿ ಮೇಲ್ವಿಚಾರಣೆ ಮಾಡಿದವು.

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಹಾಗೂ ಡಿಆರ್‌ಡಿಒ ಅಧ್ಯಕ್ಷ ಸಮೀರ್ ವಿ ಕಾಮತ್ ಕೂಡ ಈ ಯಶಸ್ವಿ ಹಾರಾಟ ಪರೀಕ್ಷೆಯಲ್ಲಿ ಭಾಗವಹಿಸಿದ ಎಲ್ಲ ತಂಡಗಳಿಗೆ ಅಭಿನಂದಿಸಿದನೆ ತಿಳಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ. ಅಷ್ಟೇ ಅಲ್ಲದೇ ಈ ಯಶಸ್ವಿ ಪ್ರದರ್ಶನವು ಭಾರತದ ರಕ್ಷಣಾ ಸಂಶೋಧನಾ ಕಾರ್ಯಕ್ರಮದಲ್ಲಿ ಮಹತ್ವದ ಮೈಲಿಗಲ್ಲು, ಮುಂದಿನ ಪೀಳಿಗೆಯ ಕ್ಷಿಪಣಿ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸುವ ದೇಶದ ಸಾಮರ್ಥ್ಯವನ್ನು ಬಲಪಡಿಸುತ್ತದೆ ಎಂದು ಹೇಳಲಾಗುತ್ತಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries