ತಿರುವನಂತಪುರಂ: ಸ್ಥಳೀಯಾಡಳಿತ ಸಚಿವ ಎಂ.ಬಿ. ರಾಜೇಶ್ ಅವರು 2024-25ನೇ ಸಾಲಿನ ಸ್ಥಳೀಯಾಡಳಿತ ಸಂಸ್ಥೆಗಳಿಗೆ ಸ್ವರಾಜ್ ಟ್ರೋಫಿ, ಮಹಾತ್ಮ, ಮಹಾತ್ಮ ಅಯ್ಯಂಕಳಿ ಮತ್ತು ಲೈಫ್ ಮಿಷನ್ ಪ್ರಶಸ್ತಿಗಳನ್ನು ಘೋಷಿಸಿದರು. ಉತ್ತಮ ಆಡಳಿತ ಮತ್ತು ಅಭಿವೃದ್ಧಿ ಚಟುವಟಿಕೆಗಳಿಗಾಗಿ ನೀಡಲಾಗುವ ರಾಜ್ಯ ಮಟ್ಟದ ಪ್ರಶಸ್ತಿಗಳಲ್ಲಿ ಅತ್ಯುತ್ತಮ ಕಾರ್ಪೋರೇಷನ್ ಗೆ ಸ್ವರಾಜ್ ಟ್ರೋಫಿ ಪ್ರಶಸ್ತಿಗೆ ತಿರುವನಂತಪುರಂ ಕಾರ್ಪೋರೇಷನ್ ನ್ನು ಆಯ್ಕೆ ಮಾಡಲಾಗಿದೆ. ಕೊಲ್ಲಂ ಜಿಲ್ಲಾ ಪಂಚಾಯತ್ ಅತ್ಯುತ್ತಮ ಜಿಲ್ಲಾ ಪಂಚಾಯತ್‍ಗಳಲ್ಲಿ ಮೊದಲ ಸ್ಥಾನ ಪಡೆದಿದೆ. ಗುರುವಾಯೂರ್ ನಗರಸಭೆ ನಗರಸಭೆಗಳಲ್ಲಿ ಮೊದಲ ಸ್ಥಾನ ಪಡೆದಿದೆ. ತಿರುವನಂತಪುರಂ ಜಿಲ್ಲೆಯ ಉಳಮಲಕ್ಕಲ್ ಗ್ರಾಮ ಪಂಚಾಯತ್ ಪಂಚಾಯತ್‍ಗಳಲ್ಲಿ ಮೊದಲ ಸ್ಥಾನವನ್ನು ಪಡೆದುಕೊಂಡಿದೆ.
ಪ್ರಶಸ್ತಿಗಳ ಸಂಕ್ಷಿಪ್ತ ನೋಟ:
ಸ್ವರಾಜ್ ಟ್ರೋಫಿ ವಿಜೇತರು - ರಾಜ್ಯ ಮಟ್ಟ
• ಅತ್ಯುತ್ತಮ ಗ್ರಾಮ ಪಂಚಾಯತ್: 1. ಉಳಮಲಕ್ಕಲ್ (ತಿರುವನಂತಪುರಂ), 2. ಎಲವಳ್ಳಿ (ತ್ರಿಶೂರ್), 3. ಮಣಿಯೂರ್ (ಕೋಝಿಕೋಡ್).
• ಅತ್ಯುತ್ತಮ ಬ್ಲಾಕ್ ಪಂಚಾಯತ್: 1. ನೇಮಂ (ತಿರುವನಂತಪುರಂ), 2. ಕೊಡಕರ (ತ್ರಿಶೂರ್), 3. ಪೆರುಂಪದಪ್ಪು (ಮಲಪ್ಪುರಂ) ಮತ್ತು ಉಝವೂರ್ (ಕೊಟ್ಟಾಯಂ).
• ಅತ್ಯುತ್ತಮ ಜಿಲ್ಲಾ ಪಂಚಾಯತ್: 1. ಕೊಲ್ಲಂ, 2. ಕಣ್ಣೂರು.
• ಅತ್ಯುತ್ತಮ ನಗರಸಭೆ: 1. ಗುರುವಾಯೂರ್ (ತ್ರಿಶೂರ್), 2. ಮಟ್ಟನೂರು (ಕಣ್ಣೂರು), 3. ಕುನ್ನಂಕುಳಂ (ತ್ರಿಶೂರ್).
• ಅತ್ಯುತ್ತಮ ನಿಗಮ: ತಿರುವನಂತಪುರಂ ಮುನ್ಸಿಪಲ್ ಕಾಪೆರ್Çರೇಶನ್.
ಲೈಫ್ ಮಿಷನ್ ಪ್ರಶಸ್ತಿ 2024-25
• ಗ್ರಾಮ ಪಂಚಾಯತ್: 1. ಚೇರ್ತಲ ದಕ್ಷಿಣ (ಆಲಪ್ಪುಳ), 2. ಕೊಪ್ಪಂ (ಪಾಲಕ್ಕಾಡ್).
• ನಗರಸಭೆ: 1. ಆಲಪ್ಪುಳ ನಗರಸಭೆ, 2. ತಿರುವನಂತಪುರಂ ಕಾರ್ಪೋರೇಷನ್.
ಉದ್ಯೋಗ ಖಾತರಿ ಯೋಜನೆ ಪ್ರಶಸ್ತಿಗಳು
• ಮಹಾತ್ಮ ಅಯ್ಯಂಕಾಳಿ ಪ್ರಶಸ್ತಿ (ನಗರ): ಅತ್ಯುತ್ತಮ ನಗರಸಭೆ - ಶೋರ್ನೂರ್ (1ನೇ ಸ್ಥಾನ), ತಾನೂರ್ (2ನೇ ಸ್ಥಾನ). ಅತ್ಯುತ್ತಮ ನಿಗಮ - ಕೊಲ್ಲಂ.
ಮಹಾತ್ಮ ಪ್ರಶಸ್ತಿ (ಗ್ರಾಮೀಣ - ರಾಜ್ಯ ಮಟ್ಟ)
ಬ್ಲಾಕ್ ಪಂಚಾಯತ್: 1. ಪೆರುಂಕಡವಿಲಾ, 2. ಚಿರಾಯಿಂಕೀಝು, 3. ನೇಮಂ (ಎಲ್ಲವೂ ತಿರುವನಂತಪುರಂ ಜಿಲ್ಲೆ).
ಗ್ರಾಮ ಪಂಚಾಯತ್: 1. ಎಡವಕ (ವಯನಾಡು), 2. ಕಲ್ಲಿಕ್ಕಾಡ್ (ತಿರುವನಂತಪುರ), 3. ಪೆರುಂಕಡವಿಲ (ತಿರುವನಂತಪುರಂ).
ಇತರೆ ಪ್ರಶಸ್ತಿಗಳು:
• ಟ್ರೈಬಲ್ ಪ್ಲಸ್ ಯೋಜನೆ: ಪಾಲಕ್ಕಾಡ್ ಜಿಲ್ಲೆಯ ಅಗಳಿ ಅತ್ಯುತ್ತಮ ಗ್ರಾಮ ಪಂಚಾಯಿತಿಯಾಗಿ ಆಯ್ಕೆಯಾಗಿದೆ.

