HEALTH TIPS

ಭಾಷಣದ ಮಧ್ಯೆ ಚೆಂಡೆ ಮೇಳ: ಕುಪಿತರಾದ ಸಿಎಂ ವಿಜಯನ್

ಕೊಟ್ಟಾಯಂ: ಕೆಎಸ್‍ಟಿಎ ರಾಜ್ಯ ಸಮ್ಮೇಳನದಲ್ಲಿ ಮಾತನಾಡುತ್ತಿದ್ದಾಗ ಕೇಳಿಬಂದ ಚೆಂಡೆಯ ಶಬ್ದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನು ಕೆರಳಿಸಿತು. ತಮ್ಮ ಭಾಷಣದ ಸಮಯದಲ್ಲಿ, ಚೆಂಡೆ ಮೇಳ ಯಾವ ಕಾರ್ಯಕ್ರಮದ ಭಾಗವಾಗಿದೆ ಎಂದು ಅವರು ಬಹಿರಂಗವಾಗಿ ಕೇಳಿದರು.

ದೇಶದ ಸ್ಥಿತಿಯ ಬಗ್ಗೆ ಮಾತನಾಡುವಾಗ ಇತರರು ತನ್ನ ಮಾತನ್ನು ಕೇಳಬಾರದು ಎಂಬಂತೆ ಚೆಂಡೆ ಬಾರಿಸುತ್ತಿರುವುದು ತಮ್ಮದೇ ಸಂಘಟನೆಯ ಕೆಲವು ಸದಸ್ಯರ ಕುತ್ಸಿತ ಮನೋಸ್ಥಿತಿಯ ಸಮಕೇತವೆಂದು ಅವರು ಟೀಕಿಸಿದರು. ಕಾರ್ಯಕ್ರಮದಲ್ಲಿ ನಾನು ಹೇಳುವುದನ್ನು ನೀವು ಕೇಳಲೇ ಬಾರದೆಂಬಂತೆ ಈ ಚೆಂಡೆ ಮೇಳ ಆಯೋಜಿಸಿರುವಿರಾ ಎಂದವರು ಖಾರವಾಗಿ ಕೇಳಿದರು.

ಮೊದಲಿಗೆ, ಹೊರಗಿನ ಕೆಲವು ಪ್ರತಿಭಟನಾಕಾರರು ಅಥವಾ ಬೇರೆ ಮೆರವಣಿಗೆಯವರು ಗದ್ದಲ ಮಾಡುತ್ತಿದ್ದಾರೆ ಎಂದು ಅವರು ಭಾವಿಸಿದ್ದರು. ಆದರೆ ಸಂಘಟಕರಿಂದಲೇ ಚೆಂಡೆ ಮೇಳ ನಡೆಯುತ್ತಿರುವುದನ್ನು ತಿಳಿಸಿದು ಮುಖ್ಯಮಂತ್ರಿ ತೀವ್ರ ಕುಪಿತರಾಗಿ ಹಿಗ್ಗಾಮುಗ್ಗ ಗುಡುಗಿದರು.  


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries