HEALTH TIPS

ವಿಧಾನಸಭಾ ಚುನಾವಣೆ-ಕೇರಳದಲ್ಲಿ ಚುರುಕುಗೊಂಡ ಪ್ರಕ್ರಿಯೆ

ಕಾಸರಗೋಡು: ಕೇರಳ ಸೇರಿದಂತೆ ದೇಶದ ನಾಲ್ಕು ರಾಜ್ಯಗಳ ವಿಧಾನಸಭಾ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗ ಪೂರ್ವ ಸಿದ್ಧತೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಚುನಾವಣಾ ಕರ್ತವ್ಯ ನಿರತರಾದ ಅಧಿಕಾರಿಗಳನ್ನು ಅವರ ಸ್ವಂತ ಕ್ಷೇತ್ರದಿಂದ ಬೇರೆಡೆಗೆ ವರ್ಗಾಯಿಸಲು ಕೇರಳದ ಮುಖ್ಯ ಕಾರ್ಯದರ್ಶಿ ಮತ್ತು ಡಿಜಿಪಿ ಗೆ ಕೇಂದ್ರ ಚುನಾವಣಾ ಆಯೋಗ ಆದೇಶಿಸಿದೆ. ಚುನಾವಣಾ ಪೂರ್ವದ ಈ ಪ್ರಕ್ರಿಯೆಗೆ ಗೃಹಖಾತೆ ತಯಾರಿಯನ್ನು ಈಗಾಗಲೇ ಆರಂಭಿಸಿದೆ. ಕಳೆದ ಮೂರು ವರ್ಷಗಳಿಂದ ಒಂದೇ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಣೆಯಲ್ಲಿರುವ, ಚುನಾವಣಾ ಕಾಯಕಗಳಲ್ಲಿ ನಿರತರಾಗುವ ಸರ್ಕಾರಿ ಉದ್ಯೋಗಿಗಳಾದ ಚುನಾವಣಾ ಕರ್ತವ್ಯಗಳಲ್ಲಿ ಪಾಲ್ಗೊಳ್ಳುವ ನೌಕರರಿಗೆ ಕಡ್ಡಾಯ ವರ್ಗಾವಣೆ ನೀಡಬೇಕೆಂದು ಚುನಾಣಾ ಆಯೋಗ ಸರಕಾರಕ್ಕೆ ನಿರ್ದೇಶನ ನೀಡಿದೆ.


ಇದರಂತೆ ಜಿಲ್ಲಾಧಿಕಾರಿ, ಜಿಲ್ಲಾ ದಂಡಾಧಿಕಾರಿ(ಎಡಿಎಂ), ಸಬ್ ಡಿವಿಜನಲ್ ಮೆಜಿಸ್ಟ್ರೇಟ್, ತಹಶೀಲ್ದಾರ್, ಪೆÇಲೀಸ್ ಸಬ್ ಇನ್ಸ್ ಪೆಕ್ಟರ್ ಸೇರಿದಂತೆ ವರ್ಗಾವಣೆಗಿರುವವರಪಟ್ಟಿಯನ್ನು ಚುನಾವಣಾ ಆಯೋಗ ಸಿದ್ದಪಡಿಸಿದೆ.

ಚುನಾವಣಾ ಕರ್ತವ್ಯದಲ್ಲಿ ತೊಡಗಿಸಿಕೊಳ್ಳದ ಮತ್ತು ಆದೇಶ ಅನ್ವಯವಾಗದ ಸರ್ಕಾರಿ ನೌಕರರಿಗೆ ಇದುಬಾಧಕವಾಗದು ಜತೆಗೆ, ಮೇ 31ರ ಒಳಗೆ ನಿವೃತ್ತರಾಗುವ ನೌಕರರನ್ನು ಆದೇಶದಿಂದ ಹೊರತು ಪಡಿಸಲಾಗಿದೆ. ಈ ಹಿಂದಿನ ಚುನಾವಣಾ ಕರ್ತವ್ಯಗಳಲ್ಲಿ ಪಾಲ್ಗೊಂಡು, ಕರ್ತವ್ಯ ಲೋಪ ಎಸಗಿದ ಯಾರೊಬ್ಬರನ್ನೂ ಚುನಾವಣಾ ಕರ್ತವ್ಯಕೆ ಮರಳಿ ನೇಮಿಸದಿರುವಂತೆಯೂ ಸ್ಪಷ್ಟ ಆದೇಶವಿದೆ. ಚುನಾವಣಾ ಸಿದ್ಧತೆಯ ಎಲ್ಲಾ ಚಟುವಟಿಕೆಗಳನ್ನು ರಾಜ್ಯ ಸರ್ಕಾರ ಮತ್ತು ರಾಜ್ಯ ಚುನಾವಣಾ ಆಯೋಗ ಫೆ. 28ರ ಮೊದಲು ಕೇಂದ್ರ ಚುನಾವಣಾ ಆಯೋಗಕ್ಕೆ ತಿಳಿಸುವಂತೆಯೂ ಸೂಚಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮಾರ್ಚ್ ಮೊದಲವಾರ ನಾಲ್ಕು ರಾಜ್ಯಗಳ ವಿಧಾನಸಭಾ ಚುನಾವಣೆ ದಿನಾಂಕ ಘೋಷಣೆ ಆಗುವ ಸಾಧ್ಯತೆಗಳಿವೆ. ಕೇರಳದ ಪ್ರಸಕ್ತ ಸರ್ಕಾರದ ಆಡಳಿತಾವಧಿ ಮೇ 23ಕ್ಕೆ ಕೊನೆಗೊಳ್ಳಲಿದ್ದು, ಇದಕ್ಕೂ ಮೊದಲು ಹೊಸ ಸರ್ಕಾರ ಅಸ್ತಿತ್ವಕ್ಕೆ ಬರಬೇ

See More

ಕಾಗಿದೆ.  

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries