ಕಾಸರಗೋಡು: ಎಲ್.ಪಿ.ಎಸ್.ಟಿ. ರ್ಯಾಂಕ್‍ಲಿಸ್ಟ್ ಹೋಲ್ಡರ್ಸ್ ವತಿಯಿಂದ ಜಿಲ್ಲಾ ಶಿಕ್ಷಣಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಯಿತು. ಎಲ್‍ಪಿಎಸ್‍ಟಿ ರ್ಯಾಂಕ್‍ಲಿಸ್ಟ್ ಹೋಲ್ಡರ್ಸ್ ಎಲ್‍ಪಿಎಸ್‍ಟಿ ಪಟ್ಟಿಯಂತೆಯೇ ಪರಿಗಣಿಸಬೇಕು, ಮಕಾತಿ ಬಗ್ಗೆ ಸರ್ಕಾರ ತೋರುವ ನಿರ್ಲಕ್ಷ್ಯ ಕೊನೆಗೊಳಿಸಿ ಸರ್ಕಾರಿ ಆದೇಶವನ್ನು ಜಾರಿಗೆ ತರಬೇಕು, ಶಿಕ್ಷಕ-ವಿದ್ಯಾರ್ಥಿ ಅನುಪಾತ 1:25 ಅನ್ನು ತಕ್ಷಣ ಜಾರಿಗೆ ತರಬೇಕು ಮುಂತಾದ ಬೇಡಿಕೆ ಮುಮದಿರಿಸಿ ಧರಣಿ ನಡೆಸಯಿತು. ವಿಜಿತ್, ಗೋಕುಲ್ ಅರ್ಜುನ್ ಸಮಾರಂಭ ಉದ್ಘಾಟಿಸಿದರು.
ಜಿಲ್ಲೆಯಲ್ಲಿ 50 ಕ್ಕೂ ಹೆಚ್ಚು ನಿವೃತ್ತಿ ಹುದ್ದೆಗಳು ಖಾಲಿ ಇದ್ದು, ಯಾವುದೇ ಹುದ್ದೆಯ ಬಗ್ಗೆ ಇನ್ನೂ ವರದಿ ಸಲ್ಲಿಕೆಯಾಗಿಲ್ಲ. ಅನುಪಾತಕ್ಕನುಗುಣವಾಗಿ ನೇಮಕಾತಿನಡೆಯದಿರುವುದರಿಂದ ನೂರಾರು ಅರ್ಹ ಅಭ್ಯರ್ಥಿಗಳು ರ್ಯಾಂಕ್ ಪಟ್ಟಿಯಿಂದ ಹೊರಗುಳಿಯುವ ಪರಿಸ್ಥಿತಿಯಿದೆ. ಅಧಿಕಾರಿಗಳು ಈ ವೈಜ್ಞಾನಿಕ ಬದಲಾವಣೆಯನ್ನು ಜಾರಿಗೆ ತರಲು ಸಿದ್ಧರಾಗಿರಬೇಕು ಎಂದು ಆಗ್ರಹಿಸಲಾಯಿತು.
ದೀಪಾ, ಶಮಿನಾ, ಜಿಸ್ಸಾ, ಶಹಬಾಸ್, ಸೂರಜ್, ಶಾಕಿರತ್ ಮೊದಲಾದವರು ನೇತೃತ್ವ ನೀಡಿದರು. ಸುಮಯ್ಯ ಸ್ವಾಗತಿಸಿ, ಆಶಿದಾ ವಂದಿಸಿದರು.

