ಪೆರ್ಲ : ಮೇರಿ ಗಾವ್ ಮೇರಿ ಧರೋಹರ್ ಎಂಬ ಧ್ಯೇಯವಾಕ್ಯದಲ್ಲಿ ಪಂಚಾಯತಿನಾದ್ಯಂತ ಇರುವ ಜಾನಪದ ಗ್ರಾಮೀಣ ಕಲೆ ಹಾಗೂ ಕಲಾವಿದರನ್ನು ಸಂಸ್ಕøತಿಗಳನ್ನು ಸಂರಕ್ಷಿಸುವ ಉದಾತ್ತ ಯೋಜನೆಯ ವಿಪುಲೀಕರಣಕ್ಕಾಗಿ ಎಣ್ಮಕಜೆ ಪಂಚಾಯತಿ ಸಭಾಂಗಣದಲ್ಲಿ ಆಯೋಜಿಸಲ್ಪಟ್ಟ ಪ್ರತ್ಯೇಕ ಗ್ರಾಮ ಸಭೆ ಯಶಸ್ವಿಯಾಗಿ ಸಂಪನ್ನಗೊಂಡಿತು.
ಎಣ್ಮಕಜೆ ಪಂ.ಅಧ್ಯಕ್ಷೆ ಕುಸುಮಾವತಿ ಟೀಚರ್ ಉದ್ಘಾಟಿಸಿದರು. ಪಂ ಉಪಾಧ್ಯಕ್ಷ ಸಿದ್ದೀಕ್ ವಳಮುಗೇರ್ ಅಧ್ಯಕ್ಷತೆ ವಹಿಸಿದ್ದರು.ಪಂ. ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷರುಗಳಾದ ರಾಧಾಕೃಷ್ಣ ನಾಯಕ್ ಜೆ.ಎಸ್.ಶೇಣಿ, ರಮ್ಲ, ವಿಜಯ ಕಜಂಪಾಡಿ, ಪಂ.ಯೋಜನಾ ಸಮಿತಿ ಅಧ್ಯಕ್ಷ ಬಿ.ಎಸ್.ಗಾಂಭೀರ್, ರಾಜರಾಮ ಪೆರ್ಲ ಹಾಗೂ ಪಂ.ಸದಸ್ಯರು, ಪಂ.ಕಾರ್ಯದರ್ಶಿ ಶಾನವಾಸ್, ಸಹ ಕಾರ್ಯದರ್ಶಿ ಗಿರೀಶ್ ಮೊದಲಾದವರು ಉಪಸ್ಥಿತರಿದ್ದರು.

%20(1).jpg)
