HEALTH TIPS

ಇಡಿಯಡ್ಕದಲ್ಲಿ ಮನರಂಜಿಸಿದ ನಾದವಲ್ಲರಿ

ಪೆರ್ಲ : ಇಡಿಯಡ್ಕ ಶ್ರೀ ದುರ್ಗಾಪರಮೇಶ್ವರಿ ಉಳ್ಳಾಲ್ತಿ ವಿಷ್ಣುಮೂರ್ತಿ ಕ್ಷೇತ್ರ ವಾರ್ಷಿಕ ಜಾತ್ರಾ ಮಹೋತ್ಸವದ ಅಂಗವಾಗಿ ಪ್ರಥಮ ದಿನ ನಡೆದ ಕಾರ್ಯಕ್ರಮದಲ್ಲಿ 'ನಾದವಲ್ಲರಿ' ಸಂಗೀತ ಜನಮನ ರಂಜಿಸಿತು. ಅನ್ವಿತಾ ಶೇಣಿ ಪ್ರಸ್ತುತಿ ಪಡಿಸಿದ ಕಾರ್ಯಕ್ರಮದಲ್ಲಿ ವಯಲಿನ್ ವಾದನ ಹಾಗೂ ಶಾಸ್ತ್ರೀಯ ಸಂಗೀತ ನಡೆಯಿತು. ನಿರ್ಮಲ ಪುರುಷೋತ್ತಮ ಪೆರ್ಲ ಅವರ ಮಾರ್ಗದರ್ಶನದಲ್ಲಿ ಕಳೆದ 8 ವರ್ಷಗಳಿಂದ ಶಾಸ್ತ್ರೀಯ ಸಂಗೀತ ಅಭ್ಯಾಸಿಸುತ್ತಿದ್ದು,ವಿದ್ವಾನ್ ಪ್ರಭಾಕರ ಕುಂಜಾರು ಅವರಿಂದ 5 ವರ್ಷಗಳಿಂದ ವಯಲಿನ್ ಅಭ್ಯಾಸ ನಡೆಸುತ್ತಿದ್ದಾಳೆ. ಇದೀಗ ಚೊಚ್ಚಲ ಕಾರ್ಯಕ್ರಮವನ್ನು ನೀಡಿ ಶೋತೃಗಳ ಪ್ರಶಂಸನೆಗೆ ಪಾತ್ರಳಾದ ಈಕೆ ಜಿಲ್ಲಾ ಪಂ.ಸದಸ್ಯ ಸೋಮಶೇಖರ್ ಜೆ.ಎಸ್. ಹಾಗೂ ಅಧ್ಯಾಪಕಿ ಶಶಿರೇಖಾ ದಂಪತಿಗಳ ಸುಪುತ್ರಿ. ಕಳೆದ 10 ವರ್ಷಗಳಿಂದ ನಾಟ್ಯ ನಿಲಯಂ ಬಾಲಕೃಷ್ಣ ಮಾಸ್ತರ್ ಮಂಜೇಶ್ವರ ಅವರಿಂದ ಶಾಸ್ತ್ರೀಯ ನೃತ್ಯಗಳನ್ನು ಅಭ್ಯಸಿಸುತ್ತಿರುವ ಈಕೆ ಭರತನಾಟ್ಯ,ಕೂಚುಪುಡಿ, ಕೇರಳ ನಟನಂ ಪ್ರಕಾರಗಳಲ್ಲಿ ಪ್ರದರ್ಶನ ನೀಡಿದ್ದು ಬಹುಮುಖ ಪ್ರತಿಭೆ ಎನಿಸಿಕೊಂಡಿದ್ದಾಳೆ. 

ನಾದ ವಲ್ಲರಿ ಕಾರ್ಯಕ್ರಮದಲ್ಲಿ ವಿದ್ವಾನ್ ಪ್ರಭಾಕರ ಕುಂಜಾರು ವಯಲಿನ್ ಹಾಗೂ ಶ್ರೀಧರ ಭಟ್ ಬಡಕಕ್ಕೆರೆ ಅವರು ಮೃದಂಗದಲ್ಲಿ ಸಹಕರಿಸಿದ್ದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries