HEALTH TIPS

ಜಾರ್ಖಂಡ್‌ನಲ್ಲಿ ಪತನವಾದ ಏರ್ ಆಯಂಬುಲೆನ್ಸ್ ನಲ್ಲಿ ಬ್ಲ್ಯಾಕ್‌ ಬಾಕ್ಸ್‌ ಇರಲಿಲ್ಲ: ವರದಿ

ರಾಂಚಿ: ಜಾರ್ಖಂಡ್‌ನಲ್ಲಿ ಸೋಮವಾರ ಪತನವಾದ ಏರ್ ಆಂಬುಲೆನ್ಸ್‌ನಲ್ಲಿ ಬ್ಲ್ಯಾಕ್‌ ಬಾಕ್ಸ್‌ ಇರಲಿಲ್ಲ ಎಂದು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ತಿಳಿಸಿರುವ ಬಗ್ಗೆ ವರದಿಯಾಗಿದೆ.

ರೆಡ್ಬರ್ಡ್ ಏರ್ವೇಸ್ ಪ್ರೈವೆಟ್ ಲಿಮಿಟೆಡ್ ಕಂಪೆನಿಯ 'ಬೀಚ್ಕ್ರಾಫ್ಟ್ ಸಿ90ಎ' ವಿಮಾನ, ರಾಂಚಿ ವಿಮಾನ ನಿಲ್ದಾಣದಿಂದ ಸೋಮವಾರ ಸಂಜೆ ಟೇಕ್ ಆಫ್ ಆದ 20 ನಿಮಿಷಗಳಲ್ಲಿ ಏರ್ ಟ್ರಾಫಿಕ್ ಕಂಟ್ರೋಲರ್ ಜೊತೆಗಿನ ಸಂಪರ್ಕ ಕಳೆದುಕೊಂಡಿತ್ತು.

ಇದಾದ ಕೆಲವೇ ಕ್ಷಣದಲ್ಲಿ ಚತ್ರಾ ಜಿಲ್ಲೆಯ ಸಿಮಾರಿಯಾ ಬಳಿ ಪತನಗೊಂಡಿತ್ತು. ಘಟನೆಯಲ್ಲಿ ಇಬ್ಬರು ಪೈಲಟ್‌ಗಳು, ರೋಗಿ ಸೇರಿದಂತೆ ಒಟ್ಟು 7 ಮಂದಿ ಮೃತಪಟ್ಟಿದ್ದರು.

ವಿಮಾನವು ಬ್ಲ್ಯಾಕ್ ಬಾಕ್ಸ್ ಅಥವಾ ಕಾಕ್ಪಿಟ್ ಧ್ವನಿ, ಹಾರಾಟದ ದತ್ತಾಂಶ ರೆಕಾರ್ಡರ್‌ಗಳನ್ನು ಹೊಂದಿರುವುದು ಕಡ್ಡಾಯವಾಗಿದೆ. ಆದರೆ, 'ಬೀಚ್ಕ್ರಾಫ್ಟ್ ಸಿ90ಎ' ವಿಮಾನವು 40 ವರ್ಷ ಹಳೆಯದಾಗಿರುವುದರಿಂದ ಆಗ ಜಾರಿಯಲ್ಲಿದ್ದ ನಿಯಮಗಳ ಅನುಸಾರ 1987ರಲ್ಲಿ ವಾಯು ಯೋಗ್ಯತಾ ಪರಿಶೀಲನಾ ಪ್ರಮಾಣಪತ್ರವನ್ನು ನೀಡಲಾಗಿತ್ತು.

ವಾಯು ಯೋಗ್ಯತಾ ಪರಿಶೀಲನಾ ಪ್ರಮಾಣಪತ್ರಕ್ಕೆ 2027ರ ಜನವರಿ 20ರವರೆಗೂ ಮಾನ್ಯತೆ ಇದೆ. ಆದರೆ, 2016ರ ಜನವರಿ 1ಕ್ಕೂ ಮೊದಲು ಅಥವಾ ನಂತರ ಈ ಪ್ರಮಾಣಪತ್ರ ಪಡೆದ ವಿಮಾನಗಳು ಕಪ್ಪು ಪೆಟ್ಟಿಗೆ ಹೊಂದುವುದು ಕಡ್ಡಾಯ ಎಂಬ ಆದೇಶ ಹೊರಡಿಸಲಾಗಿತ್ತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries