ಕುಂಬಳೆ: ಬಿಜೆಪಿ ಮುಖಂಡ, ಯುವ ಉದ್ಯಮಿ ವಿಕ್ರಂ ಪೈ ಅವರು ಸಂಚರಿಸುತ್ತಿದ್ದ ಕಾರಿಗೆ ಸಿಲುಕಿದ ವಸ್ತುವೊಂದು ಸ್ಪೋಟಗೊಂಡು, ಕಾರಿಗೆ ಬೆಂಕಿ ತಗುಲಿದೆ. ವಿಕ್ರಂ ಪೈ ಅವರು ಸಂಚರಿಸುತ್ತಿದ್ದ ಕಾರು ಸ್ಪೋಟಕದಿಂದ ಹನಿಗೀಡಾಗಿರುವುದು ನಿಗೂಢತೆಗೆ ಕಾರಣವಾಗಿದೆ. ಶುಕ್ರವಾರ ಬೆಳಗ್ಗೆ ತಮ್ಮ ಮನೆಯಿಂದ ಪೊಸಡ್ಕದಲ್ಲಿರುವ ತಮ್ಮ ಆಗ್ರೋಫಾರ್ಮಿಗೆ ಕಾರಲ್ಲಿ ತೆರಳುವ ಮಧ್ಯೆ ಸ್ಪೋಟ ಸಂಭವಿಸಿದೆ. ಭಾರೀ ಶಬ್ದದೊಂದಿಗೆ ಸ್ಪೋಟ ನಡೆದಿದ್ದು, ಆಸುಪಾಸಿನವರು ಸ್ಥಳಕ್ಕಾಗಮಿಸಿದಾಗ ಕಾರಿಗೂಬೆಂಕಿ ತಗುಲಿರುವುದು ಕಂಡುಬಂದಿದೆ. ತಕ್ಷಣ ಬೆಂಕಿ ಶಮನಗೊಳಿಸಿದ್ದಾರೆ.
ಸ್ಪೋಟಕ್ಕೆ ಕಾರು ಎತ್ತರಕ್ಕೆ ಜಿಗಿದು ರಸ್ತೆ ಅಂಚಿಗೆ ಸಾಗಿನಿಂತಿದೆ. ವಿಕ್ರಂ ಪೈ ಅವರು ಅಪಾಯದಿಂದ ಪಾರಾಗಿದ್ದಾರೆ.
ತಕ್ಷಣ ಪೊಲಿಸರು ಸ್ಥಳಕ್ಕಾಗಮಿಸಿ ತಪಾಸಣೆ ನಡೆಸಿದಾಗ ಇದು ಹಂದಿಗೆ ಇರಿಸಿರುವ ಸ್ಪೋಟಕವಾಗಿರುವುದಾಗಿ ತಿಳಿಸಿದ್ದು, ಮಾರ್ಗದಲ್ಲಿ ಇರಿಸಿರುವ ಬಗ್ಗೆ ನಿಗೂಢತೆ ವ್ಯಕ್ತವಾಗಿದೆ. ಸ್ಪೋಟದಿಂದ ಸಥಳೀಯರಲ್ಲಿ ಆತಂಕ ಮನೆಮಾಡಿದೆ. ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿರುವ ವಿಕ್ರಂ ಪೈ ಅವರು ಸಾರ್ವಜನಿಕ ಹಿತಾಸಕ್ತಿಗಾಗಿ ದುಡಿಯುತ್ತಿರುವ ಯುವ ಉದ್ಯಮಿಯಾಗಿದ್ದಾರೆ.ಪೊಲಿಸರುಕೇಸು ದಾಖಲಿಸಿಕೊಂಡಿದ್ದಾರೆ.


