HEALTH TIPS

ಮಾರುತಿ ಸುಜುಕಿಗೆ ಸಾಥ್ ಕೊಟ್ಟ ಭಾರತೀಯ ರೈಲ್ವೆ: ತಾಕತ್ತು ನೋಡಿ ಶಾಕ್ ಆದ ಕಂಪನಿ

ಮಾರುತಿ ಸುಜುಕಿ (Maruti Suzuki) 2025ರಲ್ಲಿ 5.85 ಲಕ್ಷಕ್ಕೂ ಹೆಚ್ಚು ವಾಹನಗಳನ್ನು ರೈಲಿನಲ್ಲಿ ರವಾನಿಸುವ ಮೂಲಕ ಹೊಸ ದಾಖಲೆ ನಿರ್ಮಿಸಿದೆ. ರಸ್ತೆಯಲ್ಲದೆ ರೈಲ್ವೆಯನ್ನು ಬಳಸುವ ಮೂಲಕ 87,904 ಮೆಟ್ರಿಕ್ ಟನ್ CO2e (ಇಂಗಾಲದ ಡೈಆಕ್ಸೈಡ್) ಹೊರಸೂಸುವಿಕೆಯನ್ನು ತಪ್ಪಿಸಲಾಗಿದೆ.

ಅಲ್ಲದೆ 687 ಲಕ್ಷ ಲೀಟರ್‌ಗಳಿಗಿಂತ ಹೆಚ್ಚು ಇಂಧನವನ್ನು ಉಳಿಸಲಾಗಿದೆ. ಮಾರುತಿ ಸುಜುಕಿಯ ವಾಹನ ರವಾನೆಗಾಗಿ ರೈಲು ಬಳಕೆಯು 2016 ರಲ್ಲಿ 5.1% ರಿಂದ 2025 ರಲ್ಲಿ 26% ಕ್ಕೆ ಏರಿದೆ, ಇದು ಇಂಗಾಲದ ಹೊರಸೂಸುವಿಕೆ, ದೇಶದ ತೈಲ ಆಮದುಗಳನ್ನು ಗಮನಾರ್ಹವಾಗಿ ಕಡಿಮೆ ಮಾಡಿದೆ ಎಂದು ಮಾರುತಿ ಹೇಳಿದೆ.

ರೈಲು ಆಧಾರಿತ ವಾಹನಗಳ ರವಾನೆಯ ಪ್ರಮಾಣವು ಪ್ರಸ್ತುತ 7.5 ಪಟ್ಟು ಹೆಚ್ಚಾಗಿದ್ದು, 2016 ರಲ್ಲಿ ಸುಮಾರು 77,000 ಯೂನಿಟ್‌ ವಾಹನಗಳಿಂದ 2025 ರಲ್ಲಿ 5.85 ಲಕ್ಷ ವಾಹನಗಳಿಗೆ ತಲುಪಿದೆ. ಅಂದರೆ ಮಾರುತಿ ಸುಜುಕಿ ವಾಹನಗಳಿಗೆ ಬೇಡಿಕೆ ಹೆಚ್ಚಾಗಿರುವುದರ ಜೊತೆಗೆ ಅವುಗಳ ತಲುಪಿಸುವಿಕೆಗೆ ಕಂಪನಿ ಆಯ್ಕೆ ಮಾಡಿಕೊಂಡಿರುವ ಮಾರ್ಗ ಕೂಡ ಪರಿಸರ ರಕ್ಷಣೆಗೆ ತನ್ನ ಬದ್ದತೆಯನ್ನು ಸೂಚಿಸುತ್ತದೆ.

ಈ ಸಾಧನೆಯ ಕುರಿತು ಮಾತನಾಡಿದ ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಹಿಸಾಶಿ ಟಕೇಯುಚಿ, "2025ನೇ ವರ್ಷವು 5.85 ಲಕ್ಷಕ್ಕೂ ಹೆಚ್ಚು ಯೂನಿಟ್‌ ವಾಹನಗಳೊಂದಿಗೆ ನಮ್ಮ ಅತ್ಯುನ್ನತ ರೈಲು ರವಾನೆಯನ್ನು ಗುರುತಿಸುತ್ತದೆ. ಕಳೆದ ವರ್ಷದಲ್ಲಿ, ನಾವು ಎರಡು ಹೆಗ್ಗುರುತು ಕಾರ್ಯಕ್ರಮಗಳಾದ ಮಾನೇಸರ್ ಉತ್ಪಾದನಾ ಸೌಲಭ್ಯ ಹಾಗೂ ರೈಲ್ವೆ ಕಮಾನು ಸೇತುವೆ ಮೂಲಕ ನಮ್ಮ ಪರಿಸರ ಸ್ನೇಹಿ ವಾಹನ ರವಾನೆ ಪ್ರಯತ್ನಗಳನ್ನು ಬಲಪಡಿಸಿದ್ದೇವೆ.

ನಮ್ಮ ಮಾನೇಸರ್ ಉತ್ಪಾದನಾ ಸೌಲಭ್ಯದಲ್ಲಿ ಭಾರತದ ಅತಿದೊಡ್ಡ ವಾಹನ ಇನ್-ಪ್ಲಾಂಟ್ ರೈಲ್ವೆ ಸೈಡಿಂಗ್ ಉದ್ಘಾಟನೆ ಮತ್ತು ಚೆನಾಬ್ ನದಿಯ ಮೇಲಿನ ವಿಶ್ವದ ಅತಿ ಎತ್ತರದ ರೈಲ್ವೆ ಕಮಾನು ಸೇತುವೆಯ ಮೂಲಕ ಕಾಶ್ಮೀರ ಕಣಿವೆಗೆ ವಾಹನಗಳನ್ನು ರೈಲು ಮೂಲಕ ರವಾನಿಸಿದ್ದೇವೆ. 2030-31 ಆರ್ಥಿಕ ವರ್ಷದ ವೇಳೆಗೆ ರೈಲು ಆಧಾರಿತ ವಾಹನ ರವಾನೆಯನ್ನು 35% ಕ್ಕೆ ಹೆಚ್ಚಿಸುವುದು ನಮ್ಮ ಗುರಿಯಾಗಿದೆ, ಇದು 2070 ರ ವೇಳೆಗೆ ಭಾರತದ ನಿವ್ವಳ-ಶೂನ್ಯ ಮಹತ್ವಾಕಾಂಕ್ಷೆಗೆ ಕೊಡುಗೆ ನೀಡುತ್ತದೆ" ಎಂದರು.

Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries