HEALTH TIPS

ಅಯೋಧ್ಯೆಯಲ್ಲಿ ಬಾಬರಿ ಮಸೀದಿ ಎಂದಿಗೂ ಪುನರ್‌ ನಿರ್ಮಾಣ ಆಗಲ್ಲ: ಯೋಗಿ ಆದಿತ್ಯನಾಥ

ಲಖನೌ: ಮುಂಬರುವ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯು ವಿವಾದಾತ್ಮಕ ಧಾರ್ಮಿಕ ವಿಷಯಗಳನ್ನು ಆಧರಿಸಿ ನಡೆಯಲಿದೆಯೇ ಎಂಬ ಚರ್ಚೆ ಹುಟ್ಟುಕೊಂಡಿದೆ. ಇದಕ್ಕೆ ಸಾಕ್ಷಿ ಎಂಬಂತೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಬಾಬರಿ ಮಸೀದಿ ವಿಚಾರವನ್ನು ಕೆದಕಿದ್ದಾರೆ ಎಂದು ವರದಿ ತಿಳಿಸಿದೆ.

ಬಾರಾಬಂಕಿಯಲ್ಲಿ ಮಾತನಾಡಿದ ಅವರು, 'ಅಯೋಧ್ಯೆಯಲ್ಲಿ ಬಾಬರಿ ಮಸೀದಿಯನ್ನು ಎಂದಿಗೂ ಪುನರ್‌ ನಿರ್ಮಾಣ ಮಾಡುವುದಿಲ್ಲ. ಒಂದು ವೇಳೆ ಯಾರಾದರೂ ಬಾಬರಿ ಮಸೀದಿಯ ಪುನರ್‌ ನಿರ್ಮಾಣದ ಬಗ್ಗೆ ಕನಸನ್ನು ಇಟ್ಟುಕೊಂಡಿದ್ದರೆ, ಅಂತಹ 'ಖಯಾಮತ್' (ವಿಸ್ಮಯಕಾರಿ) ದಿನ ಎಂದಿಗೂ ಬರುವುದಿಲ್ಲ' ಎಂದಿದ್ದಾರೆ.

'ಬಿಜೆಪಿ ಸರ್ಕಾರ ಹೇಳಿದ್ದನ್ನೇ ಮಾಡುತ್ತದೆ ಮತ್ತು ಮಾಡುವುದನ್ನೇ ಹೇಳುತ್ತದೆ. ನಾವು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸುತ್ತೇವೆ ಎಂದು ಹೇಳಿದ್ದೆವು. ಅದರಂತೆಯೇ ಮಾಡಿದ್ದೇವೆ' ಎಂದು ತಿಳಿಸಿದ್ದಾರೆ.

'500 ವರ್ಷಗಳ ನಂತರ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸುವ ಮೂಲಕ ಹೆಮ್ಮೆಯ ಕ್ಷಣಕ್ಕೆ ಸಾಕ್ಷಿಯಾಗಿದ್ದೇವೆ. ಆದರೆ, ಕೆಲವು ಅವಕಾಶವಾದಿಗಳು ಸಂಕಷ್ಟದಲ್ಲಿದ್ದಾಗ ಮಾತ್ರ ರಾಮನನ್ನು ನೆನಪು ಮಾಡಿಕೊಳ್ಳುತ್ತಾರೆ. ನಂತರ ಮರೆತುಬಿಡುತ್ತಾರೆ ಎಂದು ವಿಪಕ್ಷ ನಾಯಕರ ವಿರುದ್ಧ ಯೋಗಿ ಗುಡುಗಿದ್ದಾರೆ.

ಆದಿತ್ಯನಾಥ ಅವರ 'ಖಯಾಮತ್' (ವಿಸ್ಮಯಕಾರಿ) ಪದ ಬಳಕೆ ಬಗ್ಗೆ ಮುಸ್ಲಿಂ ಧರ್ಮಗುರುಗಳು ಮತ್ತು ಸಮಾಜವಾದಿ ಪಕ್ಷದ (ಎಸ್‌ಪಿ) ಅಧ್ಯಕ್ಷ ಅಖಿಲೇಶ್ ಯಾದವ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.

'ಮುಖ್ಯಮಂತ್ರಿಗಳಿಗೆ ಭಾಷೆಯ ಸಮಸ್ಯೆ ಇರುವುದರಿಂದ ಅವರು ಉರ್ದು ಪದಗಳನ್ನು ಬಳಸಬಾರದು. ಅಧಿಕಾರ ಕಳೆದುಕೊಳ್ಳುವ ಭಯದಿಂದ ಬಿಜೆಪಿ ಕೋಮು ರಾಜಕೀಯದಲ್ಲಿ ತೊಡಗಿದೆ' ಎಂದು ಅಖಿಲೇಶ್ ವಾಗ್ದಾಳಿ ನಡೆಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries