HEALTH TIPS

ಮುರಿದು ಬಿತ್ತು ಹತ್ತಾರು ಜನರಿದ್ದ ತಿರುಗುವ ಉಯ್ಯಾಲೆ: ಭಯಾನಕ ದೃಶ್ಯ...

ಫರೀದಾಬಾದ್‌: ಹರಿಯಾಣದ ಸೂರಜ್‌ಕುಂಡ್‌ನಲ್ಲಿ ನಡೆಯುತ್ತಿದ್ದ ಮೇಳವೊಂದರಲ್ಲಿ ತಿರುಗುವ ಯಾಂತ್ರಿಕ ಉಯ್ಯಾಲೆ(ಜೈಂಟ್‌ ಸ್ವಿಂಗ್‌) ಮುರಿದು ಬಿದ್ದು ಪೊಲೀಸ್‌ ಇನ್ಸ್‌ಪೆಕ್ಟರ್‌ ಮೃತಪಟ್ಟಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ, ಉಯ್ಯಾಲೆಯನ್ನು ನಿರ್ವಹಿಸುತ್ತಿದ್ದ ಇಬ್ಬರು ಸಿಬ್ಬಂದಿಗಳನ್ನು ಪೊಲೀಸರು ಭಾನುವಾರ ಬಂಧಿಸಿದ್ದಾರೆ.

39ನೇ ಅಂತರರಾಷ್ಟ್ರೀಯ ಕರಕುಶಲ ಮೇಳದಲ್ಲಿ ಶನಿವಾರ ಅವಘಡ ನಡೆದಿದೆ. ಮೇಳಕ್ಕೆ ಬಂದಿದ್ದವರಲ್ಲಿ 19 ಜನರು ಯಾಂತ್ರಿಕ ಉಯ್ಯಾಲೆಯಲ್ಲಿ ಕುಳಿತಿದ್ದರು. ವೇಗವಾಗಿ ಚಲಿಸಿದಾಗ ಅದರ ಒಂದು ಭಾಗ ಮುರಿದ ಪರಿಣಾಮ ಉಯ್ಯಾಲೆ ಭಾಗಶಃ ನೆಲಕ್ಕೆ ಅಪ್ಪಳಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಥಳದಲ್ಲಿದ್ದ ಇತರರು ಮತ್ತು ಪೊಲೀಸ್‌ ಸಿಬ್ಬಂದಿ ಉಯ್ಯಾಲೆ ಅಡಿಯಲ್ಲಿ ಸಿಲುಕಿದ್ದವರ ರಕ್ಷಣೆ ಮಾಡುತ್ತಿದ್ದರು. ಈ ವೇಳೆ ಉಯ್ಯಾಲೆಯ ಇನ್ನೊಂದು ಭಾಗವೂ ಮುರಿದು ಸಂಪೂರ್ಣವಾಗಿ ನೆಲಕ್ಕೆ ಬಿದ್ದಿದೆ. ಹಲವರಿಗೆ ಗಾಯಗಳಾಗಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಇನ್ಸ್‌ಪೆಕ್ಟರ್‌ ಒಬ್ಬರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಹರಿಯಾಣ ಸರ್ಕಾರ ಆದೇಶಿಸಿದೆ. ಯಾಂತ್ರಿಕ ಉಯ್ಯಾಲೆಯ ನಿರ್ವಾಹಕ ಮತ್ತು ಇನ್ನೊಬ್ಬ ಸಿಬ್ಬಂದಿಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಅವರನ್ನು ಬಂಧಿಸಿದ್ದಾರೆ. ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ.

ಮೃತ ಇನ್ಸ್‌ಪೆಕ್ಟರ್‌ ಜಗದೀಶ್‌ ಪ್ರಸಾದ್‌ ಅವರು ಮಾರ್ಚ್‌ನಲ್ಲಿ ಸೇವೆಯಿಂದ ನಿವೃತ್ತರಾಗಬೇಕಿತ್ತು.

ಈ ಅವಘಡ ನಡೆಯುವ ಒಂದು ಗಂಟೆಗೆ ಮೊದಲು ಮೇಳ ನಡೆಯುತ್ತಿದ್ದ ಮೈದಾನದ ಗೇಟ್‌ವೊಂದು ಮುರಿದುಬಿದ್ದು ಮಗು ಸೇರಿದಂತೆ ಇಬ್ಬರು ಗಾಯಗೊಂಡಿದ್ದಾರೆ.

ವೇಗವಾಗಿ ಚಲಿಸಿದಾಗ ಅದರ ಒಂದು ಭಾಗ ಮುರಿದ ಪರಿಣಾಮ ಉಯ್ಯಾಲೆ ಭಾಗಶಃ ನೆಲಕ್ಕೆ ಅಪ್ಪಳಿಸಿತ್ತು. ಈ ವೇಳೆ ಪೊಲೀಸರು ಮತ್ತು ಜನರು ಅವರನ್ನು ರಕ್ಷಣೆ ಮಾಡುತ್ತಿರುವಾಗ ಉಯ್ಯಾಲೆಯ ಮತ್ತೊಂದು ಭಾಗ ಜನರು ಮತ್ತು ಪೊಲೀಸರ ಮೇಲೆ ಮುರಿದು ಬಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಈ ವೇಳೆ ಇನ್ಸ್‌ಪೆಕ್ಟರ್‌ ಜಗದೀಶ್‌ ಪ್ರಸಾದ್‌ ಗಂಭೀರವಾಗಿ ಗಾಯಗೊಂಡು ಮೃತಪಟ್ಟರು, ಐವರು ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಘಟನೆಯ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಹರಿಯಾಣ ಸರ್ಕಾರ ಆದೇಶಿಸಿದೆ. ಯಾಂತ್ರಿಕ ಉಯ್ಯಾಲೆಯ ನಿರ್ವಾಹಕ ಮತ್ತು ಇನ್ನೊಬ್ಬ ಸಿಬ್ಬಂದಿಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಅವರನ್ನು ಬಂಧಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries