HEALTH TIPS

ಇಚ್ಚೆಗೆ ವಿರುದ್ಧವಾಗಿ ಗರ್ಭಾವಸ್ಥೆ ಮುಂದುವರಿಸಲು ಸ್ತ್ರೀಯನ್ನು ಬಲವಂತಪಡಿಸುವಂತಿಲ್ಲ: ಸುಪ್ರೀಂಕೋರ್ಟ್ ಆದೇಶ

ನವದೆಹಲಿ: ಹದಿಹರೆಯದ ಬಾಲಕಿಯ 30 ವಾರಗಳ ಗರ್ಭಧಾರಣೆಯನ್ನು ಕೊನೆಗೊಳಿಸಲು ಸುಪ್ರೀಂಕೋರ್ಟ್ ಶುಕ್ರವಾರ ಅನುಮತಿ ನೀಡಿದೆ. ಸ್ತ್ರೀಯ ಇಚ್ಛೆಗೆ ವಿರುದ್ಧವಾಗಿ ಗರ್ಭಾವಸ್ಥೆಯನ್ನು ಮುಂದುವರಿಸುವಂತೆ ಆಕೆಯನ್ನು ಬಲವಂತಪಡಿಸುವಂತಿಲ್ಲ ಎಂದು ನ್ಯಾಯಾಲಯವು ಒತ್ತಿ ಹೇಳಿದೆ.

ಹದಿಹರೆಯದ ತರುಣಿಯ ಗರ್ಭಾವಸ್ಥೆಯನ್ನು ವೈದ್ಯಕೀಯವಾಗಿ ಕೊನೆಗೊಳಿಸಲು ಅನುಮತಿ ನಿರಾಕರಿಸಿ, ಗರ್ಭಾವಸ್ಥೆಯನ್ನು ಮುಂದುವರಿಸುವಂತೆ ಆದೇಶಿಸಿದ ಮತ್ತು ಜನಿಸಿದ ಮಗುವನ್ನು ದತ್ತು ನೀಡಬಹುದೆಂಬ ಆಯ್ಕೆಯನ್ನು ಮುಂದಿಟ್ಟ ಬಾಂಬೆ ಹೈಕೋರ್ಟ್‌ನ ಆದೇಶವನ್ನು ತಳ್ಳಿಹಾಕಿದ ನ್ಯಾಯಮೂರ್ತಿ ಬಿ.ವಿ. ನಾಗರತ್ನ ನೇತೃತ್ವದ ನ್ಯಾಯಪೀಠ ಈ ತೀರ್ಪು ನೀಡಿದೆ.

ಯಾವುದೇ ಮಹಿಳೆಗೆ ಇಚ್ಚೆಯಿಲ್ಲದೆ ಇದ್ದಲ್ಲಿ ಗರ್ಭಾವಸ್ಥೆಯನ್ನು ಮುಂದುವರಿಸುವಂತೆ ನ್ಯಾಯಾಲಯವು ಆಕೆಯನ್ನು ಬಲವಂತಪಡಿಸುವಂತಿಲ್ಲ ಎಂದು ಸುಪ್ರೀಂಕೋರ್ಟ್ ತಿಳಿಸಿದ್ದು, ಸಂತಾನೋತ್ಪತ್ತಿಯಲ್ಲಿ ಮಹಿಳೆಗೆ ಇರುವ ಸ್ವಾಯತ್ತೆಯನ್ನು ಪ್ರತಿಪಾದಿಸಿದೆ.

ಅರ್ಜಿದಾರ ತರುಣಿಯು ಗರ್ಭಧರಿಸಿದಾಗ ಆಕೆಗೆ 17 ವರ್ಷ ವಯಸ್ಸಾಗಿದ್ದು, ಈಗ 18 ವರ್ಷ ಹಾಗೂ ನಾಲ್ಕು ತಿಂಗಳು ತುಂಬಿದೆ. ಗೆಳೆಯನ ಜೊತೆಗಿನ ದೈಹಿಕ ಸಂಬಂಧದಿಂದಾಗಿ ಆಕೆ ಗರ್ಭ ಧರಿಸಿದ್ದಾಳೆ. ಗರ್ಭಧಾರಣೆಯನ್ನು ಮುಂದುವರಿಸುವುದರಿಂದ ಯುವತಿ ದೈಹಿಕವಾಗಿ ಹಾಗೂ ಮಾನಸಿಕವಾಗಿ ಯಾತನೆ ಅನುಭವಿಸುತ್ತಿದ್ದಾಳೆಂದು ನ್ಯಾಯಾಲಯ ಗಮನಸೆಳೆದಿದೆ.

ಅರ್ಜಿದಾರಳ ಗರ್ಭಾವಸ್ಥೆಯನ್ನು ವೈದ್ಯಕೀಯವಾಗಿ ಕೊನೆಗೊಳಿಸಲು ಅನುಮತಿ ನೀಡಿದ ನ್ಯಾಯಪೀಠವು, ಆ ಪ್ರಕ್ರಿಯೆಗೆ ಅನುಮತಿ ನೀಡಿರುವುದನ್ನು ಲಿಖಿತವಾಗಿ ಬರೆದುಕೊಡುವಂತೆ ಆಕೆಗೆ ಸೂಚಿಸಿದೆ.

ವೈದ್ಯಕೀಯವಾಗಿ ಗರ್ಭಾವಸ್ಥೆಯ ಕೊನೆಗೊಳಿಸುವಿಕೆ ಕುರಿತ ಭಾರತೀಯ ಕಾನೂನು, ಗರ್ಭಧರಿಸಿದ 20 ವಾರಗಳವರೆಗೆ ಗರ್ಭಿಣಿಯು ವೈದ್ಯಕೀಯವಾಗಿ ಗರ್ಭಪಾತ ಮಾಡಿಕೊಳ್ಳುವುದಕ್ಕೆ ಅವಕಾಶ ನೀಡುತ್ತದೆ. 24 ವಾರಗಳವರೆಗಿನ ಗರ್ಭಾವಸ್ಥೆಯಲ್ಲಿ ಭ್ರೂಣವನ್ನು ತೆಗೆದುಹಾಕುವುದರಿಂದ ತಾಯಿಯ ಆರೋಗ್ಯಕ್ಕೆ ಅಪಾಯವಿದೆಯೇ ಎಂಬುದನ್ನು ವೈದ್ಯಕೀಯ ಮಂಡಳಿಯು ಸಮಾಲೋಚಿಸಿ ನಿರ್ಧಾರ ತೆಗೆದುಕೊಳ್ಳುತ್ತದೆ. 24 ವಾರಗಳ ಆನಂತರ ನ್ಯಾಯಾಲಯ ಮಾತ್ರವೇ ಗರ್ಭಾವಸ್ಥೆಯನ್ನು ವೈದ್ಯಕೀಯವಾಗಿ ಕೊನೆಗೊಳಿಸಲು ಅನುಮತಿ ನೀಡಬೇಕಾಗುತ್ತದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries