HEALTH TIPS

ಚಂದ್ರಗಿರಿ ಕೋಟೆ ಸಂರಕ್ಷಣೆಗೆ ಸರ್ಕಾರ ತಕ್ಷಣ ಮುಂದಾಗಬೇಕು-ಬಿಜೆಪಿ

ಕಾಸರಗೋಡು: ಅಕ್ರಮ ಮಣ್ಣು ಸಾಗಾಟದಿಂದ ಅಪಾಯದಲ್ಲಿರುವ ಕಾಸರಗೋಡು ಜಿಲ್ಲೆಯ ಚೆಮ್ನಾಡ್ ಪಂಚಾಯಿತಿಯ ಕಳನಾಡಿನ ಚಂದ್ರಗಿರಿ ಕೋಟೆಯನ್ನು ರಕ್ಷಿಸಲು ಜಿಲ್ಲಾಡಳಿತ ಮತ್ತು ರಾಜ್ಯ ಸರ್ಕಾರ  ಸಿದ್ಧರಾಗಬೇಕು ಎಂದು ಬಿಜೆಪಿ ಕಾಸರಗೋಡು ಜಿಲ್ಲಾಧ್ಯಕ್ಷೆ ಎಂ.ಎಲ್.ಅಶ್ವಿನಿ ಆಗ್ರಹಿಸಿದ್ದಾರೆ.

ಕೋಟೆಗೆ ಹಾನಿಯುಂಟಾಗುವ ರೀತಿಯಲಲಿ ಅನಧಿಕೃತ ಮಣ್ಣು ಸಾಗಾಟ ನಡೆಯುತ್ತಿರುವ ಪ್ರದೇಶಕ್ಕೆ ನಿಯೋಗದೊಂದಿಗೆ ಭೇಟಿ ನೀಡಿದ ಅವರು ಈ ಹೇಳಿಕೆ ನೀಡಿದ್ದಾರೆ. 

ಪ್ರವಾಸೋದ್ಯಮಕ್ಕೆ ಅಪಾರ ಸಾಮಥ್ರ್ಯವಿರುವ ಚಂದ್ರಗಿರಿ ಕೋಟೆಯನ್ನು ರಕ್ಷಿಸುವ ಬದಲು, ಸರ್ಕಾರ ಕೈಕಟಟಿ ಕುಳಿತಿದೆ.  ಸ್ಥಳೀಯಾಡಳಿತ ಸಂಸ್ಥೆಗಳು, ಜಿಲ್ಲಾಡಳಿತ ಮತ್ತು ರಾಜ್ಯ ಸರ್ಕಾರ ಅನಧಿಕೃತ ಮನ್ಣುಸಾಗಾಟ ದಂಧೆಕೋರರ ಬೆಂಬಲಕ್ಕೆ ನಿಂತಿದೆ. ಚಂದ್ರಗಿರಿ ಕೋಟೆಗೆ ಅಪಾಯವಾಗುವ ರೀತಿಯಲ್ಲಿ ನೂರಾರು ಲೋಡ್ ಮಣ್ಣು ಸಾಗಿಸಲಾಗುತ್ತಿದೆ. ಕೂಗಳತೆ ದೂರದಲ್ಲಿರುವ ಕಳನಾಡು ಗ್ರಾಮ ಕಚೇರಿ ಅಧಿಕಾರಿಗಳು, ವ್ಯಾಪಕ ಕಳ್ಳಸಾಗಣೆ ನಡೆಯುತ್ತಿದ್ದರೂ ಮೌನಪಾಲಿಸಿರುವುದು ಸಂಶಯಕ್ಕೆ ಕಾರಣವಾಗಿರುವುದಾಗಿ ಅಶ್ವಿನಿ ಆರೋಪಿಸಿದ್ದಾರೆ. 

ಬಿಜೆಪಿ ಕಾಸರಗೋಡು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್.ಬಾಬುರಾಜ್, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಕೆ.ಟಿ. ಪುರುಷೋತ್ತಮನ್, ಜಿಲ್ಲಾ ಸಮಿತಿ ಸದಸ್ಯ ಶ್ರೀನಿವಾಸನ್ ಕೀಜೂರು,ಉದುಮ ಮಂಡಲ ಉಪಾಧ್ಯಕ್ಷ ಸದಾಶಿವನ್ ಮಣಿಯಂಗಾನಂ, ಕಾರ್ಯದರ್ಶಿ ಸೌಮ್ಯ ಪದ್ಮನಾಭನ್, ಕೋಶಾಧಿಕಾರಿ ರತೀಶ್ ವಿ.ಎ, ಚೆಮ್ಮನಾಡು ಪಶ್ಚಿಮ ಕ್ಷೇತ್ರ ಅಧ್ಯಕ್ಷ ರಾಜೇಶ್ ಕೈಂದಾರ್, ಚೆಮ್ನಾಡ್ ಪಶ್ಚಿಮ ಕ್ಷೇತ್ರ ಸಮಿತಿ ಸದಸ್ಯರಾದ ಪ್ರಮೋದ್ ಕೀಯೂರು, ಹರೀಶ್ ಪಲ್ಲಿಪುರಂ  ಎಂ.ಎಲ್. ಅಶ್ವಿನಿ ಜತೆಗಿದ್ದರು.     



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries