ಶ್ರೀನಗರ: ಪೊಲೀಸರ ಮೇಲೆಯೇ ಹಲ್ಲೆ ನಡೆಸಿ ಜಮ್ಮು ಮತ್ತು ಕಾಶ್ಮೀರದ ಬಾಲಾಪರಾಧಿ ಗೃಹದಿಂದ ಮೂವರು ಪಾಕಿಸ್ತಾನಿ ಕೈದಿಗಳು ಪರಾರಿಯಾಗಿರುವ ಘಟನೆ ನಡೆದಿದೆ.
ಇಬ್ಬರು ಪಾಕಿಸ್ತಾನಿಗಳು ಸೇರಿ ಮೂವರು ಕೈದಿಗಳು ಜೈಲಿಂದ ಓಡಿ ಹೋಗಿದ್ದು, ಘಟನೆಯಲ್ಲಿ ಇಬ್ಬರು ಪೊಲೀಸರಿಗೆ ಗಾಯಗಳಾಗಿವೆ ಎಂದು ತಿಳಿದುಬಂದಿದೆ.
ಮೂಲಗಳ ಪ್ರಕಾರ ಸಂಜೆ 5.05ರ ಸುಮಾರಿಗೆ ಜಮ್ಮುವಿನ ಆರ್ಎಸ್ ಪುರದಲ್ಲಿರುವ ಜೈಲಿನಲ್ಲಿ ನಿಯೋಜಿಸಲಾಗಿದ್ದ ಪೊಲೀಸರ ಮೇಲೆ ದಾಳಿ ಮಾಡಿ ಮೂವರು ಕೈದಿಗಳು ಕಸ್ಟಡಿಯಿಂದ ತಪ್ಪಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ತಪ್ಪಿಸಿಕೊಂಡ ಕೈದಿಗಳನ್ನು ಅಹ್ಸಾನ್ ಅನ್ವರ್ ಮತ್ತು ಮೊಹಮ್ಮದ್ ಸನಾವುಲ್ಲಾ (ಇಬ್ಬರೂ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ನಿವಾಸಿಗಳು) ಮತ್ತು ಜಮ್ಮುವಿನ ನಿವಾಸಿ ಕರಣ್‌ಜಿತ್ ಸಿಂಗ್ ಅಲಿಯಾಸ್ ಗುಗ್ಗಾ ಎಂದು ಗುರುತಿಸಲಾಗಿದೆ.

