HEALTH TIPS

ಇರಾಕ್‌: ಸದ್ದಾಂ ಆಡಳಿತದಲ್ಲಿ ಉನ್ನತ ಭದ್ರತಾ ಅಧಿಕಾರಿಯಾಗಿದ್ದ ಸಾದೌನ್‌ಗೆ ಗಲ್ಲು

ಬಾಗ್ದಾದ್‌: 1980ರಲ್ಲಿ ನಡೆದಿದ್ದ ಶಿಯಾ ಧರ್ಮಗುರು ಮೊಹಮ್ಮದ್ ಬಕೀರ್ ಅಲ್-ಸದರ್ ಹತ್ಯೆಗೆ ಸಂಬಂಧಿಸಿದಂತೆ ಸದ್ದಾಂ ಹುಸೇನ್‌ ಆಡಳಿತ ಅವಧಿಯಲ್ಲಿದ್ದ ಉನ್ನತ ಭದ್ರತಾ ಅಧಿಕಾರಿಯನ್ನು ಇರಾಕ್‌ನಲ್ಲಿ ಗಲ್ಲಿಗೇರಿಸಲಾಗಿದೆ. 

ಸದ್ದಾಂ ಆಡಳಿತದಲ್ಲಿ ಮೇಜರ್ ಜನರಲ್‌ ಆಗಿದ್ದ ಸಾದೌನ್ ಸಬ್ರಿ ಅಲ್-ಖೈಸಿಯನ್ನು ಕಳೆದ ವರ್ಷ ಬಂಧಿಸಲಾಗಿತ್ತು.

ಮಾನವೀಯತೆ ವಿರುದ್ಧದ ಗಂಭೀರ ಅಪರಾಧಗಳಿಗಾಗಿ ಅವರನ್ನು ಗಲ್ಲಿಗೇರಿಸಲಾಗಿದೆ ಎಂದು ಇರಾಕ್‌ನ ರಾಷ್ಟ್ರೀಯ ಭದ್ರತಾ ಸಂಸ್ಥೆ ಹೇಳಿದೆ. ಆದರೆ, ಗಲ್ಲು ಶಿಕ್ಷೆ ಜಾರಿ ಮಾಡಿದ್ದು ಯಾವತ್ತು ಎನ್ನುವುದನ್ನು ಸಂಸ್ಥೆ ಬಹಿರಂಗಪಡಿಸಿಲ್ಲ.

ಅಲ್-ಸದರ್, ಇರಾಕ್‌ ಸರ್ಕಾರ ಮತ್ತು ಸದ್ದಾಂನ ಪ್ರಮುಖ ವಿಮರ್ಶಕರಾಗಿದ್ದರು. 1979ರಲ್ಲಿ ಇರಾನ್‌ನಲ್ಲಿ ನಡೆದ ಇಸ್ಲಾಮಿಕ್ ಕ್ರಾಂತಿಯ ನಂತರ ಇರಾಕ್‌ನಲ್ಲಿ ಶಿಯಾ ನೇತೃತ್ವದ ದಂಗೆಗೆ ಅಲ್-ಸದರ್ ಕಾರಣರಾಗಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries