HEALTH TIPS

ಮಲೆಯಾಳಂ ಭಾಷಾ ಮಸೂದೆ: ಕುಂಬಳೆಯಲ್ಲಿ ಬೃಹತ್ ಪ್ರತಿಭಟನೆಗೆ ತೀರ್ಮಾನ

ಕುಂಬಳೆ: ಕೇರಳ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ನೂತನ ಮಲೆಯಾಳಂ ಮಸೂದೆ ಭಾಷಾ ಅಲ್ಪಸಂಖ್ಯಾತ ಗಡಿನಾಡಿನ ಕನ್ನಡ ಭಾಷೆ, ಸಂಸ್ಕøತಿಗೆ ವ್ಯಾಪಕ ಪ್ರತಿರೋಧ ಉಂಟುಮಾಡುವ ಸಾಧ್ಯತೆಯ ಹಿನ್ನೆಲೆಯಲ್ಲಿ ಅಧಿಕೃತರಿಗೆ ಬಿಸಿ ಮುಟ್ಟಿಸಿ ಸಂವಿಧಾನ ಬದ್ಧ ನ್ಯಾಯಯುತ ಅವಕಾಶಗಳಿಗೆ ಅನುವು ಮಾಡಿಕೊಡುವಂತೆ ಕೇರಳ ರಾಜ್ಯ ಸರ್ಕಾರವನ್ನು ಕಣ್ತೆರೆಸಲು ಕನ್ನಡಿಗರೆಲ್ಲರೂ ಒಗ್ಗಟ್ಟಿನಿಂದ ವಿವಿಧ ಆಯಾಮಗಳಲ್ಲಿ ಪ್ರತಿಭಟಿಸಲು ತೀರ್ಮಾನಿಸಿದ್ದು, ಫೆ.28 ರಂದು ಕುಂಬಳೆ ಪೆಟೆಯಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ. 


ಕುಂಬಳೆ ಅನಂತ ಪೈ ಸಭಾ ಭವನದಲ್ಲಿ ಮಂಗಳವಾರ ಸಂಜೆ ನಡೆದ ಸಮಾಲೋಚನಾ ಸಭೆಯಲ್ಲಿ ಕನ್ನಡ ಹೋರಾಟ ಸಮಿತಿ ಕಾರ್ಯದರ್ಶಿ ಭಾಸ್ಕರ ಕೆ. ಮಾಹಿತಿ ನೀಡಿ ಮಾತನಾಡಿದರು. ಪ್ರಮುಖರಾದ ಟಿ.ಶಂಕರನಾರಾಯಣ ಭಟ್ ತೆಕ್ಕೇಕೆರೆ, ಮಹಾಲಿಂಗೇಶ್ವರ ಭಟ್ ಎಂ.ವಿ., ಡಾ.ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ, ವಿಶಾಲಾಕ್ಷ ಪುತ್ರಕಳ, ಲಕ್ಷ್ಮಣ ಪ್ರಭು ಕುಂಬ್ಳೆ,  ಸ್ನೇಹಲತಾ ದಿವಾಕರ, ಶಶಿಕಲಾ ಟೀಚರ್ ಕುಂಬ್ಳೆ, ಸುಜನಾ ಶಾಂತಿಪಳ್ಳ, ಉಮೇಶ್ ಮಾಸ್ತರ್ ಕೆ., ರವಿ.ನಾಯ್ಕಾಪು, ಎಸ್.ಕೇಶವ ನಾಯಕ್, ಪುರುಷೋತ್ತಮ ಭಟ್.ಕೆ. ಮೊದಲಾದವರು ಉಪಸ್ಥಿತರಿದ್ದು ಸಲಹೆ ಸೂಚನೆಗಳನ್ನು ನೀಡಿದರು. 

ಫೆ.28 ರಂದು ಬೆಳಿಗ್ಗೆ 10 ರಿಂದ 12ರ ವರೆಗೆ ಕುಂಬಳೆ ಪೇಟೆಯಲ್ಲಿ ಬೃಹತ್ ಪ್ರತಿಭಟನೆಗೆ ಸಿದ್ಧತೆ ನಡೆಸಲಾಯಿತು. ಪ್ರಮುಖ ಸಾಮಾಜಿಕ, ಸಾಂಸ್ಕøತಿಕ, ರಾಜಕೀಯ ಸಹಿತ ವಿವಿಧ ವಲಯಗಳ ಪ್ರಮುಖರನ್ನು ಒಳಗೊಳಿಸಿ ಹಕ್ಕೊತ್ತಾಯ ಪ್ರತಿಭಟನೆ ನಡೆಯಲಿದೆ.    


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries