ಬದಿಯಡ್ಕ : ಆಸೇತು ಹಿಮಾಚಲದಿಂದ ಹಿಂದು ಸಾಗರದವರೆಗಿನ ಭೂಪ್ರದೇಶ ಹಿಂದು ರಾಷ್ಟ್ರವಾಗಿದೆ. ಅದೂ ಎಲ್ಲರನ್ನೂ ಎಲ್ಲಾ ಸಮಾಜವನ್ನೂ ಮತಪಂಥಗಳನ್ನೂ ಒಳಗೊಂಡ ರಾಷ್ಟ್ರವಾಗಿದೆ. ಆ ಭೂಪ್ರದೇಶದಲ್ಲಿ ವಾಸಿಸುವವರು ಎಲ್ಲರೂ ಹಿಂದುಗಳೇ ಆಗಿದ್ದಾರೆ ಎಂದು ವೀರ ಸಾವರ್ಕರ್ ಬಹಳ ಸುಂದರವಾಗಿ ಹೇಳಿದ್ದರು ಎಂದು ಖ್ಯಾತ ಯುವ ಚಿಂತಕ, ವಾಗ್ಮಿ, ಅಖಿಲ ಭಾರತ ಸಾಹಿತ್ಯ ಪರಿಷತ್‍ನ ದ.ಕ. ಕಾರ್ಯದರ್ಶಿ ನ್ಯಾಯವಾದಿ ಲತೇಶ್ ಬಾಕ್ರಬೈಲು ಬೊಟ್ಟು ಮಾಡಿದ್ದಾರೆ.
ಮಂಥನ ಬದಿಯಡ್ಕ ಇದರ ಆಶ್ರಯದಲ್ಲಿ ಸಂಸ್ಕøತಿ ಭವನದಲ್ಲಿ ಜರಗಿದ "ಭಾರತದ ಸಂಸ್ಕೃತಿಯ ವಿಕಾಸದಲ್ಲಿ ಯುವಜನರ ಪಾತ್ರ" ಎಂಬ ವಿಷಯದ ಕುರಿತಾಗಿ ನಡೆದ ಚಿಂತನ ಕಾರ್ಯಕ್ರಮದಲ್ಲಿ ಉಪಾನ್ಯಾಸ ನೀಡಿ ಅವರು ಮಾತನಾಡುತ್ತಿದ್ದರು.
'ನೂರಾರು ದೇವರುಗಳನ್ನು ನೂಕಾಚೆ. ಭಾರತಾಂಬೆಯೇ ನಮಗೆ ದೇವಿ. ಪೂಜಿಸೋಣ ಬಾರ' ಎಂದು ಕುವೆಂಪುರವರು ಸ್ಪಷ್ಟವಾಗಿ ಹೇಳಿದ್ದಾರೆ. ಈ ಪವಿತ್ರ ಮಣ್ಣಲ್ಲಿ ಹುಟ್ಟಿದ ಎಲ್ಲರೂ ಭಾರತಾಂಬೆಯನ್ನು ಪೂಜಿಸಬೇಕು. ನಮಗೆ ನಮ್ಮ ರಾಷ್ಟ್ರವೇ ಪೂಜ್ಯ ಸ್ಥಾನ ಎನ್ನುವ ವಿಚಾರವನ್ನು ಅವರು ಒತ್ತಿ ಹೇಳಿದ್ದಾರೆ. ಭಾರತದಲ್ಲಿ ಕುಟುಂಬ ವ್ಯವಸ್ಥೆಯೇ ಸಮಾಜದ ಮುಖ್ಯ ಆಧಾರ ಸ್ತಂಭ. ಆದೂ ವಿವಿಧತೆಯಲ್ಲಿ ಏಕತೆಯನ್ನು ಸಾರುವ ಸಂಸ್ಕಾರ, ಮಾತೆಯನ್ನು ದೇವರಂತೆ ಕಾಣುವ ಶ್ರೇಷ್ಟ ಸಂಸ್ಕಾರವಾಗಿದೆ ಎಂದವರು
ಹಿರಿಯ ನ್ಯಾಯವಾದಿ ಶ್ರೀಕೃಷ್ಣ ಭಟ್ ಅಧ್ಯಕ್ಷತೆ ವಹಿಸಿದ್ದರು. ರಾ. ಸ್ವ. ಸೇ. ಸಂಘದ ಬದಿಯಡ್ಕ ಖಂಡ ಸಂಘಚಾಲಕ ರಮೇಶ್ ಕಳೇರಿ, ಯುವ ನ್ಯಾಯವಾದಿ ಭರತ್ ಕಾರಂತ್ ಉಪಸ್ಥಿತರಿದ್ದರು. ಕುಮಾರಿ ತಸ್ಮೈ ವೈಯ್ಯಕ್ತಿಕ ಗೀತೆ ಹಾಡಿದರು. ಗಾಯತ್ರಿ ಟೀಚರ್ ರತ್ನಗಿರಿ ಕೃತಿಸ್ಮರಣಿಕೆ ನೀಡಿದರು. ಭರತ್ ಕಾರಂತ್ ಸ್ವಾಗತಿಸಿ, ಯುವ ನ್ಯಾಯವಾದಿ ಅಕ್ಷತಾ ಇಕ್ಕೇರಿ ವಂದಿಸಿದರು. ಯುವ ಉಪನ್ಯಾಸಕಿ ತೇಜಶ್ರೀ ಏಣಿಯರ್ಪು ನಿರೂಪಿಸಿದರು.

.jpg)
.jpg)
