HEALTH TIPS

ಇರಾನ್ ಗುರಿಯಾಗಿಸಿ ಅಮೆರಿಕ ವಾಯುದಾಳಿ? ಮಧ್ಯಪ್ರಾಚ್ಯದಲ್ಲಿ ವಾಯು ಹಾಗೂ ನೌಕಾಪಡೆ ಶಕ್ತಿಯನ್ನು ಬಲಪಡಿಸುತ್ತಿರು ಟ್ರಂಪ್

ಟೆಹ್ರಾನ್: ವಿವಾದಿತ ಪರಮಾಣು ಕಾರ್ಯಕ್ರಮ ಕೈಬಿಟ್ಟು ತನ್ನ ಜತೆ ಹೊಸದಾಗಿ ಒಪ್ಪಂದಕ್ಕೆ ಮುಂದಾಗದಿದ್ದರೆ ಕಠಿಣ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಇರಾನ್‌ ಗೆ ಎಚ್ಚರಿಸುತ್ತಲೇ ಬಂದಿರುವ ಅಮೆರಿಕ ಈಗ ಮಧ್ಯಪ್ರಾಚ್ಯದಲ್ಲಿ ತನ್ನ ವಾಯು ಹಾಗೂ ನೌಕಾಪಡೆ ಶಕ್ತಿಯನ್ನು ಬಲಪಡಿಸುತ್ತಿದೆ.

ಎಫ್-35, ಎಫ್-22 ಮತ್ತು ಎಫ್-16 ಸೇರಿದಂತೆ ಒಟ್ಟು 50ಕ್ಕೂ ಹೆಚ್ಚು ಯುದ್ಧ ವಿಮಾನಗಳನ್ನು ಅಮೆರಿಕವು ಪಶ್ಚಿಮ ಏಷ್ಯಾದತ್ತ ರವಾನಿಸಿವೆ ಎಂದು ಅಮೆರಿಕದ ಮಾಧ್ಯಮಗಳು ವರದಿ ಮಾಡಿವೆ. ಹೀಗಾಗಿ, ಮಧ್ಯಪ್ರಾಚ್ಯವು ಮತ್ತೆ ವಲಯವಾಗಿ ಸೂಕ್ಷ್ಮ ಬದಲಾಗಿದ್ದು, ಯುದ್ಧಭೀತಿಯನ್ನು ಸೃಷ್ಟಿಸಿದೆ.

ಪರಮಾಣು ಕಾಠ್ಯಕ್ರಮ ವಿಚಾರದಲ್ಲಿ ಅಮೆರಿಕದ ಅಧಿ ಕಾರಿಗಳು ಜಿನೇವಾದಲ್ಲಿ ಇರಾನ್ ಅಧಿಕಾರಿಗಳ ಜತೆ ಮಂಗಳವಾರ ಮಾತುಕತೆ ನಡೆಸಿದ್ದರೂ ಸದ್ಯಕ್ಕೆ ಯಾವುದೇ ಪ್ರಗತಿ ಕಂಡುಬಂದಿಲ್ಲ. ಹೀಗಾಗಿ ಯುದ್ಧದ ಸನ್ನಿವೇಶ ಎದುರಾಗಬಹುದು ಎಂಬ ಆತಂಕ ಮನೆಮಾಡಿದೆ.

"ಇದೇ ಫೆಬ್ರವರಿ ಆರಂಭದಲ್ಲಿ ಮಸ್ಕತ್‌ನಲ್ಲಿ ನಡೆದ ಮೊದಲ ಸುತ್ತಿನ ಮಾತುಕತೆಗಿಂತಲೂ ಜಿನೇವಾದಲ್ಲಿ ನಡೆದ ಮಾತುಕತೆ ರಚನಾತ್ಮಕವಾಗಿತ್ತು. ಆದರೆ ಇನ್ನೂ ಅನೇಕ ಸಂಗತಿಗಳ ಬಗ್ಗೆ ಸ್ಪಷ್ಟತೆ ಇಲ್ಲದ ಕಾರಣ ಚರ್ಚೆ ಮುಂದುವರಿದಿದೆ," ಎಂದು ಇರಾನ್ ವಿದೇಶಾಂಗ ಸಚಿವ ಸೈಯದ್ ಅಬ್ಬಾಸ್ ಅರಾಗ್ನಿ ಹೇಳಿದ್ದಾರೆಂದು ವರದಿ ತಿಳಿಸಿದೆ. ಈ ಮಧ್ಯೆ, ಇರಾನ್‌ ಟೆಹ್ರಾನ್ ಪ್ರಾಂತ್ಯದ ಪರಾಂಡ್ ನಗರದ ಕಟ್ಟಡವೊಂದರ ಮೇಲೆ ದಟ್ಟವಾದ ಹೊಗೆ ಏಳುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ಈ ಪ್ರದೇಶದ ಸನಿಹ ಸೇನಾ ನೆಲೆಗಳಿವೆ. ಇದು ಸ್ಫೋಟವೇ ಅಥವಾ ದಾಳಿಯೇ ಎಂಬುದು ಖಚಿತಪಟ್ಟಿಲ್ಲ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries