HEALTH TIPS

'ಅಂಗಳದಲ್ಲಿ ಮೀನಿನ ಕೆರೆ': ಭಂಡಾರಪುರದ ಚಾತಂಗೈ ಕೆರೆಯಲ್ಲಿ ಯೋಜನೆಗೆ ಚಾಲನೆ

ಕಾಸರಗೋಡು: ನೀಲೇಶ್ವರ ನಗರಸಭೆಯ 2025-26 ವಾರ್ಷಿಕ ಯೋಜನೆಯ ಅಂಗವಾಗಿ 'ಅಂಗಳದಲ್ಲಿ ಮೀನಿನ ಕೆರೆ' ಯೋಜನೆಯನ್ನು ಭಂಡಾರಪುರದ ಚಾತಂಗೈ ಕೆರೆಯಲ್ಲಿ ಆರಂಭಿಸಲಾಯಿತು.  ಯೋಜನೆಯನ್ವಯ ಕೆರೆಗೆ ಮೀನಿನ ಮರಿಗಳನ್ನು ಅಳವಡಿಸುವ ಸಮಾರಂಭವನ್ನು ನಗರಸಭಾ ಅಧ್ಯಕ್ಷ ಪಿ.ಪಿ. ಮುಹಮ್ಮದ್ ರಫಿ ಉದ್ಘಾಟಿಸಿ ಮಾತನಾಡಿ,  ಆಯಾ ಪ್ರದೇಶದ ನೀರಿನ ಸಂಪನ್ಮೂಲಗಳನ್ನು ಬಳಸಿಕೊಂಡು ಮೀನು ಉತ್ಪಾದನೆಯನ್ನು ಹೆಚ್ಚಿಸುವುದು ಮತ್ತು ಜನರಿಗೆ ಗುಣಮಟ್ಟದ ಮೀನುಗಳನ್ನು ಒದಗಿಸುವುದು ನಗರಸಭೆ ಜಾರಿಗೆ ತಂದಿರುವ ಯೋಜನೆಯ ಉದ್ದೇಶವಾಗಿದೆ. ಮುಮದಿನ ದಿನಗಳಲ್ಲಿ ಯೋಜನೆಯನ್ನು ಮತ್ತಷ್ಟುಪ್ರದೇಶಕ್ಕೆ ವಿಸ್ತರಿಸಲಾಗುವುದು ಎಂದುತಿಳಿಸಿದರು.  

ವಾರ್ಡ್ ಕೌನ್ಸಿಲರ್ ಪಿ.ಯು. ರಾಮಕೃಷ್ಣನ್ ಅಧ್ಯಕ್ಷತೆ ವಹಿಸಿದ್ದರು. ಕೆ.ವಿ. ವೇಣುಗೋಪಾಲ್, ವಿಜೇಶ್ ಮೊದಲಾದವರು ಉಪಸ್ಥಿತರಿದ್ದರು. ನಗರಸಭೆಯ ವಿವಿಧ ಪ್ರದೇಶಗಳಲ್ಲಿ ಯೋಜನೆ ಜಾರಿಗೊಳಿಸಲಾಗಿದ್ದು, ಕೆಲಸಕಾರ್ಯಗಳು ಪ್ರಗತಿಯಲ್ಲಿರುವುದಾಘಿ ಅಧಿಕಾರಿಗಳು ತಿಳಿಸಿದ್ದಾರೆ. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries