ಚಿನ್ನ ಕಳವಿನ ಎರಡನೇ ಪ್ರಕರಣದಲ್ಲಿ ಕೇರಳದ ವಿಜಿಲೆನ್ಸ್ ನ್ಯಾಯಾಲಯವು ಕಾನೂನಿನ್ವಯ ಜಾಮೀನು ಮಂಜೂರು ಮಾಡಿದೆ.
ಇದೀಗ ಎರಡೂ ಪ್ರಕರಣಗಳಲ್ಲಿ ಜಾಮೀನು ದೊರೆತಿರುವುದರಿಂದ ಜೈಲಿನಿಂದ ಪೋಟಿ ಬಿಡುಗಡೆಯ ಹಾದಿ ಸುಗಮವಾಗಿದೆ.
ಶ್ರೀಕೋವಿಲ್ ಬಾಗಿಲು ಚೌಕಟ್ಟಿನ ಚಿನ್ನ ಕಳವು ಪ್ರಕರಣದಲ್ಲಿ ಜನವರಿ 21ರಂದು ಪೋಟಿ ಅವರಿಗೆ ಜಾಮೀನು ದೊರೆತಿತ್ತು.
ಪ್ರಕರಣ ದಾಖಲಾಗಿ 90 ದಿನ ಕಳೆದರೂ ಕಾನೂನಿನ್ವಯ ವಿಶೇಷ ತನಿಖಾ ತಂಡ (ಎಸ್‌ಐಟಿ) ದೋಷಾರೋಪ ಪಟ್ಟಿ ಸಲ್ಲಿಸದ ಕಾರಣ ಜಾಮೀನು ನೀಡಬೇಕು ಎಂದು ಪೋಟಿ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು.
ಎಸ್‌ಐಟಿ ಪರ ಪಬ್ಲಿಕ್ ಪ್ರಾಸಿಕ್ಯೂಟರ್ ಸಿಜು ರಾಜನ್, ಪೋಟಿಗೆ ಜಾಮೀನು ನೀಡಬಾರದು ಎಂದು ವಾದ ಮಂಡಿಸಿದ್ದರು.
ಎರಡು ಪ್ರಕರಣಕ್ಕೆ ಸಂಬಂಧಿಸಿ ಎಸ್‌ಐಟಿಯು ಈವರೆಗೆ 12 ಮಂದಿಯನ್ನು ಬಂಧಿಸಿದೆ.

