HEALTH TIPS

ಎಪ್‌ಸ್ಟೀನ್‌ ಫೈಲ್ಸ್‌: ಪ್ರಧಾನಿ ಮೋದಿ ಸ್ಪಷ್ಟನೆಗೆ ಕಾಂಗ್ರೆಸ್ ಆಗ್ರಹ

ನವದೆಹಲಿ: 'ಅಮೆರಿಕದಲ್ಲಿ ಬಿಡುಗಡೆ ಮಾಡಿರುವ 'ಎಪ್‌ಸ್ಟೈನ್‌ ಫೈಲ್ಸ್‌'ನಲ್ಲಿ ತಮ್ಮ ಹೆಸರು ಉಲ್ಲೇಖ ಆಗಿರುವ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರ ನೀಡಬೇಕು. ಇದರಿಂದ ಅವರು ಆರೋಪ ಮುಕ್ತರಾಗಿ ಹೊರಬರಬೇಕು' ಎಂದು ಕಾಂಗ್ರೆಸ್ ಆಗ್ರಹಿಸಿದೆ.

ಎಐಸಿಸಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್‌ ಅವರು ಭಾನುವಾರ 'ಎಕ್ಸ್‌'ನಲ್ಲಿ ಈ ಬಗ್ಗೆ ಸ್ಪಷ್ಟನೆ ಬಯಸಿದ್ದಾರೆ.

'ವಿಕೃತ ವ್ಯಕ್ತಿಗಳು ಪ್ರಧಾನಿ ಮೋದಿ ಅವರ ಸಂಪರ್ಕಕ್ಕೆ ಬಂದಿದ್ದರು ಎಂಬ ಆಘಾತಕಾರಿ ಅಂಶವನ್ನು ಜೆಫ್ರಿ ಎಪ್‌ಸ್ಟೈನ್‌ನ ಇತ್ತೀಚಿನ ದಾಖಲೆಗಳು ಹೇಳಿವೆ. ಇದೊಂದು ಎಚ್ಚರಿಕೆ ಗಂಟೆಯಾಗಿದೆ. ವಿದೇಶಾಂಗ ವಿಚಾರಗಳಲ್ಲಿ ಎಪ್‌ಸ್ಟೈನ್‌ ಯಾವ ಮಟ್ಟಿಗೆ ಕೈಚಳಕ ಹೊಂದಿದ್ದ' ಎಂದು ವೇಣುಗೋಪಾಲ್ ಪ್ರಶ್ನಿಸಿದ್ದಾರೆ.

'ಎಪ್‌ಸ್ಟೈನ್‌ನನ್ನು ಅವರೇ (ಮೋದಿ) ಭೇಟಿಯಾಗಿದ್ದರೆ? ಅಥವಾ ಆತನ ಭೇಟಿಗೆ ಯಾರನ್ನಾದರೂ ಕಳಿಸಿದ್ದರೆ? ಆತನ ಜೊತೆ ಏನು ಸಂಭಾಷಣೆ ನಡೆದಿತ್ತು' ಎಂಬುದನ್ನು ಬಹಿರಂಗ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

'ಪ್ರಧಾನಿ ಮೋದಿ ಅವರು ಕಳಂಕಿತ ಎಪ್‌ಸ್ಟೈನ್‌ ತಾಳಕ್ಕೆ ತಕ್ಕಂತೆ ಕುಣಿದಿದ್ದರು, ಹಾಡಿದ್ದರು. ಆನಂತರ ಭಾರತದ ವಿದೇಶಾಂಗ ನೀತಿಯಲ್ಲಿ ಗಣನೀಯ ಬದಲಾವಣೆ ಆಗಿದೆ. ಜಾಗತಿಕ ಶಕ್ತಿಗಳಿಂದ ಲಾಭ ಪಡೆಯುವ ಉದ್ದೇಶ ಇದರ ಹಿಂದಿತ್ತು. ದೇಶದ ಜನರು ಇದಕ್ಕೆಲ್ಲಾ ಉತ್ತರ ಬಯಸುತ್ತಿದ್ದಾರೆ' ಎಂದಿದ್ದಾರೆ.

ಕಾಂಗ್ರೆಸ್‌ನಿಂದ ಸುಳ್ಳು ಪ್ರಚಾರ- ಬಿಜೆಪಿ: ಕಾಂಗ್ರೆಸ್‌ನ ಆರೋಪಗಳಿಗೆ ಶನಿವಾರವೇ ಉತ್ತರ ನೀಡಿದ್ದ ಬಿಜೆಪಿ, 'ಪ್ರಧಾನಿ ಬಗ್ಗೆ ಕಾಂಗ್ರೆಸ್‌ ಸುಳ್ಳು ಹರಡುತ್ತಿದೆ. ತನಿಖಾ ದಾಖಲೆಗಳ ತಿರುಚಿದ ಸಾಮಾನ್ಯ ಇ-ಮೇಲ್‌ ತುಣುಕುಗಳನ್ನು ರಾಜಕೀಯಕ್ಕೆ ಬಳಸಲಾಗುತ್ತಿದೆ. ಇಬ್ಬರ ನಡುವೆ ಪ್ರತ್ಯಕ್ಷ ಅಥವಾ ಪರೋಕ್ಷ ಸಮಾಲೋಚನೆ ನಡೆದಿರುವ ಯಾವುದೇ ಸಾಕ್ಷ್ಯಗಳಿಲ್ಲ' ಎಂದು ಸ್ಪಷ್ಟಪಡಿಸಿತ್ತು.

ಭಾರತೀಯ ವಿದೇಶಾಂಗ ಇಲಾಖೆಯೂ ಶನಿವಾರ ನೀಡಿದ್ದ ಹೇಳಿಕೆಯಲ್ಲಿ ಎಪ್‌ಸ್ಟೈನ್‌ ಫೈಲ್ಸ್‌ನಲ್ಲಿ ಮೋದಿ ಅವರ ಪ್ರಸ್ತಾಪವನ್ನು ಸ್ಪಷ್ಟವಾಗಿ ನಿರಾಕರಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries