HEALTH TIPS

ರೈಲ್ವೇಯ ಸ್ಥಳದಿಂದ ಮರ ಕಡಿದು ಸಾಗಾಟ: ನಾಲ್ಕು ಮಂದಿ ಸೆರೆ

 ಉಪ್ಪಳ: ರೈಲ್ವೇ ಇಲಾಖೆಯ ಸ್ವಾಧೀನದಲ್ಲಿರುವ  ಸ್ಥಳದಿಂದ ತೇಗು ಸಹಿತ 11 ಮರಗಳನ್ನು ಕಡಿದು ಸಾಗಿಸಿದ ಪ್ರಕರಣದಲ್ಲಿ ಉಪ್ಪಳ ನಿವಾಸಿಗಳಾದ ನಾಲ್ಕು ಮಂದಿಯನ್ನು ಬಂಧಿಸಲಾಗಿದೆ. ರೋಶನ್ ಸಮೀರ್, ದಾದಪೀರ್, ಅಬ್ದುಲ್ಲ ಕುಂಞಿ, ರಾಜೇಶ್ ಎಂಬಿವರನ್ನು ಆರ್‌ಪಿಎಫ್‌ನ ಮಂಗಳೂರು ಇನ್‌ಸ್ಪೆಕ್ಟರ್ ಮನೋಜ್ ಕುಮಾರ್‌ರ ನೇತೃತ್ವದಲ್ಲಿ ಸೆರೆಹಿಡಿಯಲಾಗಿದೆ. ಕಡಿದ  ಮರಗಳನ್ನು, ಅವುಗಳನ್ನು ಸಾಗಿಸಲು ಉಪಯೋಗಿಸಿದ ವಾಹನ ಹಾಗೂ ಮರ ಕತ್ತರಿಸಲು  ಬಳಸಿದ ಯಂತ್ರಗಳನ್ನು ಆರ್‌ಪಿಎಫ್ ವಶಪಡಿಸಿಕೊಂಡಿದೆ. ಉಪ್ಪಳ ರೈಲ್ವೇ ನಿಲ್ದಾಣದ ಅಧೀನತೆಯಲ್ಲಿರುವ ಮರಗಳನ್ನು ಕಡಿದು ಸಾಗಿಸಲಾಗಿತ್ತು.  ರೈಲ್ವೇಯ ಸ್ಥಳಕ್ಕೆ ಹೊಂದಿಕೊಂಡಿರುವ ಆರೋಪಿಗಳ ಸ್ಥಳದಿಂದ ಮರಗಳನ್ನು ಕಡಿಯುವ ಮರೆಯಲ್ಲಿ  ರೈಲ್ವೇಯ ಸ್ಥಳದಿಂದಲೂ ಮರಗಳನ್ನು ಕಡಿದು ಸಾಗಿಸಿರುವುದಾಗಿ ರೈಲ್ವೇ ಪೊಲೀಸರು ದಾಖಲಿಸಿಕೊಂಡ ಪ್ರಕರಣದಲ್ಲಿ ತಿಳಿಸಲಾಗಿದೆ. ಸಿಸಿ ಟಿವಿ ದೃಶ್ಯಗಳನ್ನು ಕೇಂದ್ರೀಕರಿಸಿ ನಡೆಸಿದ ತನಿಖೆಯಲ್ಲಿ ಆರೋಪಿಗಳನ್ನು ಸೆರೆಹಿಡಿಯಲು ತನಿಖಾ ತಂಡಕ್ಕೆ ಸಾಧ್ಯವಾಗಿದೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries