ಕಾಸರಗೋಡು: ಅಣಂಗೂರು ದಿವಂಗತ ಪುರೋಹಿತ ಕೊಗ್ಗು ಆಚಾರ್ಯ-ಗೌರಮ್ಮ ದಂಪತಿ ಪುತ್ರ ಕೆ. ಉಪೇಂದ್ರ ಆಚಾರ್ಯ (80)ಬುಧವಾರ ಮೊಗ್ರಾಲ್ ಪುತ್ತೂರು ಬೆದ್ರಡ್ಕದ ಉಜಿರೆಕೆರೆ ಬಳಿಯ ತಮ್ಮ ಸ್ವಗೃಹದಲ್ಲಿ ನಿಧನರಾದರು.
ಮಣಿಪಾಲ ಪವರ್ ಪ್ರೆಸ್‍ನಲ್ಲಿ ಮುದ್ರಣ ತಂತ್ರಜ್ಞರಾಗಿ ಕಾರ್ಯನಿರ್ವಹಿಸಿದ್ದ ಇವರು ಮಕ್ಕಳಿಗಾಗಿ ಇರುವ ಕಥೆ, ಚಿತ್ರಕಥೆ ಪುಸ್ತಕ, ಸಾಮಾನ್ಯ ಜ್ಞಾನಪುಸ್ತಕ,ಪಿ ಎಸ್ ಸಿ,ಸ್ಪರ್ಧಾತ್ಮಕ ಪರೀಕ್ಷೆ ಪುಸ್ತಕಗಳನ್ನು ಶಾಲೆ ಕಾಲೇಜು ಕಚೇರಿಗಳಿಗೆ ನಡೆದು ತೆರಳಿ ತಲುಪಿಸುವ ಮೂಲಕ ತಮ್ಮಪುಸ್ತಕ ಪ್ರೀತಿ ಮೆರೆದಿದ್ದರು. ನಿವೃತ್ತಿಯ ನಂತರ ಇವರು ಕಾಸರಗೋಡಿನ ನಾಯಕ್ಸ್ ರಸ್ತೆಯ ಸಹಕಾರಿ ಮುದ್ರಣಾಲಯದಲ್ಲಿ ಕೆಲಸ ಮಾಡುತ್ತಿದ್ದರು. ಅವರು ಪುತ್ರನನ್ನು ಅಗಲಿದ್ದಾರೆ.


